ಚಿಕ್ಕನಾಯಕನಹಳ್ಳಿ: ಪುರಸಭೆಯವರು ಸಹಕರಿಸಿದರೆ ಪಟ್ಟಣದಲ್ಲಿರುವ ಬೀದಿ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಗು ಸಂತಾನಹರಣ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೆ.ಮ.ನಾಗಭೂಷಣ್ ತಿಳಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪುರಸಭೆ, ಹಾಗು ರೋಟರಿ ಕ್ಲಬ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರೇಬಿಸ್ ದಿನಚಾರಣೆ ಅಂಗವಾಗಿ ಪಟ್ಟಣ ದ ಪಶು ಆಸ್ಪತ್ರೆ ಆವರಣದಲ್ಲಿ ನಡೆದ ವಿಶ್ವ ರೇಬಿಸ್ ಅರಿವು ಮತ್ತು ಉಚಿತ ಲಸಿಕಾ ಅಭಿಯಾನದಲ್ಲಿ ಮಾತನಾಡಿದರು.
ರೇಬಿಸ್ ಅಥವಾ ಹುಚ್ಚುನಾಯಿ ಕಡಿತಕ್ಕೆ ಒಳಗಾಗುವ ವ್ಯಕ್ತಿಗೆ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಸಾವು ಸಂಭವಿ ಸುವ ಸಾಧ್ಯತೆ ಇದೆ. ನಾಯಿ ಕಡಿತಕ್ಕೆ ಒಳಗಾ ದವರು ನಿರ್ಲಕ್ಷö್ಯ ತೋರಿದರೆ ಮುಂದೆ ಅದು ರೇಬಿಸ್ ರೋಗಕ್ಕೆ ಕಾರಣವಾಗಲಿದೆ. ಈ ವೈರಸ್ ನಾಯಿ ಕಡಿತದ ಮೂಲಕ ಮನುಷ್ಯನ ದೇಹ ಪ್ರವೇಶಿಸಿದರೂ, ವರ್ಷಗಟ್ಟಲೇ ದೇಹದೊಳಗೆ ಬದುಕಿರುತ್ತದೆ. ಹೀಗಾಗಿ ಯಾವ ಸಂದರ್ಭದಲ್ಲಿ ಅದು ತನ್ನ ಲಕ್ಷಣ ಗಳನ್ನು ತೋರಲಾರಂಭಿಸುತ್ತದೆ ಎಂದು ನಿಖರವಾಗಿ ಹೇಳಲು ಕಷ್ಟ ಸಾಧ್ಯ, ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತವನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯು ವಂತೆ ಸಲಹೆ ನೀಡಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್ ಮಾತನಾಡಿ ನಾಯಿಗಳನ್ನು ಅತಿ ಪ್ರೀತಿಯಿಂದ ಸಾಕುವವರು ಇದ್ದಾರೆ. ಆದರೆ ಇವುಗಳಿಗೆ ಲಸಿಕೆ ಹಾಕಿಸುವುದನ್ನು ಮರೆಯುತ್ತಾರೆ. ಈ ರೀತಿಯ ನಿರ್ಲಕ್ಷö್ಯ ತೋರದೆ ಕಾಲ ಕಾಲಕ್ಕೆ ಲಸಿಕೆಯನ್ನು ಸಾಕು ಪ್ರಾಣಿಗಳಿಗೆ ಹಾಕಿಸಬೇಕು. ನಾವು ಸಾಕುವ ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿ ರುವುದು ನಮ್ಮ ಕರ್ತವ್ಯ ಎಂದು ನುಡಿದರು.
ಪಶು ವ್ಯೆದ್ಯಾಧಿಕಾರಿ ಡಾ. ಸಂಧ್ಯಾರಾಣಿ ಮಾತನಾಡಿ ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ನೀಡುವುದರಿಂದ ಆ ನಾಯಿಯ ದಾಳಿಗೆ ಒಳಗಾಗುವ ವ್ಯಕ್ತಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಕಂಡುಬರುವುದು ತೀರ ಕಡಿಮೆ. ಪ್ರಾಣಿಗಳಿಂದ ಕಚ್ಚಿಸಿಕೊಂಡಾಗ ಕಚ್ಚಿರುವ ಜಾಗವನ್ನು ೧೫ ನಿಮಿಷಗಳ ಕಾಲ ಸೋಪ್, ಅಥವಾ ಡಿಟರ್ಜೆಂಟ್ ನೀರಿನಿಂದ ತೊಳೆದು ಹತ್ತಿರದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ಅಂಗವಾಗಿ ಶ್ವಾನ ಮಾಲಿಕರು ಕರೆತಂದ ಸಾಕು ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆಯನ್ನು ಹಾಕಲಾ ಯಿತು. ಪುರಸಭಾ ಅಧ್ಯಕ್ಷೆ ಪುಷ್ಪಾ, ಕನ್ನಡ ಸಂಘದ ಅಧ್ಯಕ್ಷ ರೇಣುಕಾಸ್ವಾಮಿ, ಕಾರ್ಯದರ್ಶಿ ಕೃಷ್ಣೇಗೌಡ, ತಾ.ವೈದ್ಯಾಧಿಕಾರಿ ನವೀನ್, ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್, ರೋಟರಿ ನರಸಿಂಹ ಮೂರ್ತಿ, ಕರವೇ ಗುರುಮೂರ್ತಿ, ಗಂಗಾಧರ್ ಮಗ್ಗದಮನೆ, ಹಾಗು ಇತರರಿದ್ದರು.