ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ ಸೇರಿ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶದ ಯುಜಿಸಿಇಟಿ- ಯುಜಿನೀಟ್ 2024ರ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು (UGCET-UGNEET 2024) ಕೆಇಎ ವೆಬ್‌ಸೈಟ್ ಪ್ರಕಟಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.
ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಗೆ ಸೆ.13ರ ಮಧ್ಯಾಹ್ನ 2ರವರೆಗೆ ನಮೂದಿಸಿದ ಆಪ್ಶನ್ (Options) ಗಳನ್ನು ಪರಿಗಣಿಸಲಾಗಿದೆ. ಇದು ಯುಜಿಸಿಇಟಿ- ಯುಜಿನೀಟ್ 2024ರ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವಾಗಿದ್ದು, ಅಭ್ಯರ್ಥಿಗಳು ತಾತ್ಕಾಲಿಕವಾಗಿ ಹಂಚಿಕೆಯಾಗಿರುವ ಸೀಟಿಗೆ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತಿಲ್ಲ ಎಂದು ತಿಳಿಸಿದ್ದಾರೆ.
ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳಿದ್ದಲ್ಲಿ (Options ಗಳನ್ನು ದಾಖಲಿಸಲಾಗಿದೆ. ಎರಡನೇ ಸುತ್ತಿನ ಕಟ್‌ಆಫ್ ರಾಂಕ್ ಪರಿಶೀಲಿಸಲಾಗಿದೆ. ಆದರೆ ಯಾವುದೂ ಸೀಟು ಹಂಚಿಕೆಯಾಗಿಲ್ಲ) ಸೆ.19ರ ಬೆಳಗ್ಗೆ 10ರೊಳಗೆ keauthority-ka@nic.in ಗೆ ಎಲ್ಲಾ ವಿವರಗಳೊಂದಿಗೆ ಮೇಲ್ ಮಾಡಬಹುದು. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
#UGCET #UGNEET 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) September 18, 2024
ಆಕ್ಷೇಪಣೆಗಳು ಇದ್ದಲ್ಲಿ ಸೆ.19ರ ಬೆಳಿಗ್ಗೆ 10ಗಂಟೆಯೊಳಗೆ keauthority-ka@nic.in ಗೆ ಇ-ಮೇಲ್ ಮಾಡಬಹುದು. ಆಕ್ಷೇಪಣೆ ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.@CMofKarnataka@drmcsudhakar pic.twitter.com/Hq8Rr2L79S
ಸೀಟು ಹಂಚಿಕೆ ಕುರಿತು ಪ್ರಕಟಿಸಲಾಗುವ ಸೂಚನೆಗಳು, ಅಧಿಸೂಚನೆಗಳು ಮತ್ತು ಪ್ರಕಟಣೆಗಳನ್ನು ನೋಡದೆ ಇರುವ ಕಾರಣದಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೆ ಪ್ರಾಧಿಕಾರವು ಜವಾಬ್ದಾರಿಯಾಗುವುದಿಲ್ಲ. ಅಭ್ಯರ್ಥಿಗಳು ಪ್ರತಿದಿನ ಕನಿಷ್ಠ ಎರಡು ಬಾರಿ ಪ್ರಾಧಿಕಾರದ ವೆಬ್‌ಸೈಟಿಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | India Post Jobs : ಕರ್ನಾಟಕ ಸೇರಿದಂತೆ ಅಂಚೆ ಇಲಾಖೆಯ ಡಾಕ್ ಸೇವಕ್ ಹುದ್ದೆಯ 2ನೇ ಮೆರಿಟ್ ಪಟ್ಟಿ ಪ್ರಕಟ
ಪಿಎಸ್‌ಐ, ವಿಎಒ, ಕೆ-ಸೆಟ್ ಸೇರಿ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆ, ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಪರೀಕ್ಷೆ, ಕೆ-ಸೆಟ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ರಾಜ್ಯ ಸರ್ಕಾರವು ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕಾದ ಹಿನ್ನೆಲೆಯಲ್ಲಿ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು (KEA Exam) ಕೆಇಎ ಮುಂದೂಡಿ, ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಈ ಬಗ್ಗೆ ಕೆಇಎ ಪ್ರಕಟಣೆ ಹೊರಡಿಸಿದ್ದು, ಪಿಎಸ್‌ಐ ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಿಎಸ್‌ಐ ಪರೀಕ್ಷೆ ಅ.3ಕ್ಕೆ ನಡೆಯಲಿದೆ. ವಯೋಮಿತಿ ಸಡಿಲಿಕೆ ಮಾಡಿರುವ ಕಾರಣ ವಿಎಒ ಮತ್ತು ಜಿಟಿಟಿಸಿ ಹುದ್ದೆಗಳಿಗೆ ಸೆ.19ರಿಂದ 9 ದಿನ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಪರಿಷ್ಕೃತ ವೇಳಾಪಟ್ಟಿ
- ಪಿಎಸ್‌ಐ ಪರೀಕ್ಷೆ- ಅಕ್ಟೋಬರ್ 3
- ಗ್ರಾಮ ಆಡಳಿತ ಅಧಿಕಾರಿ, ಜಿಟಿಟಿಸಿ ಹುದ್ದೆ(ಕಡ್ಡಾಯ ಕನ್ನಡ)- ಸೆ. 29 ಮತ್ತು ಅ.26 (ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ)
- ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ- ಅಕ್ಟೋಬರ್ 27
- ಕೆ-ಸೆಟ್- ನವೆಂಬರ್-24
- ಸಹಾಯಕ ಪ್ರಾಧ್ಯಾಪಕರು(ರಾಯಚೂರು ವಿವಿ)- ನವೆಂಬರ್-24
#PSI ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು #KEA ಪ್ರಕಟಿಸಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) September 17, 2024
PSI ಪರೀಕ್ಷೆ OCT 3ಕ್ಕೆ ನಡೆಯಲಿದೆ.
ವಯೋಮಿತಿ ಸಡಿಲ ಮಾಡಿರುವ ಕಾರಣ #VAO ಮತ್ತು #GTTC ಹುದ್ದೆಗಳಿಗೆ ಸೆ.19ರಿಂದ 9 ದಿನ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ.@CMofKarnataka @drmcsudhakar pic.twitter.com/92wmxAwTht
ಈಗಾಗಲೇ ಗ್ರಾಮಾಡಳಿತಾಧಿಕರಿ ಹುದ್ದೆಗೆ ಅರ್ಜಿ ಸಲ್ಲಿಸಿರುವವರು ಸೆ.29ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಿ, ಅರ್ಹತಾ ಅಂಕಗಳಿಸದವರಿಗೆ ಮಾತ್ರ ಅ. 27ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು. ಗ್ರಾಮ ಆಡಳಿತ ಅಧಿಕಾರಿ, ಜಿಟಿಟಿಸಿ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆ ಸೆ. 29 ನಡೆಯಲಿದ್ದು, ವಯೋಮಿತಿ ಸಡಿಲಿಕೆಯಿಂದ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ.26ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Government Job News: ವಯೋಮಿತಿ ಮೀರಿದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ಎಲ್ಲ ವರ್ಗಕ್ಕೂ 3 ವರ್ಷ ಸಡಿಲಿಕೆ
ಈ ಹಿಂದೆ ಸೆ.22ಕ್ಕೆ ಪಿಎಸ್‌ಐ ಪರೀಕ್ಷೆ (ಕೆಇಎ) ಹಾಗೂ ಸೆ.14, 15ರಂದು ಗ್ರೂಪ್ ಬಿ ಹುದ್ದೆಗಳ ಪರೀಕ್ಷೆ (ಕೆಪಿಎಸ್‌ಸಿ) ನಿಗದಿಯಾಗಿತ್ತು. ಆದರೆ, ಸೆ. 22ಕ್ಕೆ ಯುಪಿಎಸ್‌ಸಿ ಪರೀಕ್ಷೆ ನಿಗದಿಯಾಗಿದ್ದರಿಂದ ಪಿಎಸ್‌ಐ ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳು ಆಗ್ರಹಿಸಿದ್ದರು. ಹೀಗಾಗಿ ಪರೀಕ್ಷೆ ಮುಂದೂಡಿಕೆಯಾಗಿದೆ. ಇನ್ನು ರಾಜ್ಯ ಸರ್ಕಾರ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಸೆ.14, 15ರಂದು ನಿಗದಿಯಾಗಿದ್ದ ಗ್ರೂಪ್ ಬಿ ಹುದ್ದೆಗಳ ಪರೀಕ್ಷೆಯನ್ನು ಕೆಪಿಎಸ್‌ಸಿ ಮುಂದೂಡಿತ್ತು.