Friday, 22nd November 2024

Tirupati Temple: ಕರ್ನಾಟಕದ 1000 ಮಂದಿಗೆ ತಿರುಪತಿಯಲ್ಲಿ ನಿತ್ಯ ದರ್ಶನ ವ್ಯವಸ್ಥೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ತಿರುಪತಿ ಶ್ರೀ ಶ್ರೀನಿವಾಸ ದೇವರ ದೇವಸ್ಥಾನಕ್ಕೆ (Tirupati Temple) ತೆರಳುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ನಾಟಕದ (Karnataka) 1000 ಭಕ್ತರಿಗೆ ಪ್ರತಿದಿನ ದರ್ಶನದ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಿಳಿಸಿದ್ದಾರೆ.

ಕರ್ನಾಟಕದಿಂದ ತೆರಳುವ ಭಕ್ತಗಣ ಏರಿಕೆ ಆಗಿದ್ದರಿಂದ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಈ ಕುರಿತು ಮನವಿ ಪತ್ರ ಬರೆಯಲಾಗಿದೆ. ರಾಜ್ಯದಿಂದ ತೆರಳುವವರಿಗೆ ಪ್ರತಿನಿತ್ಯ ಸಾರಿಗೆ ವ್ಯವಸ್ಥೆ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ (KSTDC) ದಿಂದ ನಿತ್ಯ ನೂರಾರು ಪ್ರಯಾಣಿಕರು ತಿರುಪತಿಗೆ ತೆರಳಿ ದರ್ಶನ ಪಡೆಯುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ 250 ಭಕ್ತರಿಗೆ ನೇರ ದರ್ಶನಕ್ಕೆ ತಿರುಪತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದೀಗ KSTDCಯಿಂದ ತಿರುಪತಿಗೆ ಪ್ರತಿನಿತ್ಯ ಬರುವ 1000 ಕರ್ನಾಟಕದ ಭಕ್ತರಿಗೆ ನೇರ ದೇವರ ದರ್ಶನಕ್ಕೆ ಅವಕಾಶ ನೀಡುವಂತೆ ಸಿಎಂ ಚಂದ್ರಬಾಬು ನಾಯ್ಡು ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕರ್ನಾಟಕದ ಜನರಿಂದ ಡಿಮ್ಯಾಂಡ್ ಹೆಚ್ಚಾಗಿದೆ. ಈ ಕಾರಣದಿಂದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಪತ್ರ ಬರೆದು ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ. ಕೆಎಸ್ ಟಿಡಿಸಿಯಿಂದ ಪ್ರತಿನಿತ್ಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 250 ನೀಡುತ್ತಿದ್ದು, ಅದನ್ನೂ ಈಗ 1000ಗೆ ಟಿಕೆಟ್ ನೀಡಲು ಮನವಿ ಮಾಡಿಕೊಂಡಿದ್ದಾರೆ. ಈ ಟಿಕೆಟ್ ಪಡೆದವರೆಲ್ಲರಿಗೂ ಟಿಟಿಡಿಯಲ್ಲಿ ನೇರ ದರ್ಶನಕ್ಕೆ ಅವಕಾಶ ಸಿಗಲು ವ್ಯವಸ್ಥೆ ಮಾಡಿ ಎಂದಿದ್ದಾರೆ.

ಕೆಎಸ್ ಟಿಡಿಸಿಯಿಂದ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ನೀಡಿ ಜನರನ್ನು ಕರೆದೊಯ್ಯಲಾಗುತ್ತದೆ. ಅವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಇದೀಗ ಅದರ ಸಂಖ್ಯೆ 1000ಕ್ಕೆ ಏರಿಕೆ ಆಗಲಿದ್ದು, ಅವರಿಗೆ ಪ್ರತಿನಿತ್ಯ ತಿರುಪತಿಗೆ 5-6 ಬಸ್ ಗಳನ್ನು ವ್ಯವಸ್ಥೆ ಮಾಡಲಿದ್ದಾರೆ. ಈ ಎಲ್ಲ ಬಸ್‌ಗಳು ಟಿಟಿಡಿಗೆ ತೆರಳಿ ನಿಗದಿತ ನಿಲ್ದಾಣಗಳಿಗೆ ಮರಳಲಿವೆ.

ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ ತಲೆ ಎತ್ತುತ್ತಿದ್ದಂತೆ ಲಡ್ಡು ಖರೀದಿ, ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ತಾತ್ಕಾಲಿಕವಾಗಿ ಕಡಿಮೆ ಆಗಿತ್ತು. ತದನಂತರ ಕ್ರಮೇಣ ಮೊದಲಿನಂತೆ ಏರಿಕೆ ಆಗುತ್ತಿದೆ. ಸದ್ಯ ಲಡ್ಡುವಿಗೆ ಕಲಬೆರಕೆ ತುಪ್ಪ ಬೆರೆಸಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದವರ ವಿರುದ್ಧ ತನಿಖೆ ಮುಂದುವರಿದಿದೆ ಎನ್ನಲಾಗಿದೆ.

ಇದನ್ನೂ ಓದಿ: Cheating case: ತಿರುಪತಿಯಲ್ಲಿ ವಿಐಪಿ ದರ್ಶನದ ಭರವಸೆ ನೀಡಿ ವಂಚನೆ; ಜಗನ್‌ ರೆಡ್ಡಿ ಪಕ್ಷದ ನಾಯಕನ ವಿರುದ್ಧ ಕೇಸ್‌