Thursday, 26th September 2024

Upendra Movie: ರೀ ರಿಲೀಸ್‌ನಲ್ಲೂ ದಾಖಲೆ ಬರೆದ “ಉಪೇಂದ್ರ” ಚಿತ್ರ

Upendra Movie

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಾಯಕರಾಗಿ ನಟಿಸಿ, ನಿರ್ದೇಶಿಸಿದ್ದ ಹಾಗೂ ಶಿಲ್ಪ ಶ್ರೀನಿವಾಸ್ ಅವರು ನಿರ್ಮಿಸಿದ್ದ “ಉಪೇಂದ್ರ” ಚಿತ್ರ (Upendra Movie) 1999 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈಗ ಇಪ್ಪತ್ತೈದು ವರ್ಷಗಳ ನಂತರ ಚಿತ್ರ ಕಳೆದ ವಾರ ರೀ ರಿಲೀಸ್ ಆಗಿದೆ. ಇಪ್ಪತ್ತೈದು ವರ್ಷಗಳ ನಂತರವೂ ಚಿತ್ರಕ್ಕೆ ಅದೇ ತರಹ ಅದ್ಧೂರಿ ಓಪನಿಂಗ್ ಸಿಕ್ಕಿದೆ. ಉಪ್ಪಿ ಅಭಿಮಾನಿಗಳು ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ. ಚಿತ್ರ ಮರು ಬಿಡುಗಡೆಯಾಗಿ ಒಂದು ವಾರ ಪೂರೈಸಿ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ತ್ರಿವೇಣಿ ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ಎರಡನೇ ವಾರದಲ್ಲೂ ಚಿತ್ರ ಮುಂದುವರೆಯಲಿದೆ. ಈ ಚಿತ್ರ ಬರೀ ಕನ್ನಡಿಗರಿಗಷ್ಟೇ ಅಲ್ಲ. ಅನ್ಯ ಭಾಷೆಯವರಿಗೂ ಮೆಚ್ಚುಗೆಯಾಗಿದೆ. ಚಿತ್ರದ ರಿಮೇಕ್ ರೈಟ್ಸ್ ನೀಡುವಂತೆ ನಿರ್ಮಾಪಕರಿಗೆ ಅನೇಕ ಭಾಷೆಗಳಿಂದ ಬೇಡಿಕೆ ಬರುತ್ತಿದೆ.

ಈ ಸುದ್ದಿಯನ್ನೂ ಓದಿ | Bengaluru News: ಅರುಣ್ ಯೋಗಿರಾಜ್ ಸೇರಿ ನಾಲ್ವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ

ಇಪ್ಪತ್ತೈದು ವರ್ಷಗಳ ನಂತರವೂ ಜನರು “ಉಪೇಂದ್ರ” ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನತುಂಬಿ ಬಂದಿದೆ ಎಂದು ತಿಳಿಸಿರುವ ನಿರ್ಮಾಪಕ ಶಿಲ್ಪ ಶ್ರೀನಿವಾಸ್, ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.