Tuesday, 24th September 2024

TSS Sirsi: ಶಿರಸಿ ಟಿಎಸ್‌ಎಸ್ ನಿರ್ದೇಶಕ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ಕಡವೆ ರಾಜೀನಾಮೆ

TSS Sirsi

ಶಿರಸಿ: ಪ್ರತಿಷ್ಠಿತ ಶಿರಸಿ ಟಿಎಸ್‌ಎಸ್ ಸಂಸ್ಥೆಯಲ್ಲಿ (TSS Sirsi) ಮತ್ತೊಂದು ಅಘಾತಕಾರಿ ಬೆಳವಣಿಗೆ ನಡೆದಿದೆ. ಟಿಎಸ್ಎಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಕಡವೆ ಹೆಗಡೆ, ಶಾಂತರಾಮ ಹೆಗಡೆಯವರ ನಂತರ ನಿರ್ದೇಶಕರಾಗಿ ಸಂಸ್ಥೆಯನ್ನು ಬೆಳೆಸುತ್ತಿದ್ದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅವರು ತಮ್ಮ ನಿರ್ದೇಶಕ ಸ್ಥಾನಕ್ಕೆ ಇದೀಗ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆಗೆ ಕಾರಣ ನೀಡಿರುವ ಅವರು, ಪ್ರಸ್ತುತ ಆಡಳಿತ ಮಂಡಳಿಗೆ ರೈತರ ಕಾಳಜಿ ಮತ್ತು ಸಂಘದ ಅಭಿವೃದ್ಧಿ ಚಿಂತನೆ ಇಲ್ಲವಾಗಿದೆ. ನನ್ನ ವೈಯಕ್ತಿಕ ವ್ಯವಹಾರ ಮಾಹಿತಿಯನ್ನು ಬೇರೆಯವರಿಗೆ ಕೊಡಲಾಗಿದೆ. ನನ್ನೊಬ್ಬನನ್ನು ಗುರಿಯಾಗಿಸಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಪ್ರತಿ ಮೀಟಿಂಗ್‌ನ ಠರಾವುಗಳನ್ನು ನಿರ್ದೇಶಕರಾದ ನನಗೆ ನೀಡಿಲ್ಲ. ಈ ಎಲ್ಲಾ ಅಂಶಗಳ ಕಾರಣದಿಂದ ಈಗಿನ ಆಡಳಿತ ಮಂಡಳಿಯ ದ್ವೇಷ ಸಾಧನೆಗೆ ಮನನೊಂದು ಟಿಎಸ್ಎಸ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಅ.3ರಿಂದ ನವರಾತ್ರಿ ಉತ್ಸವ

Sigandur Chowdamma Devi

ಶಿವಮೊಗ್ಗ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಾಗರ ತಾಲೂಕಿನ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ (Sigandur Chowdamma Devi) ಅಕ್ಟೋಬರ್ 3 ರಿಂದ 12ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ. ನವರಾತ್ರಿ ಉತ್ಸವದ (Navratri utsav) ಪ್ರಯುಕ್ತ ದೇವಿಗೆ ನಿತ್ಯ ಮುಂಜಾನೆ 4 ಗಂಟೆಯಿಂದ ಆಲಯ ಶುದ್ದಿಯೊಂದಿಗೆ ಪೂಜಾ ಕೈಂಕರ್ಯಗಳು ನೆಡೆಯಲಿದೆ. ಪ್ರತಿನಿತ್ಯ ಪಂಚಾಮೃತ ಅಭಿಷೇಕ, ಮಹಾಭಿಷೇಕ, ದುರ್ಗಾ ಹವನ, ಅಲಂಕಾರ ಪೂಜೆ, ಚಂಡಿಕಾ ಹವನ, ನವ ಚಂಡಿಕಾ ಹವನ, ಕುಂಕುಮಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅನುವಂಶಿಕ ಧರ್ಮಾಧಿಕಾರಿ ಎಸ್. ರಾಮಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ.

ಈ ಸುದ್ದಿಯನ್ನೂ ಓದಿ | Tirupati Laddu Row: ವಿವಾದ ನಡುವೆಯೇ ಬರೋಬ್ಬರಿ 14 ಲಕ್ಷ ತಿರುಪತಿ ಲಡ್ಡು ಮಾರಾಟ

ನವರಾತ್ರಿ ಉತ್ಸವದ 9 ದಿನಗಳು ದೇವಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ನೆಡೆಯಲಿದ್ದು,ದೇವಿಗೆ ವಿಶೇಷವಾಗಿ ತೈಲಾಭಿಷೇಕ, ಅಲಂಕಾರ ಪೂಜೆ, ಮಹಾ ಪೂಜೆ, ಗಣಹೋಮ ನೆಡೆಯಲಿದೆ. ಆಲಯದಲ್ಲಿ ಪ್ರತಿನಿತ್ಯ ವಿವಿಧ ಹವನ, ಗುರುಗಳ ಆರಾಧನೆಯು ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

ಈ ಸುದ್ದಿಯನ್ನೂ ಓದಿ | Ashutosh Gowariker : 10ನೇ ಅಜಂತಾ ಎಲ್ಲೋರಾ ಚಲನಚಿತ್ರೋತ್ಸವದ ಗೌರವ ಅಧ್ಯಕ್ಷರಾಗಿ ಅಶುತೋಷ್ ಗೋವಾರಿಕರ್ ಆಯ್ಕೆ

ಪ್ರತಿನಿತ್ಯ ಸಂಜೆ 7 ರಿಂದ ದೀಪೋತ್ಸವ, ರಾತ್ರಿ 8ಕ್ಕೆ ಮಹಾ ಮಂಗಳಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು. ನವರಾತ್ರಿ ಸಂದರ್ಭದಲ್ಲಿ ಭಕ್ತಾದಿಗಳಿಗೆ ವಸತಿ, ದರ್ಶನ, ನಿತ್ಯ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ತಿಳಿಸಿದ್ದಾರೆ.