Sunday, 15th December 2024

ಬಾಲ್ಯ ವಿವಾಹದಂತೆ ಬಾಲ್ಯ ಸನ್ಯಾಸ ನಿಷೇಧಿಸಬೇಕು: ವಿದ್ಯಾಭೂಷಣರು

ವಿಶ್ವವಾಣಿ ಕ್ಲಬ್‌ ಹೌಸ್ (ಸಂವಾದ ೧೭)

ಒತ್ತಡಕ್ಕೆ ಒಳಗಾಗಿ ಸನ್ಯಾಸಿಯಾದೆ; ಪೀಠ ತ್ಯಾಗಕ್ಕಾಗಿ ಪಶ್ಚಾತ್ತಾಪವಿಲ್ಲ

ಅಪ್ರಾಪ್ತ ವಯಸ್ಸಿನಲ್ಲಿ ಸನ್ಯಾಸ ನೀಡುವುದು ತಪ್ಪು. ಅದರಿಂದ ವಿಪರಿಣಾಮಗಳು ಬಹಳಷ್ಟಾಗುತ್ತದೆ. ಬಾಲ್ಯ ವಿವಾಹ ನಿಷೇಧದಂತೆ ಬಾಲಸನ್ಯಾಸವನ್ನು ನಿಷೇಧಿಸಬೇಕು ಎಂದು ವಿದ್ಯಾಭೂಷಣರು ಅಭಿಪ್ರಾಯಪಟ್ಟರು.

‘ವಿಶ್ವವಾಣಿ ಕ್ಲಬ್‌ಹೌಸ್’ ಆಯೋಜಿಸಿದ್ದ ‘ಶ್ರೀ ವಿದ್ಯಾ ಭೂಷಣ ಗುಣ-ಗಾನ’ ಸಂವಾದದಲ್ಲಿ ಮಾತನಾಡಿದ ವಿದ್ಯಾ ಭೂಷಣರು, ಅಪ್ರಾಪ್ತ ವಯಸಿನಲ್ಲಿ ಸ್ವಂತ ತೀರ್ಮಾನ ತಗೆದುಕೊಳ್ಳಲು ಆಗದಿರುವಾಗ ಸನ್ಯಾಸತ್ವ ನೀಡುವುದು ಸರಿಯಲ್ಲ. ಇದರಿಂದ ವಿಪರಿಣಾಮ ಹೆಚ್ಚಿರುತ್ತದೆ. ಬಾಲ್ಯ ವಿವಾಹವನ್ನು ಹೇಗೆ ನಿಷೇಽಸಲಾಗಿದೆಯೋ ಹಾಗೇ ಬಾಲಸನ್ಯಾಸವನ್ನು ನಿಷೇಧಿಸಬೇಕು. ಇಲ್ಲದಿದ್ದರೆ ತುಂಬ ಮನಸುಗಳು ಕೆಟ್ಟು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ಜಿಲ್ಲೆಯ ಸೀತೂರಿನಲ್ಲಿ ಜನಿಸಿ, ಕುಕ್ಕೆಸುಬ್ರಮಣ್ಯಕ್ಕೆ ಪೋಷಕರೊಂದಿಗೆ ಆಗಮಿಸಿ, ೧೫ನೇ ವರ್ಷಕ್ಕೆ ಸನ್ಯಾಸತ್ವ ಸ್ವೀಕರಿಸಿ, ಬಳಿಕ
ಸನ್ಯಾಸತ್ವ ತೊರೆದು ವೈವಾಹಿಕ ಜೀವನದ ಜತೆಜತೆಗೆ ಸಂಗೀತದ ಆರಾಧನೆಯ ಬಗ್ಗೆ ವಿದ್ಯಾಭೂಷಣರು ಮಾತನಾಡಿದರು.

೧೫ನೇ ವರ್ಷದಲ್ಲಿ ಬಾಲಸನ್ಯಾಸತ್ವವನ್ನು ಕೊಡಿಸುವಾಗಲೇ ನನಗೆ ಇದಕ್ಕೆ ಒಪ್ಪಿಗೆ ಇರಲಿಲ್ಲ. ಒತ್ತಡಕ್ಕೆ ಮಣಿದು ಸನ್ಯಾಸತ್ವ ಸ್ವೀಕರಿಸಿದೆ. ಆದರೆ ಕುಕ್ಕೆ ಸುಬ್ರಮಣ್ಯದ ಪೀಠಾಽಪತಿಯಾಗಿ, ಸಂಗೀತ ಆರಾಧಿಸಿದರೂ, ಆಶ್ರಮವನ್ನು ತೊರೆಯಬೇಕು ಎನ್ನುವ ಇಚ್ಛೆ ಮಾತ್ರ ನನ್ನಿಂದ ದೂರಾಗಲಿಲ್ಲ. ಆದರೆ ಪೀಠ ತೊರೆದರೆ ನನ್ನ ತಂದೆ ಗೋವಿಂದಾಚಾರ್ಯರು ಹಾಗೂ ನನ್ನ ಗುರುಗಳಾದ ಪೇಜಾವರ ಶ್ರೀಗಳು ನೊಂದು ಕೊಳ್ಳುತ್ತಾರೆ ಎಂದು ಹಾಗೇ ತಡೆದುಕೊಂಡಿದ್ದೆ. ‘ಹುಚ್ಚು ಬಿಡದೇ ಮದುವೆಯಾಗಲ್ಲ.

ಮದುವೆಯಾಗದೇ ಹುಚ್ಚು ಬಿಡಲ್ಲ’ ಎನ್ನುವುದು ಖಾತ್ರಿಯಾಗುತ್ತಿದ್ದಂತೆ, ಒಬ್ಬ ಹುಡುಗಿಯನ್ನು ಪ್ರೀತಿಸಿ, ಗಟ್ಟಿಯಾಗಿ ಪ್ರಯತ್ನಿಸಬೇಕು ಎಂದು ಆಲೋಚಿಸಿ ಅದಕ್ಕೆ ಸಿದ್ಧನಾದೆ. ಆ ಸಮಯದಲ್ಲಿ ರಮಾ ಎನ್ನುವ ತರುಣಿಯ ಪರಿಚಯವಾಯಿತು. ಆಕೆಗೆ ನಾನು ಇಷ್ಟವಾದನೋ, ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಆಕೆ ಇಷ್ಟವಾದಳು. ತುಂಬಾ ಪ್ರಯತ್ನ ಪಟ್ಟು ವರ್ಷದ ಫೋನ್ ಮೂಲಕದ ಸಂಪರ್ಕದಿಂದ ಅವಳನ್ನು ಕೊನೆಗೂ ಒಲಿಸಿಕೊಂಡು ಮದುವೆಯಾದೆ ಎಂದು ಸನ್ಯಾಸತ್ವದಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನುಭವವನ್ನು ಹಂಚಿಕೊಂಡರು.

ತಂದೆ-ತಾಯಿಯರಿಂದ ವಿರೋಧವಿರಲಿಲ್ಲ: ಆಶ್ರಮವನ್ನು ತೊರೆದು ರಮಾಳನ್ನು ವಿವಾಹವಾಗಲು ಸಿದ್ಧನಾದೆ. ಇದಕ್ಕೆ ಅವರ ಪೋಷಕರ ಒಪ್ಪಿಗೆ ಇರಲಿಲ್ಲ. ಆದರೆ ಹೆಚ್ಚು ವಿರೋಧಿಸಲೂ ಇಲ್ಲ. ನಮ್ಮ ಮನೆ ಕಡೆಯಿಂದಲೂ ಹೆಚ್ಚು ವಿರೋಧ ಇರಲಿಲ್ಲ. ಆದ್ದರಿಂದ ದೇವರ ಸನ್ನಿದಿಯಲ್ಲಿ ವಿವಾಹ ನಡೆಯಿತು. ಅಲ್ಲಿಂದ ಸಂಸಾರ ಪ್ರಾರಂಭವಾಯಿತು. ಆದರೆ ಈ ಸಮಯದಲ್ಲಿ ನಾನು ನನ್ನ ಜೀವನದ ಉದ್ದಕ್ಕೂ, ವಿಶೇಷವಾಗಿ ನೆನಪು ಮಾಡಿಕೊಳ್ಳುವ ವ್ಯಕ್ತಿ ಎಂದರೆ ಪ್ರಿಯ ಮಿತ್ರ ಲಕ್ಷ್ಮೀಶ ತೋಳ್ಪಾಡಿ ಅವರು. ನಾನು ಆಶ್ರಮ ಸ್ವೀಕರಿಸಿದ ಮರುದಿನವೇ ನನ್ನೊಂದಿಗೆ ಸಂಸ್ಕೃತ ಅಧ್ಯಯನಕ್ಕೆಂದು ಆಶ್ರಮಕ್ಕೆ ಬಂದು ತೊಡಗಿಕೊಂಡರು. ಆದರೆ ಅವರಲ್ಲಿನ ವಿಶೇಷ ಪ್ರತಿಭೆ ನನಗೆ ಪ್ರಭಾವ ಬೀರಿದೆ. ಅವರೊಂದಿಗೆ ಹಗಲು ರಾತ್ರಿಯೆನ್ನದೇ ವಿಚಾರ ವಿನಿಮಯ ಮಾಡುತ್ತಿದೆವು. ಅವರಿಂದ ಆರ್‌ಎಸ್
ಎಸ್, ವಿಶ್ವಹಿಂದೂ ಪರಿಷತ್ ಸಂಘಟನೆಗಳ ಕುರಿತಾದ ಪರಿಚಯ ಅವರಿಂದ ಆಯಿತು. ವಿಶೇಷ ಪ್ರಭಾವ ಬೀರಿದ ವ್ಯಕ್ತಿ ಅವರು ಎಂದು ನೆನಪು ಮಾಡಿಕೊಂಡರು.

ವಿದ್ಯಾಭೂಷಣರ ಬಾಲ್ಯ: ಕ್ಲಬ್‌ಹೌಸ್ ಸಂವಾದದಲ್ಲಿ ವಿದ್ಯಾಭೂಷಣರು ತಮ್ಮ ಬಾಲ್ಯವನ್ನು ನೆನೆದರು. ಕುಕ್ಕೆ ಸುಬ್ರಮಣ್ಯ ಮಠಕ್ಕೆ ನಮ್ಮ ಅಜ್ಜನೂ ಮಠದ ನಿರ್ವಹಣೆಗೆ ಸಹಕರಿಸಲು ಬಂದಿದ್ದರು. ಆದ್ದರಿಂದ ಉಡುಪಿಯಿಂದ ಕುಕ್ಕೆಗೆ ಬಂದದ್ದು. ಜೀವನದಲ್ಲಿ ಮುಖ್ಯಪಾತ್ರ ವಹಿಸಿದ ಸಂಗೀತದ ಕುರಿತಾದ ಸಂಸ್ಕಾರ ಕುಕ್ಕೆ ಸುಬ್ರಮಣ್ಯದಲ್ಲಿ ಲಭಿಸಿತು. ತಂದೆ ಗೋವಿಂದಾಚಾರ್ಯರು ಸಂಗೀತ ಬಲ್ಲವರಾಗಿದ್ದರು. ತಂದೆಯಿಂದಲೇ ನಾನು ಸಂಗೀತವನ್ನು ಕಲಿತೆ. ಆದ್ದರಿಂದ ನನಗೆ ವಿಶಿಷ್ಟ ಸಂಗೀತ ಸಂಸ್ಕಾರವಾಗಿದೆ ಎಂದು ನೆನಪಿಸಿಕೊಂಡರು.

ಸನ್ಯಾಸತ್ವದ ಬಗ್ಗೆ ಮಾತನಾಡಿದ ಅವರು, ವಿದ್ಯಾಸಿಂಧು ತೀರ್ಥರ ಕಲಕಮಲ ಸಂಜಾತರಾಗಿ ಸನ್ಯಾಸ ಸ್ವೀಕರಿಸಿದಾಗ ೧೫ ವರ್ಷದ ಪ್ರಾಯ. ಸನ್ಯಾಸ ಸ್ವೀಕರಿಸುವ ಕಷ್ಟ ಕಾರ್ಪಣ್ಯದ ಅನುಭವ ಇರಲಿಲ್ಲ. ಆದರೆ ಮನಸಿನಲ್ಲಿ, ಸನ್ಯಾಸತ್ವ ನನಗೆ ಬೇಕಾದದ್ದಲ್ಲ ಎಂದು ಅನಿಸಿತ್ತು. ಆದರೂ ಒತ್ತಡಕ್ಕೆ ಒಳಗಾಗಿ ಸನ್ಯಾಸ ಸ್ವೀಕರಿಸಬೇಕಾಯಿತು. ನನಗೆ ಒಪ್ಪಿಗೆ ಇಲ್ಲದ, ಸಮ್ಮತವಲ್ಲದ ಸನ್ಯಾಸ ಜೀವನ ನಡೆಸಬೇಕಾಯಿತು ಎಂದು ನೆನಪು ಮಾಡಿಕೊಂಡರು.

ಪೇಜಾವರರೊಂದಿಗಿನ ಒಡನಾಟ: ಬಳಿಕ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಅಧ್ಯಾತ್ಮಕದ ಶಾಸಗ್ರಂಥಗಳ ಶಿಕ್ಷಣಕ್ಕೆ ಉಡುಪಿಗೆ ಬಂದೆ. ಅವರ ಕೃಪೆಯಿಂದ ಉತ್ತಮ ಪಾಠ ಪ್ರವಚನ ನಡೆಯಿತು. ಆಗಲೇ ನನ್ನ ಸಂಗೀತದ ಅಭಿರುಚಿಯನ್ನು ನನ್ನನಲ್ಲಿರುವ ಪ್ರತಿಭೆಯನ್ನು ಸ್ವಾಮೀಜಿಗಳು ಗಮನಿಸಿದರು.
ಒಮ್ಮೆ ಹೈದರಾಬಾದ್‌ನಲ್ಲಿ ಚಾರ್ತುಮಾಸ್ಯ ಸಂಕಲ್ಪ ಮಾಡಿದ್ದೆ. ಆಗ ಪಲೆಮಾರು ಮಠದ ದೊಡ್ಡ ಸ್ವಾಮೀಜಿಗಳು ಕರೆ ಮಾಡಿ, ಹಾಡಲು ಸೂಚಿಸಿದರು. ಇದು ನನ್ನ ಸಂಗೀತ ಜೀವನದ ಮಹತ್ವ ತಿರುವಾಯಿತು.

ಆರಂಭದಲ್ಲಿ ಹೆಚ್ಚು ರಾಗದ ಪರಿಚಯ ಇರಲಿಲ್ಲ. ಆದರೆ ಚಾತುರ್ಮಾಸ್ಯ ಮುಗಿಯುವ ವೇಳೆಗೆ ೧೫ ರಾಗ ಕಳೆತುಕೊಂಡೆ. ಇದಾದ ಬಳಿಕ ನಾನು ಪೇಜಾವರ ಶ್ರೀಗಳು ಹಲವು ಬಾರಿ ವಾಚನ-ಪ್ರವಚನವನ್ನು ಮಾಡುತ್ತಿದೆ. ಅಭಿಮಾನಿಗಳು ಅದನ್ನು ಮೆಚ್ಚಿಕೊಂಡರು. ನಮ್ಮಿಬ್ಬರ ಜೋಡಿಯನ್ನು ಬೆಂಗಳೂರಿನ ಪತ್ರಿಕೆಯೊಂದು ‘ಅಪೂರ್ವ ಜೋಡಿ’ ಎಂದು ಶ್ಲಾಘಿಸಿದರು ಎಂದು ನೆನಪು ಮಾಡಿಕೊಂಡರು. ಪೇಜಾವರ ಶ್ರೀಗಳೊಂದಿಗೆ ಶಾಸ್ತ್ರ ಗ್ರಂಥದ ಒಂದು ಹಂತದ
ಅಧ್ಯಯನ ಆಯಿತು.

ಬಳಿಕ ಸಂಗೀತವನ್ನು ಕ್ರಮವಾಗಿ ಕಲಿಯಲು ಶುರುಮಾಡಿದೆ. ಈ ಹಂತದಲ್ಲಿ ಉಡುಪಿಯ ವಿ.ವಿ ನಾರಾಯಣ ಐತಾಳ್, ನನ್ನ ತಂದೆ ಗೋವಿಂದಾಚಾರ್ಯ,
ಗೋಪಾಲಕೃಷ್ಣನ್, ಬೆಂಗಳೂರಿನ ಆರ್.ಪಿ ಶ್ರೀಕಂಠನ್ ಅವರು ಮಾರ್ಗದರ್ಶನ ಮಾಡುತ್ತ, ರಾಗ ವಿಸ್ತರಣೆಯ ಒಂದು ಚಾಕಚಕ್ಯತೆಯನ್ನು ಕಲಿಸಿದರು ಎಂದು ಸಂಗೀತ ಜರ್ನಿಯನ್ನು ನೆನಪಿಸಿಕೊಂಡರು.

ನಾನು ಪ್ರಾಮಾಣಿಕವಾಗಿರಬೇಕು. ನನ್ನ ನಡೆ-ನುಡಿ ಆಲೋಚನೆ ಒಂದೇ ಆಗಿರಬೇಕು ಎಂದು ಸನ್ಯಾಸತ್ವದಲ್ಲಿ ಹಲವು ಪ್ರಯತ್ನ ಮಾಡಿದ್ದೆ. ಅದಕ್ಕಾಗಿ ತುಂಬಾ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಲಿಲ್ಲ. ವಿಶ್ವೇಶತೀರ್ಥರ ದಾಕ್ಷಿಣ್ಯಕ್ಕೆ ಹಾಗೂ ತಂದೆಯವರು ನೊಂದು ಕೊಳ್ಳುತ್ತಾರೆ ಎಂದು ಸನ್ಯಾಸತ್ವದಲ್ಲಿಯೇ ಇದೆ. ಆದರೆ ಹೆಚ್ಚು ದಿನ ಇರಲು ಸಾಧ್ಯವಾಗಲಿಲ್ಲ.

ಜನರ ಮುಂದೆ ಸತ್ಯ ಬಿಚ್ಚಿಟ್ಟೆ
ನಾನು ಪೀಠವನ್ನು ಬಿಡಬೇಕು ಎಂದು ನಿರ್ಧರಿಸಿ ದಾಗ ಅನೇಕರು, ಸಂಸಾರಿಯಾದರೆ ನಿಮ್ಮ ಸಂಗೀತ ವನ್ನು ಯಾರು ಕೇಳುತ್ತಾರೆ? ಎಂದು ಕೆಲವರು ಜರಿದರು. ಆಗ ನಾನು ಯಾರಿಗೂ ಒತ್ತಾಯ ಮಾಡುವುದಿಲ್ಲ. ದೇವರು ಹಾಗು ಗುರುಗಳು ಇಡುವ ಹಾಗೆ ಇಡಲಿ ಎಂದಿದ್ದೆ. ಸತ್ಯವನ್ನು ನಾನು ಜನರ ಹಾಗೂ ದೇವರ ಮುಂದಿಟೆ. ಆದ್ದರಿಂದ ಜನರು ಒಪ್ಪಿಕೊಂಡರು. ಅದೇ ಸಂಗೀತ ದಿಂದ ಜೀವನ ನಿರ್ವಹಣೆಯಾಯಿತು. ಅದಕ್ಕಾಗಿ ನಾನು ಸಂಗೀತ ಹಾಗೂ ಸಂಗೀತ
ಸ್ವೀಕರಿಸುವ ಅಭಿಮಾನಿಗಳಿಗೆ ಕೃತಜ್ಞನಾಗಿದ್ದೇನೆ. ಇನ್ನು ಆಶ್ರಮ ಬಿಟ್ಟು ಬಂದಿದ್ದಕ್ಕೆ ಯಾವ ಪಚ್ಚಾತ್ತಾಪವಿಲ್ಲ.

ಬದುಕು ಜಟಕ ಬಂಡಿ, ಅದು ನಡೆಯುತ್ತಿದೆ. ವಿವಾಹವಾಗಿ ೨೪ ವರ್ಷದಲ್ಲಿ ಕಳೆದಿದ್ದು, ಸಮಾಜ ಚೆನ್ನಾಗಿ ನೋಡಿಕೊಂಡಿದೆ ಎಂದು ಹೇಳಿದರು. ಸಂಭಾವನೆ ಪಡೆದಿದ್ದು ತಂದೆಗೆ ಬೇಸರ ನನ್ನ ತಂದೆ ಅತ್ಯಂತ ಸಾತ್ವಿಕರಾಗಿದ್ದರು. ಮಠದ ಬಗ್ಗೆ ಗೌರವದಿಂದ ದುಡಿದು ಕಟ್ಟಿಬೆಳೆಸಿದರು. ತಮಗೇನು ಮಾಡಿಕೊಳ್ಳದೇ, ತಮ್ಮದು ಎಲ್ಲವನ್ನು ಮಠಕ್ಕೆ ಅರ್ಪಿಸಿ, ಮಠಕ್ಕಾಗಿ ದುಡಿದವರು. ಕುಕ್ಕೆ ಸುಬ್ರಮಣ್ಯದ ಪೀಠದಲ್ಲಿದ್ದಾಗ, ನಾನು ಸಂಗೀತವನ್ನು ಹಾಡುತ್ತಿದೆ. ಕೆಲವೊಮ್ಮೆ ಜನ ಸಂಭಾವನೆಯನ್ನು ನೀಡುತ್ತಿದ್ದರು. ಇದು ನನ್ನ ತಂದೆಗೆ ಗೊತ್ತಾಯಿತು. ಈ ಹಣವನ್ನು ಸ್ವಂತಕ್ಕೆ ಬಳಸದಿದ್ದರೂ, ‘ಸ್ವಾಮೀಜಿಗಳು ಹರಿದಾಸ ಪದಗಳನ್ನು ಹಾಡಿ,
ದುಡ್ಡು ಪಡೆಯುತ್ತಿ ದ್ದಾರೆ ಇದು ಸರಿಯಲ್ಲವಲ್ಲ’ ಎಂದು ಬೇಸರ ಹೊರ ಹಾಕಿದ್ದರು ಎಂದು ವಿದ್ಯಾಭೂಷಣರು ತಮ್ಮ ತಂದೆಯ ವರ ಸಾತ್ವಿಕತೆಯನ್ನು ನೆನಪು ಮಾಡಿಕೊಂಡರು.

ಜನರ ಮುಂದೆ ಸತ್ಯ ಬಿಚ್ಚಿಟ್ಟೆ
ನಾನು ಪೀಠವನ್ನು ಬಿಡಬೇಕು ಎಂದು ನಿರ್ಧರಿಸಿದಾಗ ಅನೇಕರು, ಸಂಸಾರಿಯಾದರೆ ನಿಮ್ಮ ಸಂಗೀತವನ್ನು ಯಾರು ಕೇಳುತ್ತಾರೆ? ಎಂದು ಕೆಲವರು ಜರಿದರು. ಆಗ ನಾನು ಯಾರಿಗೂ ಒತ್ತಾಯ ಮಾಡುವುದಿಲ್ಲ. ದೇವರು ಹಾಗು ಗುರುಗಳು ಇಡುವ ಹಾಗೆ ಇಡಲಿ ಎಂದಿದ್ದೆ. ಸತ್ಯವನ್ನು ನಾನು ಜನರ ಹಾಗೂ ದೇವರ ಮುಂದಿಟೆ. ಆದ್ದರಿಂದ ಜನರು ಒಪ್ಪಿಕೊಂಡರು. ಅದೇ ಸಂಗೀತದಿಂದ ಜೀವನ ನಿರ್ವಹಣೆಯಾಯಿತು. ಅದಕ್ಕಾಗಿ ನಾನು ಸಂಗೀತ ಹಾಗೂ ಸಂಗೀತ ಸ್ವೀಕರಿಸುವ ಅಭಿಮಾನಿಗಳಿಗೆ ಕೃತಜ್ಞನಾಗಿದ್ದೇನೆ. ಇನ್ನು ಆಶ್ರಮ ಬಿಟ್ಟು ಬಂದಿದ್ದಕ್ಕೆ ಯಾವ ಪಚ್ಚಾತ್ತಾಪವಿಲ್ಲ. ಬದುಕು ಜಟಕ ಬಂಡಿ, ಅದು ನಡೆಯುತ್ತಿದೆ. ವಿವಾಹವಾಗಿ ೨೪ ವರ್ಷದಲ್ಲಿ ಕಳೆದಿದ್ದು, ಸಮಾಜ ಚೆನ್ನಾಗಿ ನೋಡಿಕೊಂಡಿದೆ.
ಎಂದು ಹೇಳಿದರು.

ವಿದ್ಯಾಭೂಷಣರು ಹಾಡಿದ ಹಾಡುಗಳು
ಹಾಡಿದರೆ ಎನ್ನ ಒಡೆಯನ ಹಾಡುವೆ..
ಬೇಡಿದರೆ ಎನ್ನ ಒಡೆಯನ ಬೇಡುವೇ
ಪಿಳಂಗೋವಿಯ ಚಲುವ ಕೃಷ್ಣನ ಎಲ್ಲಿ ನೋಡಿದಿರಿ…
ಐದು ಕಾಲಿನ ಮಂಚ, ಕುಂಟ ಮಲಗಿತ್ತ
ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ಇಷ್ಟು ದಿನ ಈ ವೈಕುಂಠ…

ಮಾತಿನ ಪ್ರಮುಖಾಂಶ
ಸಂಗೀತದ ಕುರಿತಾದ ಸಂಸ್ಕಾರ ಕುಕ್ಕೆ ಸುಬ್ರಮಣ್ಯದಲ್ಲಿ ಲಭಿಸಿತು. ತಂದೆ ಗೋವಿಂದಾಚಾರ್ಯರು ಮೈಸೂರು, ಉಡುಪಿ ಹುಡುಕಾಟದ ಸಮಯದಲ್ಲಿ ಸಂಗೀತವನ್ನು ಕಲಿತು ಹಾರ್ಮೋನಿಯಂ ನಡುಸುತ್ತಿದ್ದರು. ಸೀತೂರಿನಲ್ಲಿ ಶಾಲಾ ದಿನದಲ್ಲಿ ಸಿನಿಮಾ ಸಂಗೀತ ಕೇಳುವ ಅಭಿರುಚಿ ಬೆಳೆಸಿಕೊಂಡ ವಿದ್ಯಾ ಭೂಷಣರು. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಅಧ್ಯಾತ್ಮಕ ಶಾಸಗ್ರಂಥಗಳ ಕಲಿಕೆ ಪೇಜಾವರ ಶ್ರೀಗಳೊಂದಿಗೆ ಪ್ರವಚನದ ವೇಳೆ ಹಾಡುತ್ತಿದ್ದ
ವಿದ್ಯಾಭೂಷಣರು.

***

ವಿದ್ಯಾಭೂಷಣರು ಕಾವಿ ಕಳಚಿ, ಶ್ವೇತ ವರ್ಣ ಧರಿಸಿದ ಸಂಸಾರಿಯಾದರೂ ಅವರು ನನಗೆ ಗುರು ಸಮಾನರು. ಕೆಲವು ಪೀಠಕ್ಕೆ ಏರಿ ಗುರುವಾಗಿ
ದ್ದರೆ, ಇನ್ನು ಕೆಲವರು ನಂಬಿಕೆ, ಆಚರಣೆಯಿಂದ ಗುರುವಿನಂತೆ ಕೈ ಹಿಡಿಯುತ್ತಾರೆ. ಆ ಸಾಲಿಗೆ ವಿದ್ಯಾಭೂಷಣರು ಸೇರುತ್ತಾರೆ.
– ವಿಶ್ವೇಶ್ವರ ಭಟ್
ವಿಶ್ವವಾಣಿ ಪ್ರಧಾನ ಸಂಪಾದಕ

ಯಾರನ್ನೂ ಮೆಚ್ಚಿಸುವ ಕಾರ್ಯ ಮಾಡಲು ಹೋಗಲಿಲ್ಲ. ನನ್ನ ಜೀವನದ ವ್ರತವಾಗಿ ಹೊಂದು ಕೊಂಡಿದ್ದು ಹರಿದಾಸರ ಸೇವೆ ಮಾತ್ರ.
– ಡಾ. ವಿದ್ಯಾಭೂಷಣ
ಸ್ವಾಮೀಜಿ