Thursday, 12th December 2024

V Somanna: ಕನ್ನಡಿಗರಿಗೆ ಸಿಹಿ ಸುದ್ದಿ- ರೈಲ್ವೆ ನೇಮಕಾತಿ, ಮುಂಬಡ್ತಿ ಪರೀಕ್ಷೆಗಳು ಕನ್ನಡದಲ್ಲಿ: ಸೋಮಣ್ಣ

V Somanna

ನವದೆಹಲಿ: ರೈಲ್ವೆ ನೇಮಕಾತಿ (Railway recruitment) ಪರೀಕ್ಷೆ ಮಾತ್ರವಲ್ಲ ಮುಂಬಡ್ತಿ ಪರೀಕ್ಷೆಗಳನ್ನು ಕೂಡ ಕನ್ನಡದಲ್ಲಿ ನಡೆಸಲಾಗುವುದು ಎಂದು ಕೇಂದ್ರ ರೈಲ್ವೆ (Indian Railways) ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಘೋಷಿಸಿದ್ದಾರೆ.

ಈ ಹಿಂದೆ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಈ ಪರೀಕ್ಷೆಗಳು ನಡೆಯುತ್ತಿದ್ದವು. ಇದೀಗ ಕನ್ನಡದಲ್ಲಿ ಮುಂಬಡ್ತಿ ಪರೀಕ್ಷೆ ನಡೆಸಲಾಗುವುದು. ಕರ್ನಾಟಕದ ರೈಲ್ವೆ ಸಿಬ್ಬಂದಿಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಸಚಿವರ ಕಚೇರಿಯಿಂದ ಪ್ರಕಟಣೆ ನೀಡಲಾಗಿದೆ.

ಈಗಾಗಲೇ ರೈಲ್ವೆ ಇಲಾಖೆ ನೇಮಕಾತಿ ಪರೀಕ್ಷೆ ಕನ್ನಡದಲ್ಲಿ ನಡೆಸಲಾಗುವುದು ಎಂದು ಸಚಿವ ಸೋಮಣ್ಣ ಘೋಷಿಸಿದ್ದಾರೆ. ಇದೀಗ ಇಲಾಖೆಗೆ ಸೇರಿದ ನಂತರ ಮುಂಬಡ್ತಿ ಪರೀಕ್ಷೆಯನ್ನು ಕೂಡ ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಕನ್ನಡಿಗ ಸಿಬ್ಬಂದಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ರೈಲ್ವೆ ನೌಕರರಿಗೆ ಗುಡ್‌ನ್ಯೂಸ್‌; ಬೋನಸ್‌ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ

ನವದೆಹಲಿ: ಅಕ್ಟೋಬರ್‌ 3ರಂದು ನಡೆದ ವಿಶೇಷ ಕೇಂದ್ರ ಸಚಿವ ಸಂಪುಟ ಸಭೆ (Union Cabinet)ಯಲ್ಲಿ ರೈಲ್ವೆ ಉದ್ಯೋಗಿಗಳಿಗೆ ಪ್ರಾಡಕ್ಟಿವಿಟಿ-ಲಿಂಕ್ಡ್ ಬೋನಸ್ (Productivity Linked Bonus-PLB) ನೀಡಲು ಅನುಮೋದನೆ ನೀಡಲಾಗಿದೆ. ಜತೆಗೆ ಪ್ರಮುಖ ಬಂದರು ಪ್ರಾಧಿಕಾರಗಳಿಗೆ ಪರಿಷ್ಕೃತ ಪ್ರಾಡಕ್ಟಿವಿಟಿ-ಲಿಂಕ್ಡ್ ರಿವಾರ್ಡ್‌ ಯೋಜನೆ (Revised productivity-linked reward)ಗೂ ಒಪ್ಪಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಪ್ರಾಡಕ್ಟಿವಿಟಿ-ಲಿಂಕ್ಡ್ ಬೋನಸ್‌ ನೀಡಲು 2,029 ಕೋಟಿ ರೂ.ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದ ಸುಮಾರು 12 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಈ ಬೋನಸ್ ಅನ್ನು ದಸರಾ ಮತ್ತು ದೀಪಾವಳಿ ರಜಾದಿನಗಳ ಮೊದಲು ವಿತರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: V Somanna: ರಾಯದುರ್ಗ, ಚಿತ್ರದುರ್ಗ ರೈಲ್ವೆ ಯೋಜನೆ 2027 ಕ್ಕೆ ಪೂರ್ಣ: ಸಚಿವ ವಿ. ಸೋಮಣ್ಣ