Sunday, 10th November 2024

ದ್ವಿಚಕ್ರ ವಾಹನ ಅಪಘಾತ: ಪತ್ರಿಕಾ ವಿತರಕನ ಸಾವು

ಗಂಗೊಳ್ಳಿ: ಗಂಗೊಳ್ಳಿ ಸಮೀಪದ ಗುಜ್ಜಾಡಿಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಪತ್ರಿಕಾ ವಿತರಕ ರೊಬ್ಬರು ಬುಧವಾರ ರಾತ್ರಿ  ಮೃತಪಟ್ಟಿದ್ದಾರೆ. ಗುಜ್ಜಾಡಿ ಬಸ್ ನಿಲ್ದಾಣ ಸಮೀಪ ಘಟನೆ ನಡೆದಿದೆ.

ಗುಜ್ಜಾಡಿಯ ನಿವಾಸಿ ಅಶೋಕ್ ಕೊಡಂಚ(75) ಮೃತರು. ಸುಮಾರು 10 ವರ್ಷಗಳಿಗೂ ಹೆಚ್ಚು ‌ಕಾಲದಿಂದ ಪತ್ರಿಕಾ ವಿತರಕ ರಾಗಿದ್ದು ಜತೆಗೆ, ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಬಳಿ ಸಣ್ಣ ಉದ್ಯಮ ನಡೆಸುತ್ತಿದ್ದರು. ಬುಧವಾರ ರಾತ್ರಿ ಅಂಗಡಿ ಮುಚ್ಚಿ ಗುಜ್ಜಾಡಿಯಲ್ಲಿರುವ ಬಸ್ ನಿಲ್ದಾಣ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಕಡೆಯ ರಸ್ತೆಗೆ ತಿರುಗುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಾಯಗೊಂಡ ಅಶೋಕ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದ ರೆನ್ನಲಾಗಿದೆ.

ಗುಜ್ಜಾಡಿಯ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲದಿಂದ ನಿರ್ದೇಶಕ ರಾಗಿದ್ದ ಅಶೋಕ್ ಕೊಡಂಚ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಬೈಕ್ ಸವಾರ ಸಾಹಿಲ್ ಎಂಬವರೂ ಗಾಯಗೊಂಡಿದ್ದಾರೆ.