Tuesday, 17th December 2024

Viral News: ಸಖತ್‌ ವೈರಲ್‌ ಆಯ್ತು ರೂಂಮೇಟ್‌ ಅನ್ನು ಆಕರ್ಷಿಸಲು ಈ ಮಹಿಳೆ ಮಾಡಿದ ಪೋಸ್ಟ್; ಅಂಥದ್ದೇನಿದೆ ಅದರಲ್ಲಿ?

Viral News

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಆಗಾಗ್ಗೆ ಕೆಲವೊಂದು ವಿಚಿತ್ರವಾದ ವಿಷಯಗಳಿಗೆ ಸುದ್ದಿಯಾಗುತ್ತದೆ. ಬೆಂಗಳೂರಿನಲ್ಲಿ ಮನೆಯ ಮಾಲೀಕರು ತಮ್ಮ ಮನೆಗೆ ಬಾಡಿಗೆದಾರರನ್ನು ಸೆಳೆಯಲು ಹಲವರು ತಂತ್ರಗಳನ್ನು ರೂಪಿಸುತ್ತಾರೆ. ಇದೀಗ ಮಹಿಳೆಯೊಬ್ಬರು ಎಚ್ಎಸ್ಆರ್ ಲೇಔಟ್‍ನಲ್ಲಿರುವ ತಮ್ಮ 3 ಬಿಎಚ್‍ಕೆ ಫ್ಲ್ಯಾಟ್‍ಗೆ ರೂಂಮೇಟ್‌ ಅನ್ನು ಆಕರ್ಷಿಸಲು ತಮಾಷೆಯ ಪೋಸ್ಟ್ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್(Viral News) ಆಗಿದೆ.

ಬೆಂಗಳೂರಿನಲ್ಲಿ ವಾಸಿಸುವ ನಿಮಿಷಾ ಚಂದಾ ಎಂಬ ಮಹಿಳೆ ನಗರದ ಎಚ್ಎಸ್ಆರ್ ಲೇಔಟ್‍ನಲ್ಲಿ 3 ಬಿಎಚ್‍ಕೆ ಫ್ಲ್ಯಾಟ್‍ಗೆ ರೂಂಮೇಟ್‌ ಅನ್ನು ಹುಡುಕುವ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಫ್ಲ್ಯಾಟ್‍ಗೆ ರೂಂಮೇಟ್‌ ಅನ್ನು ಹುಡುಕಲು ಫ್ಲಾಟ್ ವಿವರಗಳ ಬಗ್ಗೆ ಅವರು ಹೆಚ್ಚೇನೂ ಬರೆಯಲಿಲ್ಲ. ಅದರ ಬದಲಾಗಿ, ಅವರು ರೂಮೇಟ್‌ ಅನ್ನು ರೂಂನ ವಾತಾವರಣ ಹಾಗೂ  ಅಸ್ತಿತ್ವದಲ್ಲಿರುವ ಸದಸ್ಯರು ಅನುಸರಿಸುವ ನಿಯಮದ ಬಗ್ಗೆ ತಿಳಿಸಿದ್ದಾರೆ.

ಏನಿದು ವೈರಲ್‌ ಪೋಸ್ಟ್‌?

ಬಾಡಿಗೆ ಫ್ಲ್ಯಾಟ್‍ಗೆ ಮಹಿಳಾ ರೂಂಮೇಟ್‌ಗಾಗಿ ಅವರು ವಿಭಿನ್ನವಾದ ಪೋಸ್ಟ್‌ ಮಾಡಿದ್ದಾರೆ, ಯಾರಾದರೂ ತಮ್ಮೊಂದಿಗೆ ಫ್ಲ್ಯಾಟ್‌ಮೇಟ್‌ ಆಗಿ ಏಕೆ ಸೇರಬೇಕು ಎಂಬುದಕ್ಕೆ ಕಾರಣಗಳನ್ನು ಹಂಚಿಕೊಂಡಿದ್ದಾರೆ. “ಎಚ್ಎಸ್ಆರ್‌ನಲ್ಲಿ (27 ನೇ ಮುಖ್ಯ ರಸ್ತೆಯ ಬಳಿ) 3 ಬಿಎಚ್‍ಕೆಯ ಫ್ಯಾಟ್‌ನಲ್ಲಿರುವ ನಮ್ಮೊಂದಿಗೆ ಸೇರಿಕೊಳ್ಳಿ, ನಾವು ನಿಮ್ಮ ಮಾಜಿಗಿಂತ ತುಂಬಾ ಕೂಲ್‌ ಆಗಿದ್ದೇವೆ ಎಂದು ಭರವಸೆ ನೀಡುತ್ತೇನೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಹಾಗೇ ತಡರಾತ್ರಿ ಸಿಹಿತಿಂಡಿ ತಿನ್ನುವ ಕಡುಬಯಕೆಯಾದರೆ  ಒಟ್ಟಿಗೆ ಅಡುಗೆ ಮಾಡಲು ಸಹಾಯ ಮಾಡುವುದಾಗಿ ಕೂಡ ತಿಳಿಸಿದ್ದಾರೆ.

ಇನ್ನು ಭವಿಷ್ಯದಲ್ಲಿ ಫ್ಲಾಟ್ಮೇಟ್‍ ಆಗಿ ಬರುವವರಿಗೆ  ತಮ್ಮ ಹಾಗೂ 3 ಬಿಎಚ್‍ಕೆ ಫ್ಲ್ಯಾಟ್‌ನಲ್ಲಿರುವ ಇನ್ನೊಬ್ಬರು ವ್ಯಕ್ತಿ ಅಗ್ರಿಮಾ ಬಗ್ಗೆ ತಿಳಿಸಿದ್ದಾರೆ “ಅಗ್ರಿಮಾ ಮತ್ತು ನಾನು ಒಟ್ಟಿಗೆ ಹ್ಯಾಂಗ್‌ಔಟ್‌ ಮಾಡುತ್ತೇವೆ.  ನಾವು ಒಟ್ಟಿಗೆ ವಾಕಿಂಗ್‍ಗೆ ಹೋಗುತ್ತೇವೆ, ಜೀವನದ ಬಗ್ಗೆ ಯೋಚಿಸುತ್ತೇವೆ, ಊಟ ಅಥವಾ ಬ್ರಂಚ್‍ಗಳಿಗೆ ಹೋಗುತ್ತೇವೆ ಮತ್ತು ಸಣ್ಣ ಮೊಮೊ ಮತ್ತು ವಡಾ ಪಾವ್ ಡೇಟ್‍ಗಳಿಗೆ ಹೋಗುತ್ತೇವೆ” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: ಈ ಶ್ವಾನ ಕಾರಿಗಿಂತ ಹೆಚ್ಚು ದುಬಾರಿ! ಇದರ ತಿಂಗಳ ಖರ್ಚು ಕೇಳಿದರೆ ಶಾಕ್ ಆಗ್ತೀರ

“ನಾವಿಬ್ಬರೂ ಮನೆಯನ್ನು ಸ್ವಚ್ಛವಾಗಿಡಲು ಬಯಸುತ್ತೇವೆ. ತುಂಬಾ ಅಚ್ಚುಕಟ್ಟಾಗಿಲ್ಲ, ಆದರೆ ಇಲ್ಲಿ ಜೀರಳೆಗಳಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಫ್ಲ್ಯಾಟ್‌ಮೇಟ್‌ ಹುಡುಕುವ ಅವರ ಈ ಪೋಸ್ಟ್ ಎಕ್ಸ್‌ನಲ್ಲಿ ವೈರಲ್ ಆಗಿದೆ. ಇದು ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಲೈಕ್‍ಗಳನ್ನು ಗಳಿಸಿದೆ. ಇದು ನೆಟ್ಟಿಗರ ಗಮನ ಸೆಳೆದಿದ್ದರಿಂದ ಈ ಪೋಸ್ಟ್‌ಗೆ ಹಲವರು  ಕಾಮೆಂಟ್ ಮಾಡಿದ್ದಾರೆ. ಒಬ್ಬ ನೆಟ್ಟಿಗರು “ನಾನು ಅವರೊಂದಿಗೆ ಹೋಗಬಹುದೆಂದು ಬಯಸುತ್ತೇನೆ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಬೆಂಗಳೂರು ಜನರು ಯಾವಾಗಲೂ ಫ್ಲ್ಯಾಟ್‌ ಅಥವಾ ಫ್ಲ್ಯಾಟ್‌ಮೇಟ್‌ ಹುಡುಕುವಲ್ಲಿ ನಿರತರಾಗಿದ್ದಾರೆ” ಎಂದು ಹೇಳಿದ್ದಾರೆ.