Thursday, 12th December 2024

Trench Coat Fashion: ಚಳಿ-ಮಳೆ-ಗಾಳಿಗೆ ಕಾಲಿಟ್ಟ ಟ್ರೆಂಚ್ ಕೋಟ್ ಫ್ಯಾಷನ್

Trench Coat Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿ-ಮಳೆ-ಗಾಳಿಗೆ ಹೊಸ ಲುಕ್‌ನ ಟ್ರೆಂಚ್ ಕೋಟ್ ಫ್ಯಾಷನ್ (Trench Coat Fashion) ಎಂಟ್ರಿ ನೀಡಿದೆ. ಹೌದು, ಎಂದಿನಂತೆ, ಚಳಿಗಾಲದಲ್ಲಿ ಟ್ರೆಂಡಿಯಾಗುವ ಈ ಟ್ರೆಂಚ್ ಕೋಟ್‌ಗಳು ಇದೀಗ ಇಯರ್ ಎಂಡ್ ಫ್ಯಾಷನ್‌ನಲ್ಲಿ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಆಕರ್ಷಿಸುತ್ತಿವೆ. ಅದರಲ್ಲೂ ಈ ಫ್ಯಾಷನ್ ಜೆನ್ ಜಿ ಹುಡುಗಿಯರನ್ನು ಸೆಳೆದಿದೆ.

ಚಿತ್ರಕೃಪೆ: ಪಿಕ್ಸೆಲ್

ಏನಿದು ಟ್ರೆಂಚ್‌ಕೋಟ್ ಫ್ಯಾಷನ್?

ಸಿಂಪಲ್ ಆಗಿ ಹೇಳಬೇಕೆಂದರೆ, ಧರಿಸುವ ಔಟ್‌ಫಿಟ್‌ಗಳ ಮೇಲೆ ಲೇಯರ್ ಲಾಂಗ್ ಡಬ್ಬಲ್ ಬಟನ್ ಅಥವಾ ಸಿಂಗಲ್ ಬಟನ್ ಡಿಸೈನ್ ಇರುವಂತಹ ಕೋಟ್ ಇದು. ಶೀತ ಪ್ರದೇಶ ರಾಷ್ಟ್ರಗಳಲ್ಲಿ ಅತಿ ಹೆಚ್ಚಾಗಿ ಧರಿಸಲಾಗುತ್ತದೆ. ಇತ್ತೀಚೆಗೆ ನಮ್ಮ ರಾಷ್ಟ್ರದ ಚಳಿಗಾಲದ ಹವಾಮಾನಕ್ಕೆ ಅನುಗುಣವಾಗಿ ಲೈಟ್‌ವೇಟ್ ಟ್ರೆಂಟ್‌ ಕೋಟ್‌ಗಳು ಆಗಮಿಸಿದ್ದು, ಫ್ಯಾಷನ್ ಪ್ರಿಯರನ್ನು ಸವಾರಿ ಮಾಡುತ್ತಿವೆ.

ಏರ್‌ಪೋರ್ಟ್ ಲುಕ್‌ನಲ್ಲಿ ಟ್ರೆಂಚ್ ಕೋಟ್

ಎಲ್ಲಾ ಬಗೆಯ ಟ್ರೆಂಟ್‌ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್ ಲುಕ್, ಫಾರ್ಮಲ್ ಬ್ಲೇಜರ್ ಸ್ಟೈಲ್‌ನಲ್ಲೂ ದೊರಕುತ್ತವೆ. ಮೊದಲೆಲ್ಲಾ ಹಿಲ್ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್ರೋಬ್ ಸೇರಿದ ನಂತರ ಸಾಮಾನ್ಯ ಮಾನಿನಿಯರನ್ನು ಸೆಳೆದವು. ಇದೀಗ ಏರ್‌ಪೋರ್ಟ್ ಲುಕ್‌ನಲ್ಲಿ ಇವು ಟ್ರೆಂಡಿಯಾಗಿವೆ ಎನ್ನುತ್ತಾರೆ ರಕ್ಷಾ.

ಲೇಯರ್ ಲುಕ್‌ನಲ್ಲಿ ಟ್ರೆಂಚ್ ಕೋಟ್

ವೆಸ್ಟರ್ನ್ ಲುಕ್ ನೀಡುವ ಟ್ರೆಂಚ್ ಕೋಟ್‌ಗಳನ್ನು ನಾನಾ ಬಗೆಯಲ್ಲಿ ಲೇಯರ್ ಲುಕ್‌ಗೆ ಧರಿಸಬಹುದು. ಇವು ನೋಡಲು ಕ್ಲಾಸಿ ಲುಕ್ ನೀಡುವುದರೊಂದಿಗೆ ಎಂತಹವರನ್ನು ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಜತ್.

ಈ ಸುದ್ದಿಯನ್ನೂ ಓದಿ | Star Fashion: ವಿಂಟರ್‌ನಲ್ಲಿ ಟ್ರೆಂಡಿಯಾಗಿದೆ ನಟಿ ತಮನ್ನಾ ಧರಿಸಿದ ಡೆನಿಮ್ ಬಾಡಿಕಾನ್ ಮೆರ್ಮೈಡ್ ಡ್ರೆಸ್‌

ಟ್ರೆಂಚ್ ಕೋಟ್ ಸ್ಟೈಲಿಂಗ್‌ಗೆ ಸಿಂಪಲ್ ಟಿಪ್ಸ್

  • ಲೈಟ್‌ವೇಟ್ ಟ್ರೆಂಚ್ ಕೋಟ್ ಆಯ್ಕೆ ಮಾಡಿ.
  • ಇವು ದೇಹವನ್ನು ಬೆಚ್ಚಗಿಡುವುದರಿಂದ ತೆಳುವಾದ ಇನ್ನರ್ ಟಾಪ್ ಧರಿಸುವುದು ಬೆಸ್ಟ್.
  • ಉದ್ದಗಿರುವವರಿಗೆ ಎಲ್ಲಾ ಬಗೆಯ ಟ್ರೆಂಚ್ ಕೋಟ್ ಸೂಟ್ ಆಗುತ್ತವೆ.
  • ವಿಂಟೆಂಜ್ ಬಟನ್‌ನವು ರಾಯಲ್ ಲುಕ್ ನೀಡುತ್ತವೆ.
  • ಸಾಲಿಡ್ ಕಲರ್‌ನವನ್ನು ಸೆಲೆಕ್ಟ್ ಮಾಡಿ.
  • ಫಿಟ್ಟಿಂಗ್ ಟ್ರೆಂಚ್ ಕೋಟ್ ಧರಿಸಿ.

(ಲೇಖಕಿ ಫ್ಯಾಷನ್ ಪತ್ರಕರ್ತೆ)