Friday, 22nd November 2024

ವೇತನ ಪರಿಷ್ಕರಣೆ: ಮುಂದುವರಿದ ಎಚ್‌ಎಎಲ್ ಆಡಳಿತ ಮಂಡಳಿ-ನೌಕರರ ನಡುವಿನ

ಎಚ್‌ಎಎಲ್ ಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಿಯಲ್ಲಿ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ

ಶೇ.13ರಿಂದ ಶೇ.35ರವರೆಗೆ ವೇತನ ಪರಿಷ್ಕರಣೆಗೆ ನೌಕರರು ಒತ್ತಾಾಯ ಹೆಚ್ಚಿಿಸುವ ಪ್ರಶ್ನೆೆಯೇ ಇಲ್ಲ ಎಂದ

ಸಾರ್ವಜನಿಕ ಸಹಭಾಗಿತ್ವದ ಪ್ರಮುಖ ವಿಮಾನ ತಯಾರಕ ಸಂಸ್ಥೆೆ ಎಚ್‌ಎಎಲ್, ಉದ್ಯೋೋಗಿಗಳ ವೇತನ ಪರಿಷ್ಕರಣೆ ಸಂಬಂಧಿಸಿ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ನಡುವಿನ ಬಿಕ್ಕಟ್ಟು ಮುಂದುವರಿದಿದೆ.

ಒಂದೆಡೆ, ನೌಕರರು ಇತರ ರಕ್ಷಣಾ ಸಾರ್ವಜನಿಕ ಸಹಭಾಗಿತ್ವದ ಘಟಕಗಳಲ್ಲಿನ (ಡಿಪಿಎಸ್‌ಯು) ಒಪ್ಪಂದದ ಅನುಸಾರ ವೇತನ ಪರಿಷ್ಕರಣೆ ಮಾಡಬೇಕು ಎಂಬ ಹಟಕ್ಕೆೆ ಬಿದ್ದಿದ್ದರೆ, ಈಗಾಗಲೇ ನೌಕರರಿಗೆ ಗರಿಷ್ಟ ಮಟ್ಟದ ವೇತನ ಪರಿಷ್ಕರಣೆ ನೀಡಲಾಗಿದೆ. ಅದನ್ನು ಹೆಚ್ಚಿಿಸುವ ಪ್ರಶ್ನೆೆಯೇ ಇಲ್ಲ ಎಚ್‌ಎಎಲ್ ಸ್ಪಷ್ಟಪಡಿಸಿದೆ. ಸಂಸ್ಥೆೆ ಶೇ. 9ರಿಂದ ಶೇ. 24ರವರೆಗೆ ವೇತನ ಪರಿಷ್ಕರಣೆಗೆ ಪ್ರಸ್ತಾಾವನೆ ಮುಂದಿಟ್ಟಿಿದೆಯಾದರೂ ನೌಕರರ ಒಕ್ಕೂಟ ಶೇ.13ರಿಂದ ಶೇ.35ರವರೆಗೆ ಪರಿಷ್ಕರಣೆ ಬೇಡಿಕೆಯಿಟ್ಟಿಿದೆ.

ಪ್ರತಿಭಟನೆ ಕುರಿತು ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಎಚ್‌ಎಎಲ್ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಉದ್ಯೋೋಗಿಗಳಿಗೆ ಶೇ. 9ರಿಂದ ಶೇ. 24ವರೆಗೆ ವೇತನ ಪರಿಷ್ಕರಣೆ ಮಾಡಲಾಗಿದೆ. ಸರಾಸರಿ ಶೇ. 17ರಷ್ಟು ವೇತನ ಪರಿಷ್ಕರಣೆಯಾಗಿದ್ದು, ಉದ್ಯೋೋಗಿಗಳಿಗೆ 16 ಸಾವಿರ ರು.ವರೆಗೆ ವೇತನ ಹೆಚ್ಚಳವಾಗಲಿದೆ ಎಂದರು.

ಸಂಸ್ಥೆೆ ಕೈಗೊಂಡಿರುವ ಹಾಲಿ ವೇತನ ಹಿಂದೆ ಸರಿಯುವುದಿಲ್ಲ. ಹಾಲಿ ಏರಿಕೆ ಮೊತ್ತ ಸಂಸ್ಥೆೆ ಹಿತದೃಷ್ಟಿಿಯಿಂದ ಸರಿಯಾಗಿದೆ. ಉತ್ಪಾಾದನಾ ವೆಚ್ಚ ಏರಿಕೆ ಹಾಗೂ ಮಾರುಕಟ್ಟೆೆಯಲ್ಲಿ ಸ್ಪರ್ಧಾತ್ಮಕತೆ ಮೈಗೂಡಿಸಿಕೊಳ್ಳುವುದು ಅನಿವಾರ್ಯ. ಈ ವಿಷಯವನ್ನು ನೌಕರರಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ, ಅಧಿಕಾರಿ ಶ್ರೇಣಿ ರೀತಿ ವೇತನ ಹೆಚ್ಚಳಕ್ಕೆೆ ಆಗ್ರಹ ಕೇಳಿಬಂದಿದೆ. ಆದರೆ, ಇದು ಸಮಂಜಸ ಅಲ್ಲ, ನ್ಯಾಾಯಯುತವೂ ಅಲ್ಲ. ಪ್ರತಿ ಐದು ವರ್ಷಕ್ಕೆೆ ಒಮ್ಮೆೆ ವೇತನ ಪರಿಷ್ಕರಣೆ ಮಾಡಲಾಗುತ್ತಿಿದೆ ಎಂದರು.

ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ ಮಾತನಾಡಿ, ಸಂಸ್ಥೆೆಗೆ ನಷ್ಟವಾಗದು. ಮುಂದಿನ ದಿನಗಳಲ್ಲಿ ಉತ್ಪಾಾದನೆ ಸರಿದೂಗಿಸಿಕೊಳ್ಳಲಾಗುವುದು. ಇನ್ನೂ ಮೂರು ವರ್ಷಕ್ಕೆೆ ಆಗುವಷ್ಟು ಆರ್ಡರ್ ಇರುವುದರಿಂದ ಸಂಸ್ಥೆೆಗೆ ತೊಂದರೆ ಇಲ್ಲ. ಇನ್ನೂ ಬೇರೆ ಆರ್ಡರ್ ಸಿಗುವ ಹಂತದಲ್ಲಿದೆ. ಮುಂದೆ ಹತ್ತು ವರ್ಷಕ್ಕೆೆ ಬೇಕಿರುವರುವಷ್ಟು ಉತ್ಪಾಾದನೆಯತ್ತ ಸಂಸ್ಥೆೆ ದೃಷ್ಟಿಿಹರಿಸಿದೆ. ಈಗಲೂ ನಮ್ಮ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆೆ ಬರುವ ನಿರೀಕ್ಷೆ ಇದೆ. ಇದನ್ನು ನೌಕರ ವರ್ಗಕ್ಕೆೆ ತಿಳಿಸಲಾಗಿದೆ. ಸಂಸ್ಥೆೆ ಆರ್ಥಿಕವಾಗಿ ಸುಸ್ಥಿಿತಿಯಲ್ಲಿದೆ. ನೌಕರರಿಗೆ ಸಂಬಳ ನೀಡಲು ಹಣ ಇಲ್ಲವೆಂಬ ಮಾತು ತಿಳಿಸಿದರು.

ಸಂಸ್ಥೆೆ ಲಾಭದಲ್ಲಿದೆ. ಕಳೆದ ಆರೇಳು ತಿಂಗಳಲ್ಲಿ 9,500 ಕೋಟಿ ರು. ಬಾಕಿ ಪಾವತಿಯಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಸುಮಾರು 60 ಸಾವಿರ ಕೋಟಿ ರು. ಮೌಲ್ಯದ ಕಾರ್ಯಾದೇಶ ದೊರೆತಿವೆ. ಮೂರು ವರ್ಷಗಳ ನಂತರ ಯೋಜನೆಗಳ ಕುರಿತು ಅನೇಕ ಸಂಸ್ಥೆೆಗಳೊಂದಿಗೆ ಮಾತುಕತೆ ನಡೆಯುತ್ತಿಿವೆ ಎಂದರು.

ಗುತ್ತಿಗೆ ಕಾರ್ಮಿಕರಿಂದ ಮಾತ್ರ ಕೆಲಸ
ಆಡಳಿತ ಮಂಡಳಿ ಬಿಂಬಿಸುತ್ತಿಿರುವಂತೆ ಶೇ.51ರಷ್ಟು ನೌಕರರು ಕೆಲಸದಲ್ಲಿ ತೊಡಗಿಲ್ಲ. ಸದ್ಯ ಅಲ್ಲಿ ಗುತ್ತಿಿಗೆ ಮಾತ್ರ ಕಾರ್ಯನಿರ್ವಹಿಸುತ್ತಿಿದ್ದಾಾರೆ. ನೌಕರರ ಒಕ್ಕೂಟವು ಇತರ ಡಿಪಿಎಸ್‌ಯು ಮಾದರಿಯಲ್ಲಿ ವೇತನ ಪರಿಷ್ಕರಣೆಗೊಳಿಸುವಂತೆ ಬೇಡಿಕೆ ಇಟ್ಟಿಿದೆ. ಇವುಗಳು 2007-11 ಹಾಗೂ 2012-16ರ ಐದು ವರ್ಷಗಳ ಅವಧಿ ವೇತನದ ಒಪ್ಪಂದಕ್ಕೆೆ ಒಪ್ಪಿಿಗೆ ಸೂಚಿಸಿದ್ದವು. ನೌಕರರ ಮೂಲ ವೇತನದ ಜತೆಗೆ ನೀಡಲಾಗುತ್ತಿಿದ್ದ ಪ್ರತ್ಯೇಕ ಭತ್ಯೆೆಗಳನ್ನು ವಿಲೀನಗೊಳಿಸಲು ಸಂಸ್ಥೆೆ ನಿರ್ಧರಿಸಿವೆ. ಇದರಿಂದ ತಮಗೆ ಲಾಭಕ್ಕಿಿಂತ ಹೆಚ್ಚು ನಷ್ಟವಾಗುತ್ತದೆ ಎಂದು ಎಚ್‌ಎಎಲ್ ನೌಕರರ ಒಕ್ಕೂಟದ ಕಾರ್ಯದರ್ಶಿ ಸೂರ್ಯದೇವರ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

18 ಸಾವಿರ ಮುಷ್ಕರ
ನೌಕರರ ವೇತನ ಸಮಸ್ಯೆೆಯನ್ನು ಒಂದೆರಡು ದಿನಗಳಲ್ಲಿ ಬಗೆಹರಿಸಲಾಗುವುದು ಎಂದು ಆಡಳಿತ ಮಂಡಳಿ ವಿಶ್ವಾಾಸ ವ್ಯಕ್ತಪಡಿಸುತ್ತಿಿದೆ. ಆದರೆ, ಈಗಾಗಲೇ ಉದ್ಯೋೋಗಿಗಳು ಅನಿರ್ದಿಷ್ಟಾಾವಧಿ ಮುಷ್ಕರಕ್ಕೆೆ ಕರೆ ನೀಡಿದ್ದು, ಬೇಡಿಕೆಗಳಲ್ಲಿ ಯಾವುದೇ ರಾಜಿಯಿಲ್ಲ, ಎಲ್ಲ ಸನ್ನಿಿವೇಶಗಳನ್ನು ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ. ಈ ಕಿತ್ತಾಾಟದಿಂದ ದೇಶದ ರಕ್ಷಣಾ ಇಲಾಖೆಗೆ ತೇಜಸ್‌ನಂತಹ ಅತ್ಯುತ್ತಮ ಸಾಮರ್ಥ್ಯದ ಲಘು ಯುದ್ಧ ವಿಮಾನ ಕೊಡುಗೆ ನೀಡಿದ ಎಚ್‌ಎಎಲ್ ಸಂಸ್ಥೆೆಯ ಉತ್ಪಾಾದನಾ ಪ್ರಕ್ರಿಿಯೆ ನನೆಗುದಿಗೆ ಬಿದ್ದಿದೆ. ದೇಶಾದ್ಯಂತ ಘಟಕಗಳಲ್ಲಿ ಸುಮಾರು 18 ಸಾವಿರ ನೌಕರರು ಕರ್ತವ್ಯದಿಂದ ದೂರ ಉಳಿದು ಮುಷ್ಕರ ನಡೆಸುತ್ತಿಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಸಂಸ್ಥೆೆಯಲ್ಲಿ ಇಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ. ಇದೊಂದು ಸಣ್ಣ ಸಮಸ್ಯೆೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಸಂಸ್ಥೆೆಯಲ್ಲಿ ಹಣದ ಕೊರತೆಯಿಲ್ಲ.
-ವಿ.ಎಂ.ಚಮುಲ, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ

ಎಚ್‌ಎಎಲ್ ನೌಕರರ ಒಕ್ಕೂಟದ ಕಾರ್ಯದರ್ಶಿ ಸೂರ್ಯದೇವರ ಚಂದ್ರಶೇಖರ್ ನೇತೃತ್ವದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿತ್ತು.