ಇಂಡಿ: ಕೆಟ್ಟದ್ದನ್ನು ನೋಡಲಿಲ್ಲ, ಕೆಟ್ಟದ್ದನ್ನು ಕೇಳಲಿಲ್ಲ, ಕೆಟ್ಟದ್ದನ್ನು ಮಾತನಾಡಲಿಲ್ಲ, ಹಾಗೇಯೇ ವಿಜಯಪೂರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮಿಗಳಾಗಿದ್ದರು. ಆದರೆ ಶ್ರೀಗಳು ಯಾವುದೇ ನಿರಾಪೇಕ್ಷೆ ಜೀವನ ಸಿದ್ದೇಶ್ವರ ಶ್ರೀಗಳದಾಗಿತ್ತು ಎಂದು ಸಂಯುಕ್ತ ಕರ್ನಾಟಕ ಪತ್ರಿಕೆ ಜಿಲ್ಲಾ ವರದಿಗಾರ ವಾಸುದೇವ ಹೆರಕಲ್ಲ ಅಭಿಪ್ರಾಯಪಟ್ಟರು.
ಪಟ್ಟಣದ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಕಳೆದ ರವಿವಾರ ರಾತ್ರಿ ಆಯೋಜಿಸಿದ್ದ ೬೮ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ನಮ್ಮ ದೇವರು ಸಿದ್ದೆಶ್ವರ ಶ್ರೀಗಳು ಎಂಬ ಉಪನ್ಯಾಸ ಮಂಡಿಸಿ ಮಾತನಾಡಿದ ಅವರು ಸಿದ್ದೇಶ್ವರ ಶ್ರೀಗಳೆಂದರೆ ಸೂರ್ಯನಿದ ್ದ ಹಾಗೇ ಎಂದರು.
ಸಿದ್ದೇಶ್ವರ ಶ್ರೀಗಳು ಅನುಭಾವಿಗಳಾಗಿದ್ದರು. ಬಹುತ್ತೇಕ ಇಂತಹ ಸಂತರು ಜಗತ್ತಿನ ಯಾವುದೇ ಮಠ, ಮಂದಿರಗಳಲ್ಲಿ ಕಾಣಿಲ್ಲ. ಅವರು ಯಾವತ್ತೂ ಕೂಡಾ ಪ್ರಾಣಿ, ಪಕ್ಷಿಗಳಿಗೆ ಪ್ರೀತಿಸುವ ಗುಣ ಅವರ ಹತ್ತಿರವಿತ್ತು. ಅವರ ಪ್ರವಚನ ಸಾರವೂ ಕೂಡ ಹಾಗೇ ಯೇ ಇರುತ್ತಿತ್ತು. ಎಂದು ಉಪನ್ಯಾಸ ಮಂಡಿಸಿದ ವಾಸುದೇವ ಹೆರಕಲ್ಲ ಹುಣ್ಣಿಮೆ ಬೆಳಕು ಕಾರ್ಯಕ್ರಮ ಹುಣ್ಣಿಮೆ ಬೆಳದಿಂಗ ಳಲ್ಲೆ ಆಯೋಜಿಸಿದರೆ ಇನ್ನು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ಬರುತಿತ್ತು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕಿನ ಹೆಸರು ತಂದಿರುವ ಗುರುಮಾತೆ ಶ್ರೀಮತಿ ಸರೋಜನಿ ಮಾವಿನಮರ ಅವರಿಗೆ ಶ್ರೀಗಳು ಶಾಲು ಹೊದಿಸಿ ಸನ್ಮಾನಿಸಿದರು.
ಸಮಾರಂಭದ ಅದ್ಯಕ್ಷತೆ ಖ್ಯಾತ ಸಂಶೋದಕ ಎಸ್.ಕೆ.ಕೊಪ್ಪಾ, ಮಾತನಾಡಿ ಸಿದ್ದೇಶ್ವರ ಶ್ರೀಗಳ ಕುರಿತು ಉಪನ್ಯಾಸ ಮಂಡಿಸಿದ ವಾಸುದೇವ ಹೆರಕಲ್ಲ ಹೇಳುವ ಹಾಗೇ ಸಿದ್ದೇಶ್ವರ ಶ್ರೀಗಳು ಇದ್ದರು ಎಂದರು.
ಸಂಯುಕ್ತ ಕರ್ನಾಟಕ ಪತ್ರಿಕೆ ಜಿಲ್ಲಾ ವರದಿಗಾರ ವಾಸುದೇವ ಹೆರಕಲ್ಲ ವಿಜಯಪೂರ ಸಮಾರಂಭದ ದಿವ್ಯ ಸಾನಿದ್ಯವನ್ನು ಪಟ್ಟಣದ ಡಾ. ಸ್ವರೂಪಾನಂದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಪಟ್ಟಣದ ನೋದಣಿ ಇಲಾಖೆಯ ಆವರಣದ ಮುಂಬಾಗದಲ್ಲಿ ಬಾಂಡ್ ರೈಟರ್ ಸಿದ್ದಪ್ಪ ಕೊಪ್ಪಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮುಖ್ಯೋಪಾದ್ಯಾಯ ರಾಘವೇಂದ್ರ ಕುಲಕರ್ಣಿ, ಹುಣ್ಣಿಮೆ ಬೆಳಕು ಕಾರ್ಯಕ್ರಮದ ಅದ್ಯಕ್ಷ ಆಯ್.ಬಿ. ಸುರ ಪೂರ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿಯ ಅದ್ಯಕ್ಷ ಗೀರಿಶ ಪೋಪಡಿ, ಎಚ್.ಎಸ್.ಏಳೆಗಾಂವ, ಶಿವಲಿಂಗಪ್ಪ ಪಟ್ಟದಕಲ್ಲ, ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಆರ್.ವಿ.ಪಾಟೀಲ, ಕೋಶಾದ್ಯಕ್ಷ ಸೋಮಶೇಖರ ಸುರಪೂರ, ಉಪಾದ್ಯಕ್ಷ ಬಿ.ಎಸ್.ಪಾಟೀಲ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿಯ ಕಾರ್ಯದರ್ಶಿ ಪ್ರಭು ನಾಡಗೌಡ, ಜಹೂರ ಬೇಗ ಮಿರ್ಜಿ, ನಿವೃತ ಉಪನ್ಯಾಸಕ ಎಂ.ಜೆ. ಪಾಟೀಲ, ಉಪಸ್ಥಿತರಿದ್ದರು.
ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು. ಆರ್.ವ್ಹಿ.ಪಾಟೀಲ ನಿರೂಪಿಸಿ ವಂದಿಸಿದರು.
*
ಸೂರ್ಯನಿಗೆ ಹೇಗೆ ? ಕತ್ತಲೆಯ ಅರಿವಿಲ್ಲವೋ ಅದೇ ನಿಟ್ಟಿನಲ್ಲಿ ಶ್ರೀಗಳಿಗೆ ಕೆಟ್ಟದ್ದರ ಕುರಿತು ಅರಿವಿಲ್ಲ. ಸಂತನೆAದರೆ ನಿರ್ಮೊಹಿ ಯಾಗಿರಬೇಕು. ಅಂತರ ಮುಖಿಯಾಗಿದ್ದರು. ಶ್ರೀಗಳು ಸಮದÀರ್ಶಿಯಾಗಿದ್ದರು. ಜೊತೆಗೆ ಶ್ರೀಗಳು ಸುಖ-ದುಖಃಗಳನ್ನು ಸಮಾನ ವಾಗಿ ಸ್ವೀಕರಿಸುತ್ತಿದ್ದರು. ಅಂತಹ ದೈವಿ ಶಕ್ತಿ ಸದ್ಗುಣ ಶ್ರೀಗಳದ್ದಾಗಿತ್ತು.