Friday, 22nd November 2024

ದೇವಿಯನ್ನು ಆರಾಧಿಸಿದ ಭಕ್ತರ ಜೀವನದಲ್ಲಿ ಅಭ್ಯುದಯವಾಗಿದೆ: ರಮೇಶ್‌ ಜಾರಕಿಹೋಳಿ

ಬೆಳಗಾವಿ: ಕಾಗವಾಡ ತಾಲೂಕು ಉಗಾರ ಗ್ರಾಮದಲ್ಲಿರುವ ಪದ್ಮಾವತಿ ದೇವಿಯು ಈ ಭಾಗದ ಭಕ್ತರ ಆರಾಧ್ಯದೈವವಾಗಿದ್ದು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದ ಸಾವಿರಾರು ಭಕ್ತರ ನಂಬಿಕೆಯ ದೇವತೆಯಾಗಿದೆ. ಈ ದೇವಿಯನ್ನು ನಂಬಿ ಆರಾಧಿಸಿದ ಭಕ್ತರ ಜೀವನದಲ್ಲಿ ಅಭ್ಯುದಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

400 ವರ್ಷಗಳ ಇತಿಹಾಸ ಹೊಂದಿರುವ ಪದ್ಮಾವತಿ ದೇವಿಯ ಚಿನ್ನದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ‌, ಮೂಲತಃ ಮಹಾರಾಷ್ಟ್ರದ ಕಾಂಬೋಜ‌ ಗ್ರಾಮದ ಪದ್ಮಾವತಿ, ಉಗಾರ ಗ್ರಾಮ ದಲ್ಲಿ ನೆಲೆಸಿ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಅಪಾರ ಭಕ್ತರು ಭಾಗವಹಿಸಿದ್ದರು.