Saturday, 14th December 2024

ಉರ್ದು ಕಿರಿಯ ಪ್ರಾಥಮಿಕ ಶಾಲೆಯನ್ನು ಮತ್ತೆ ಪ್ರಾರಂಭಿಸಬೇಕು: ಮನವಿ

ಇಂಡಿ: ಇಂಡಿ ಸ್ಟೇಶನ್ ಸಮೀಪ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯನ್ನು ಮಕ್ಕಳ ಸಂಖ್ಯೆ ಕಡಿಮೆ ಇರುವದರಿಂದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಬಂದ್ ಮಾಡ ಲಾಗಿತ್ತು. ಈ ಶಾಲೆಯನ್ನು ಮತ್ತೆ ಪ್ರಾರಂಭಿಸಬೇಕು ಎಂದು ಪಾಲಕರು ಹಾಗೂ ಅಂಜು ಮನ್ ಸಂಸ್ಥೆಯ ಪದಾಧಿಕಾರಿಗಳು ಒಮ್ಮತದ ಅಭಿಪ್ರಾಯದೊಂದಿಗೆ ವಿಜಯಪೂರದ ಉಪನಿರ್ದೇಶಕರ ಕಾರ್ಯಾ ಲಯಕ್ಕೆ ಭೇಟಿ ನೀಡಿ ವಿಷಯ ಪರಿವೀಕ್ಷಕ ಎಂ.ಎ ಗುಳೇದ ಇವರ ಮೂಲಕ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ನಂತರ ಅಧಿಕಾರಿ ಮಾತನಾಡಿ ಯಾವುದೇ ಶಾಲೆಗಳು ಮುಚ್ಚುವ ಉದ್ದೇಶ ಇರವುದಿಲ್ಲ. ಈ ಹಿಂದೆ ಮಕ್ಕಳ ಅನುಪಾತ ಕಡಿಮೆ ಇರುವದರಿಂದ ಬಂದ್ ಮಾಡಲಾಗಿದೆ. ಪಾಲಕರು ಸರಕಾರದ ನಿಯಮದ ಪ್ರಕಾರ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿದರೆ ಕೂಡಲೆ ಉರ್ದು ಶಾಲೆ ಪ್ರಾರಂಭಿಸಲಾಗುವುದು ಎಂದು ಪಾಲಕರಿಗೆ ಆಶ್ವಾಸನೆ ನೀಡಿದರು.

ಸಂದರ್ಭದಲ್ಲಿ ಮುಖಂಡ ಜಬ್ಬಾರ ಅರಬ, ಮಾಜಿ ಪುರಸಭೆ ಉಪಾಧ್ಯಕ್ಷ ಉಸ್ಮಾನ ಶೇಖ,ಡಿ.ಎಚ್ ಮಣ್ಣೂರ, ರಾಜಅಹ್ಮದ ಛಪರಬಂದ್, ಶಹನವಾಜ್ ಅರಬ, ಹಸನ್ ಮುಜಾವರ್, ಇಮ್ರಾನ್ ಮುಜಾವರ್, ಶಕೀಲ ಚೌದರಿ ಸೇರಿದಂತೆ ಅಂಜುಮನ್ ಪದಾಧಿಕಾರಿಗಳು, ಪಾಲಕರು ಇದ್ದರು.