ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಣ್ಣ ಭೋವಿ ಅವರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಎನ್ ಮೂರ್ತಿ ಸ್ಥಾಪಿತ ಬಣದ ಮಸ್ಕಿ ತಾಲೂಕ ಸಮಿತಿ ವತಿಯಿಂದ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.
ಮೆದಿಕಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೆಗುಡ್ಡ, ಶಾಲೆಯಲ್ಲಿ 127 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡು ತ್ತಿದ್ದು, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು,ಶೌಚಾಲಯ ಸಮಸ್ಯೆಯನ್ನು ಎದುರಿಸುತ್ತಿದ್ದು ಶಾಲೆಯ ಕಾಂಪೌಂಡ್ ಗೋಡೆಯು ಶಿಥಿಲಾವಸ್ಥೆ ತಲುಪಿದ್ದು ಶಾಲೆಯ ಹಾವು, ಚೇಳು ಮುಂತಾದವು ಬರುತ್ತಿದ್ದು ಮಕ್ಕಳಲ್ಲಿ ಭಯಭೀತಿಯನ್ನು ಉಂಟು ಮಾಡಿದೆ. ಹಾಗೆಯೇ ಗ್ರಾಮದ ಇನ್ನುಳಿದ ಶಾಲೆಗೆ ಅವಶ್ಯ ವಿರುವ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಿ ಅಭಿವೃದ್ಧಿಗೆ ಶ್ರಮವಹಿಸಿ.
ಈ ಹಿಂದೆ ಮಾಡಲಾದ ಎಲ್ಲಾ ಕಾಮಗಾರಿಗಳು ಕಳಪೆಯಾಗಿದ್ದು ಯಾವುದೇ ಉಪಯೋಗಕ್ಕೆ ಬಾರದಂತೆ ಗುತ್ತಿಗೆದಾರರು ನಿರ್ವಹಿಸಿರುತ್ತಾರೆ. ಸರಕಾರಿ ಶಾಲೆಯಲ್ಲಿ ಪ್ರಮುಖವಾಗಿ ದಲಿತ ವಿದ್ಯಾರ್ಥಿಗಳು ಹಾಗೂ ಬಡ ಮಕ್ಕಳು ವಿದ್ಯಾಭ್ಯಾಸ ಮಾಡು ತ್ತಿದ್ದು, ಗ್ರಾಮದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಪಿಡಿಓ ತಿಮ್ಮಣ್ಣ ಭೋವಿ ರವರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎನ್ ಮೂರ್ತಿ ಸ್ಥಾಪಿತ ಬಣದ ತಾಲೂಕ ಸಮಿತಿಯ ಮಸ್ಕಿ ತಾಲೂಕ ಉಪಾಧ್ಯಕ್ಷ ಮೌನೇಶ್ ಮೆದಿಕಿನಾಳ ಮನವಿ ಪತ್ರ ಸಲ್ಲಿಸಿ.
ಈ ಮನವಿಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಶಾಲಾ ಮಕ್ಕಳು ಮತ್ತು ಪೋಷಕರು ಸೇರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.