Thursday, 12th December 2024

Vande Bharat Express: ಶೀಘ್ರದಲ್ಲೇ ಶಿವಮೊಗ್ಗಕ್ಕೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ

Vande Bharat Train

ಬೆಂಗಳೂರು: ಕರ್ನಾಟಕದ ವಿವಿಧ ಮಾರ್ಗದಲ್ಲಿ ಸದ್ಯ 8 ವಂದೇ ಭಾರತ್ ರೈಲುಗಳು ಸಂಚಾರ ಮಾಡುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಶೀಘ್ರದಲ್ಲೇ ಇನ್ನೂ 3 ಹೊಸ ವಂದೇ ಭಾರತ್ ರೈಲು (Vande Bharat Express) ಸೇವೆ ಆರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಬಗ್ಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರು ಮಾಹಿತಿ ನೀಡಿದ್ದು, ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಶೀಘ್ರವೇ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು- ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆ ಹಲವು ದಿನದಿಂದ ಕೇಳಿ ಬರುತ್ತಿತ್ತು. ಸದ್ಯ ಶಿವಮೊಗ್ಗಕ್ಕೆ ಜನ ಶತಾಬ್ದಿ ರೈಲು ಸಂಚಾರವಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಿದೆ. ಆದರೆ, ಬೆಂಗಳೂರು-ಮಲೆನಾಡ ಹೆಬ್ಬಾಗಿಲು ಸಂಪರ್ಕಿಸಲು ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಸಚಿವರಿಗೆ ಸಹ ಮನವಿ ಸಲ್ಲಿಕೆ ಮಾಡಲಾಗಿತ್ತು.

ಇನ್ನು ಸಂಸದ ಬಿ.ವೈ.ರಾಘವೇಂದ್ರ ಈಗಾಗಲೇ ಬೆಂಗಳೂರಿನ ಯಶವಂತಪುರ-ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ನಡುವೆ ನೈಋತ್ಯ ರೈಲ್ವೆ ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲು ಮಾರ್ಗದ ಪಟ್ಟಿಯೊಂದನ್ನು ಮಾಡಿದ್ದು, ಅದರಲ್ಲಿ ಶಿವಮೊಗ್ಗ-ಬೆಂಗಳೂರು ಮಾರ್ಗವಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | PM-KISAN: ಅನ್ನದಾತನಿಗೆ ಗುಡ್‌ನ್ಯೂಸ್‌! ಶೀಘ್ರದಲ್ಲೇ ಪಿಎಂ-ಕಿಸಾನ್ ಯೋಜನೆಯ ಕಂತು ರಿಲೀಸ್‌; ಅಪ್ಲೈ ಮಾಡುವುದು ಹೇಗೆ?

ನಮ್ಮ ಮೆಟ್ರೋದಲ್ಲಿ ಕೆಲಸ ಖಾಲಿ ಇದೆ! 2.06 ಲಕ್ಷ ರೂ. ಸಂಬಳ

ಬೆಂಗಳೂರು: ನಮ್ಮ ಮೆಟ್ರೋ (Namma metro) ಸಂಸ್ಥೆ ಖಾಲಿ ಇರುವ ಹುದ್ದೆಗಳಿಗೆ (jobs) ನೇಮಕಾತಿ (hiring) ಆರಂಭಿಸಿದೆ. ಜನರಲ್ ಮ್ಯಾನೇಜರ್, ಸಿಗ್ನಲ್ ಮ್ಯಾನೇಜರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಬಗ್ಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಸೆ.25 ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 2,06,250 ರೂಪಾಯಿ ಸಂಬಳ ಪಡೆಯಲಿದ್ದಾರೆ.

5 ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಜನರಲ್ ಮ್ಯಾನೇಜರ್( ಕಾಂಟ್ರಾಕ್ಟ್/ ಸ್ಟೋರ್), ಜನರಲ್ ಮ್ಯಾನೇಜರ್ (ಟ್ರಾಕ್ಷನ್), ಜನರಲ್ ಮ್ಯಾನೇಜರ್(ಪಿ ವೇ) ಹಾಗೂ ಜನರಲ್ ಮ್ಯಾನೇಜರ್ (ಸಿಗ್ನಲಿಂಗ್) ಹುದ್ದೆಗಳಿಗ ನೇಮಕಾತಿ ನಡೆಯಲಿದೆ. ಗರಿಷ್ಠ ವಯೋಮತಿ ಕಾಂಟ್ರಾಕ್ಟ್ ಹುದ್ದೆಗೆ 58 ವರ್ಷ ಹಾಗೂ ಡೆಪ್ಯೂಟೇಶನ್‌ಗೆ 55 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ತಿಂಗಳ ವೇತನ ಸಿಗಲಿದೆ. ಇನ್ನು ಅರ್ಹತೆ ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್, ಮೆಕಾನಿಕಲ್, ಸಿವಿಲ್ ಎಂಜಿನೀಯ ರಿಂಗ್ ಪದವಿ, ಕಂಪ್ಯೂಟರ್ ಸೈನ್ಸ್, ಟೆಲಿಕಮ್ಯೂನಿಕೇಶನ್ ಪದವಿಯಲ್ಲಿ ಯಾವುದಾದರು ಪದವಿ ಹೊಂದಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳು ಆರಂಭಿಕ ಮೂರು ವರ್ಷ ಕಾಂಟ್ರಾಕ್ಟ್‌ನಲ್ಲಿ ಕೆಲಸ ಮಾಡಬೇಕು. ಬಳಿಕ ಅವರ ಪರ್ಫಾಮೆನ್ಸ್ ಆಧಾರದಲ್ಲಿ ಮುಂದಿನ ನಿರ್ಧಾರವನ್ನು ನಮ್ಮ ಮೆಟ್ರೋ ಸಂಸ್ಥೆ ತೆಗೆದುಕೊಳ್ಳಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಿದ ವರ ಅಪ್ಲಿಕೇಶನ್ ಹಾಗೂ ದಾಖಲೆ ಪರೀಶಿಲಿಸಿ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಹೀಗೆ ಶಾರ್ಟ್ ಲಿಸ್ಟ್ ಮಾಡಿದವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ.

ವಿದ್ಯಾರ್ಹತೆ ಜೊತೆಗೆ ಕನ್ನಡ ಭಾಷೆಗೂ ಆದ್ಯತೆ ನೀಡಲಾಗಿದೆ. ರಾಜಕೀಯ ಅಥವಾ ಯಾವುದೇ ಮೂಲಗಳಿಂದ ನೇಮಕಾತಿಗೆ ವಶೀಲಿ ಮಾಡಿಸಿದರೆ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ಅನರ್ಹ ಮಾಡಲಾಗುತ್ತದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸೂಕ್ತ ಕ್ಷೇತ್ರದಲ್ಲಿ ಅನುಭವ ಹಾಗೂ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನಮ್ಮ ಮೆಟ್ರೋ ಆಯ್ಕೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಐದು ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಆಯಾ ಹುದ್ದೆಗಳಿಗೆ ವಿದ್ಯಾರ್ಹತೆ, ಅನುಭವ, ಪ್ರತಿಭೆಯ ಆಧಾರದಲ್ಲಿ ಆಯ್ಕೆ ನಡೆಯಲಿದೆ. ನಮ್ಮ ಮೆಟ್ರೋ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಅಸಕ್ತರು ಹಾಗೂ ಅರ್ಹರು ಸೆ.25ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.