Thursday, 19th September 2024

Viral Video: ʼಬೆಂಗಳೂರು ನಡೆಯುತ್ತಿರುವುದೇ ಉತ್ತರದವರಿಂದʼ ಎಂದು ಪೊಗರು ತೋರಿಸಿದ ಮಹಿಳೆಗೆ ʼನಡಿಯಾಚೆʼ ಎಂದ ಕನ್ನಡಿಗರು!

viral video north indian

ಬೆಂಗಳೂರು: ಓಲಾ ಚಾಲಕನಿಂದ (Ola Driver) ನಡೆದ ಹಲ್ಲೆಯನ್ನು (Assault case) ಖಂಡಿಸುವ ನೆಪದಲ್ಲಿ ಬೆಂಗಳೂರಿಗರ ಬಗ್ಗೆ ಹಗುರವಾಗಿ ಮಾತನಾಡಿದ ಉತ್ತರ ಭಾರತದ (North Indian) ಮಹಿಳೆಯೊಬ್ಬರಿಗೆ ಬೆಂಗಳೂರಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. “ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ, ನಾವು ಕಟ್ಟುವ ತೆರಿಗೆ ಹಣದಿಂದ” ಎಂದಿರುವ ಈಕೆಗೆ, “ನೀನಿರುವುದು ನಮಗೆ ಬೇಕಿಲ್ಲ. ಗೆಟ್‌ ಲಾಸ್ಟ್‌ʼ ಎಂದಿದ್ದಾರೆ ಕನ್ನಡಿಗರು. ಇದೀಗ ಈ ವಿಡಿಯೋ ವೈರಲ್‌ (Viral Video) ಆಗುತ್ತಿದೆ.

ಉತ್ತರ ಭಾರತ ಮೂಲದ ಯುವತಿಯ ಹೇಳಿಕೆ ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ನಿನ್ನೆ ಓಲಾ ಆಟೋ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ಆಗಿತ್ತು. ಆಟೋ ಚಾಲಕ ಯುವತಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ. ಬಳಿಕ ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೂಡ ಮಾಡಲಾಗಿತ್ತು. ಅದರಂತೆ ಚಾಲಕನ ವಿರುದ್ಧ ಪೊಲೀಸರ ಕ್ರಮ ಕೂಡ ಆಗಿತ್ತು.

ಈ ಘಟನೆಯನ್ನು ಖಂಡಿಸುವ ನೆಪದಲ್ಲಿ ಬೆಂಗಳೂರಿನ ಸ್ಥಳೀಯರ ವಿರುದ್ಧ ಯುವತಿ ಅನುಚಿತವಾಗಿ ಮಾತನಾಡಿದ್ದಾಳೆ. ಅವಾಚ್ಯ ಪದವನ್ನೂ ಬಳಸಿದ್ದಾಳೆ. “ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂಥವರಿಂದಲೇ ಇಡೀ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವೆಲ್ಲಾ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ” ಎಂದು ಯುವತಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಕನ್ನಡಿಗರು ಈ ಯುವತಿಯ ಮಾತಿಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ. “ನೀವು ಇರುವುದು ನಮಗೆ ಬೇಕಾಗಿಲ್ಲ. ನಿನ್ನಿಂದ ನಮ್ಮ ಅಭಿವೃದ್ಧಿ ಆಗಬೇಕಿಲ್ಲ. ನಮ್ಮ ಅಭಿವೃದ್ಧಿ ನಾವೇ ನೋಡಿಕೊಳ್ಳುತ್ತೇವೆ” ಎಂದಿದ್ದಾರೆ. “ನಮ್ಮ ರಾಜ್ಯ ಬಿಟ್ಟು ತೊಲಗು, ನಮಗೂ ನಿಮ್ಮಂಥವರನ್ನು ನೋಡಿ ಸಾಕಾಗಿದೆ” ಎಂದು ಕಮೆಂಟ್‌ ಮಾಡಿದ್ದಾರೆ. “ನೀವ್ಯಾಕೆ ನಿಮ್ಮ ರಾಜ್ಯದಲ್ಲೇ ಉಳಿದು ನಿಮ್ಮ ಇಕಾನಮಿ ಅಭಿವೃದ್ಧಿ ಮಾಡುವುದು ಬಿಟ್ಟು ಇಲ್ಲಿಗೆ ಬಂದಿದ್ದೀರಿ?” ಎಂದೂ ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿ: Viral Video: ಶಿಕ್ಷಕರ ದಿನಾಚರಣೆ ದಿನ ಶಿಕ್ಷಕನನ್ನು ಗೌರವಿಸಲು ಹೋದ ವಿದ್ಯಾರ್ಥಿಗೆ ಆದ ಗತಿಯೇನು ನೋಡಿ!

Leave a Reply

Your email address will not be published. Required fields are marked *