ಹರಪನಹಳ್ಳಿ: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗಿರುವುದರಿಂದ ಭರತ್ ಹುಣ್ಣಿಮೆ ಪ್ರಯುಕ್ತ ತಾಲೂಕಿನ ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ದ ಉತ್ಸವಾಂಭ ದೇವಿಯ ಜಾತ್ರೆಯನ್ನು ನಿಷೇಧಿಸಲಾಗಿದೆ ಎಂದು ವಾಲ್ಮೀಕಿ ಅಭಿವೃದ್ದಿನಿಗಮದ ಅದ್ಯಕ್ಷ ಶಾಸಕ ಎಸ್.ವಿ. ರಾಮಚೆಂದ್ರಪ್ಪ ಹೇಳಿದರು.
ತಾಲ್ಲೂಕಿನ ಉಚ್ಚಂಗಿ ದುರ್ಗದ ಉಚ್ಚೆಂಗೆಮ್ಮ ದೇವಿ ಯಾತ್ರಾ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭರತ ಹುಣ್ಣಿಮೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತ ನಾಡಿದರು. ಗ್ರಾಮೀಣ ಬಾಗದಲ್ಲಿ ಕರೋನಾ ಸೊಂಕು ನಿಯಂತ್ರದಲ್ಲದ್ದ ಮಾತ್ರಕ್ಕೆ ಸೊಂಕು ತೊಲಗಿದೆ ಎಂದರ್ಥವಲ್ಲ ರಾಜ್ಯದ ಅಲ್ಲಲ್ಲಿ ಸೊಂಕು ಉಲ್ಬಣಗೋಂಡ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಐತಿಹಾಸಿಕಭರತ ಹುಣ್ಣಿಮೆ ಆಚರಣೆಯನ್ನು ಸ್ಥಳಿಯರಿಗೆ ಮಾತ್ರ ಸಿಮಿತಗೋಳಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೋಳ್ಳಬೇಕು. ಗ್ರಾಮದ ಸುತ್ತಮುತ್ತ ಬೀಗಿ ಪೊಲೀಸ್ ವ್ಯವಸ್ಥೆ ಮಾಡಬೇಕು. ಜನ ಎತ್ತಿನಗಾಡಿ ಟ್ರಾಕ್ಟರ್ ಸೇರಿದಂತೆ ಯಾವುದೆ ವಾಹನಗಳ ಮೂಲಕ ಕ್ಷೇತ್ರಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕು. ಹುಣ್ಣಿಮೆ ಜಾತ್ರೆಗಳಲ್ಲಿ ಹೆಚ್ಚುವರಿ ಬಸ್ ಸೇವೆ ರದ್ದುಪಡಿಸಬೇಕು ಎಂದರು.
ಜಾತ್ರೆಯ ಅಂಗವಾಗಿ ಹೋರಭಾಗದ ವಾಣಿಜ್ಯ ವ್ಯಾಪರಿಗಳಿಗೆ ಅಂಗಡಿ ಮುಗ್ಗಟ್ಟುಗಳಿಗೆ ಅವಕಾಶವಿಲ್ಲ. ಕೇವಲ ಸ್ಥಳೀಯರು ಮಾತ್ರ ಕೋವಿಡ್ ಮಾರ್ಗ ಸೂಚಿ ಅನ್ವಯ ಹಣ್ಣು ಕಾಯಿ ಮಾರಟ ಮಾಡಬೇಕು. ಹುಣ್ಣಿಮೆ ಅಂಗವಾಗಿ ದೇವಸ್ಥಾನದಲ್ಲಿ ಎಂದಿನಂತೆ ನೆಡೆಯುವ ಸಂಪ್ರದಾಯದ ಪೂಜೆ.
ಧಾರ್ಮಿಕ ಕಾರ್ಯಗಳಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು. ಹಾಲಮ್ಮನ ತೋಪಿನಲ್ಲಿ ಎರಡು ಕಡೆ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗು ತ್ತಿದ್ದು ಉಚ್ಚಂಗಿ ದುರ್ಗದ ಮೇಲೆ ಬರುವ ಭಕ್ತರಿಗೆ ತಂಗಲು ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾ ಗುತ್ತಿದ್ದು ಉಚ್ಚಂಗಿ ದುರ್ಗದ ಸಾರ್ವಂಗಿಣ ಅಭಿವೃದ್ದಿಗೆ ಒತ್ತು ನೀಡಲಾಗವುದು ಎಂದರು.
ದಾರ್ಮೀಕ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ. ತಹಶಿಲ್ದಾರ್ ನಂದೀಶ, ಸಿ.ಪಿ.ಐ. ನಾಗರಾಜ. ಕಮ್ಮಾರ ಮಾತನಾಡಿ ಜಾತ್ರೆಯಲ್ಲಿ ಗುಂಪು ಸೇರುವು ದನ್ನು ತಪ್ಪಿಸಲು ಗ್ರಾಮವನ್ನು ಪ್ರವೇಶಿಸುವ ಅಣಿಜಿ ರಸ್ತೆ. ಹರಪನಹಳ್ಳಿ ರಸ್ತೆ. ಬೇವಿನಹಳ್ಳಿ ರಸ್ತೆ. ಹಾಲಮ್ಮನ ತೋಪಿನ ರಸ್ತೆ. ಅಣಜಿಗೇರಿ. ರಾಮಘಟ್ಟ ರಸ್ತೆ ಗುಡ್ಡಕ್ಕೆ ಪ್ರವೇಶಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಭಕ್ತರು ಬರದಂತೆ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗವುದು ಭಕ್ತರು ಕರೋನಾ ಕಡಿಮೆ ಯಾಗುವವರೆಗೆ ಮನೆಯಲ್ಲಿ ದೇವಿಯ ಪೂಜೆ ನೇರವೇರಿಸಿ ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ದೇವದಾಸಿ ಪುನರ್‌ವಸತಿ ವಿಮೋಚನಾ ಯೋಜನಾಧಿಕಾರಿ ಪ್ರಜ್ಞಾ ಪಾಟೀಲ್ ಇತರರು ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ, ಅರಸೀಕೆರೆ ಪಿಎಸ್‌ಐ ನಾಗರತ್ನಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಕಮ್ಮ, ಸದಸ್ಯರಾದ ಹಾಲೇಶ್, ಪಿ. ಕೆಂಚಪ್ಪ, ಕಾಳಮ್ಮ ಯುವರಾಜ, ಮಮತಾ ಸಿದ್ದನಗೌಡ, ಮುಖಂಡರಾದ ಟಿ.ಹನುಮಂತಪ್ಪ, ಫಣಿಯಾಪುರ ಲಿಂಗರಾಜ್, ಬಾಲೇನಹಳ್ಳಿ ಕೆಂಚನಗೌಡ, ಸೊಕ್ಕೆನಾಗರಾಜ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಉಮೇಶ್, ದೇವಸ್ಥಾನದ ರಮೇಶ್ ಸೇರಿದಂತೆ ಇತರರು ಇದ್ದರು.