- ರಂಗನಾಥ ಕೆ. ಮರಡಿ
ತುಮಕೂರು: ತುಮಕೂರು ಹಾಲು ಒಕ್ಕೂಟದ (Tumkur news) ನಿರ್ದೇಶಕರ ಕದನ (Tumul election 2024) ರಂಗೇರಿದ್ದು, ಕಲಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನ.10 ರಂದು ಮತದಾನ (voting) ನಡೆಯಲಿದ್ದು 10 ಮಂದಿ ನಿರ್ದೇಶಕರ ಸ್ಥಾನಕ್ಕೆ 21 ಮಂದಿ ಅಖಾಡಕ್ಕೆ ಇಳಿದಿದ್ದಾರೆ.
ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಶ್ರೀನಿವಾಸ್ ಅವರ ಪತ್ನಿ ಭಾರತಿ ದೇವಿ, ತುಮುಲ್ ಮಾಜಿ ಅಧ್ಯಕ್ಷರಾದ ಮಹಾಲಿಂಗಯ್ಯ, ಕೊಂಡವಾಡಿ ಚಂದ್ರಶೇಖರ್ ಸೇರಿದಂತೆ ಪ್ರಭಾವಿಗಳು ಕಣದಲ್ಲಿದ್ದು ಗೆಲುವಿಗಾಗಿ ರಣತಂತ್ರ ರೂಪಿಸಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ಮೂರು ಮಂದಿ ಸ್ಪರ್ಧಿಸಿದ್ದು ಉಳಿದ ತಾಲೂಕುಗಳಲ್ಲಿ ಎರಡು ಮಂದಿ ಕದನಕ್ಕಿಳಿದಿದ್ದು, ನೇರಾನೇರ ಪೈಪೋಟಿ ಕಂಡುಬಂದಿದೆ. ತುಮುಲ್ ಗದ್ದುಗೆ ಏರಲು ತಾಲೂಕುವಾರು ಹಾಲಿ ಹಾಗೂ ಮಾಜಿ ಶಾಸಕರುಗಳು ಅಖಾಡಕ್ಕೆ ಇಳಿದು ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದ್ದಾರೆ.
1146 ಮತದಾರರು
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಒಟ್ಟು 1383 ಡೇರಿಗಳು ಸದಸ್ಯತ್ವ ಹೊಂದಿದ್ದು, 1146 ಡೇರಿಗಳು ಮತದಾನದ ಹಕ್ಕು ಪಡೆದುಕೊಂಡಿದೆ. ಉಳಿದ 237 ಡೇರಿಗಳು ಮತದಾನದ ಹಕ್ಕು ಚಲಾಯಿಸಲು ಅನರ್ಹಗೊಂಡಿವೆ. ಅರ್ಹ ಮತದಾರಿಗೆ ಈಗಾಗಲೇ ಡೆಲಿಗೇಟ್ ಫಾರ್ಮ್ ವಿತರಿಸಲಾಗಿದೆ. ತುಮಕೂರು ಕ್ಷೇತ್ರದಲ್ಲಿ ಅಧಿಕ ಮತದಾರರಿದ್ದು, ಪಾವಗಡ ಕ್ಷೇತ್ರದಲ್ಲಿ ಕೇವಲ 47 ಮಂದಿ ಮತದಾರರಿದ್ದಾರೆ.
ಮತದಾರರ ವಿವರ
ತುಮಕೂರು-151
ಕುಣಿಗಲ್-141
ತಿಪಟೂರು-136
ಗುಬ್ಬಿ-120
ತುರುವೇಕೆರೆ-116
ಕೊರಟಗೆರೆ-115
ಚಿಕ್ಕನಾಯಕನಹಳ್ಳಿ-109
ಶಿರಾ-107
ಮಧುಗಿರಿ-104
ಪಾವಗಡ-47
ಒಟ್ಟು -1,146
ಅಭ್ಯರ್ಥಿಗಳ ವಿವರ
ಕ್ಷೇತ್ರ- ಕಾಂಗ್ರೆಸ್ ಬೆಂಬಲಿತ-ಎನ್.ಡಿ.ಎ ಬೆಂಬಲಿತ
ತುಮಕೂರು- ಎಚ್.ಎ.ನಂಜೇಗೌಡ- ಎಚ್.ಕೆ.ರೇಣುಕಪ್ರಸಾದ್
ಗುಬ್ಬಿ-ಕೆ.ಪಿ.ಭಾರತಿದೇವಿ- ಜಿ.ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ- ಬಿ.ಎನ್.ಶಿವಪ್ರಕಾಶ್-ಎಸ್.ರಾಜಶೇಖರ್
ತಿಪಟೂರು- ಎಂ.ಕೆ.ಪ್ರಕಾಶ್- ತ್ರಿಯಂಬಕ
ತುರುವೇಕೆರೆ- ಸಿ.ವಿ.ಮಹಲಿಂಗಯ್ಯ-ಪಿ.ಟಿ.ಗಂಗಾಧರಯ್ಯ
ಕುಣಿಗಲ್- ಕೆ.ಎಂ.ಮಾಸ್ತಿಕರೀಗೌಡ- ಡಿ.ಕೃಷ್ಣಕುಮಾರ್
ಮಧುಗಿರಿ-ಬಿ.ನಾಗೇಶ ಬಾಬು-ಚಂದ್ರಶೇಖರ್
ಕೊರಟಗೆರೆ-ಈಶ್ವರಯ್ಯ-ವಿ.ಸಿದ್ದಗಂಗಯ್ಯ -ಟಿ.ಎನ್.ಅರುಣ್ಕುಮಾರ್(ಪಕ್ಷೇತರ)
ಶಿರಾ-ಸಿ.ಆರ್.ಉಮೇಶ್- ಎಸ್. ಆರ್.ಗೌಡ
ಪಾವಗಡ-ಚಂದ್ರಶೇಖರರೆಡ್ಡಿ-ಚನ್ನಮಲ್ಲಪ್ಪ
ಇದನ್ನೂ ಓದಿ: Milk and Fish: ಹಾಲು ಮತ್ತು ಮೀನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ನೋಡಿ!