ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿ(Bangalore)ನಲ್ಲಿ ಮಹಿಳೆಯರು ಶಾರ್ಟ್ಸ್ ಧರಿಸುವಂತಿಲ್ವಾ? ಅಯ್ಯೋ ಈ ಪ್ರಶ್ನೆ ಈಗ ಯಾಕೆ ಮೂಡಿದೆ ಅಂತ ಯೋಚಿಸೋರು ಈ ಸುದ್ದಿನ ಒಮ್ಮೆ ಓದ್ಲೇಬೇಕು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಯಸ್ಸಾದ ಮಹಿಳೆಯೊಬ್ಬರು ಶಾರ್ಟ್ ಧರಿಸಿದ್ದ ಮಹಿಳೆಯನ್ನು ಕೋಪದಲ್ಲಿ ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲು ವೈರಲ್(Viral Video) ಆಗುತ್ತಿದೆ.
ಏನಿದು ಘಟನೆ?
ಯೋಗ ತರಬೇತುದಾರೆ ಟ್ಯಾನಿ ಭಟ್ಟಾಚಾರ್ಜಿ ಈ ವಿಡಿಯೋ ಶೇರ್ ಮಾಡಿದ್ದು, ಇದು ಬೆಂಗಳೂರಿನಲ್ಲಿ ನಡೆದ ಘಟನೆಯಾಗಿದೆ. ಶಾರ್ಟ್ಸ್ ಧರಿಸಿದ್ದ ಯುವತಿಯನ್ನು ಕಂಡ ಮಹಿಳೆಯೊಬ್ಬರು ಸಾರ್ವಜನಿಕವಾಗಿ ನಿಂದಿಸಲು ಶುರು ಮಾಡಿದ್ದಾಳೆ. ಜತೆಗಿದ್ದ ಯುವಕ ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದಾಗ ಆ ಬಟ್ಟೆ ಧರಿಸಿ ಇಲ್ಲಿ ಓಡಾಡಬಾರದು ಎಂದು ಮಹಿಳೆ ಜೋರ್ ಜೋರಾಗಿ ಕಿರುಚುತ್ತಾಳೆ.
ನಿಮ್ಮ ಮಗಳಿಗೂ ಹೀಗೆ ಮಾಡ್ತೀರಾ, ಅವಳೇನು ನಿಮ್ ಮಗಳಾ ಎಂದು ಯುವಕನ ಕೇಳಿದಾಗ ಎಲ್ಲ ಹೆಣ್ಣು ಮಕ್ಕಳು ನನ್ನ ಮಕ್ಕಳಿದ್ದಂತೆ ಯಾರೂ ಇಂತಹ ಬಟ್ಟೆ ಧರಿಸಿ ಓಡಾಡಬಾರದು ಎಂದು ಜೋರಾಗಿ ಹೇಳುತ್ತಾಳೆ. ಈ ವೇಳೆ ಯುವಕ ಮತ್ತು ಮಹಿಳೆ ನಡುವೆ ಭಾರೀ ವಾಗ್ವಾದ ನಡೆದಿದೆ. ಮಹಿಳೆ ಮಾತ್ರ ಪದೇ ಪದೇ ಈ ರೀತಿ ಬಟ್ಟೆ ಧರಿಸಿ ಓಡಾಡಬಾರದು ಎಂದು ಹೇಳ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಟ್ಯಾನಿ ಭಟ್ಟಾಚಾರ್ಜಿ, ನಿಮಗೇನು ಸಮಸ್ಯೆ? ಇಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ, ಟ್ಯಾನಿ ಭಟ್ಟಾಚಾರ್ಯ 1.2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು, ಈ ವೀಡಿಯೊ ಹಸಿ ಬಿಸಿ ಚರ್ಚೆಗೆ ಕಾರಣವಾಯಿತು, ಕೆಲವರು ವೃದ್ಧೆಯ ಕ್ರಮಗಳನ್ನು ಖಂಡಿಸಿದರು ಮತ್ತು ಇತರರು ಆಕೆಯ ನಿಲುವನ್ನು ಬೆಂಬಲಿಸಿದರು.
ಇನ್ನು ವಿಡಿಯೋ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಒಬ್ಬ ನೆಟ್ಟಿಗ ಕಮೆಂಟ್ ಮಾಡಿದ್ರೆ ಬೆಂಗಳೂರಿನಲ್ಲಿ ಶಾರ್ಟ್ಸ್ ಧರಿಸುವಂತಿಲ್ವಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಸೆಪ್ಟೆಂಬರ್ 8 ರಂದು ಹಂಚಿಕೊಳ್ಳಲಾದ ವೀಡಿಯೊ 1.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಆಕೆಗೆ ಶಾರ್ಟ್ಸ್ ಧರಿಸಬೇಡಿ ಎಂದು ಹೇಳುವ ನೀವು ಏಕೆ ಹೊಟ್ಟೆ ತೋರುವಂತೆ ಸೀರೆ ಉಟ್ಟಿದ್ದೀರಿ ಎಂದು ಒಬ್ಬ ನೆಟ್ಟಿಗ ಪ್ರಶ್ನಿಸಿದ್ದು, ಬೆಂಗಳೂರು ದಿನೇ ದಿನೆ ಹಿಂದೆ ಸರಿಯುತ್ತಿದೆ. ಚಿಕ್ಕ ಸ್ಕರ್ಟ್‌ಗಳು ಎಂದಿಗೂ ಸಮಸ್ಯೆಯಲ್ಲ, ಬದಲಿಗೆ ಅಗ್ಗದ ಮನಸ್ಥಿತಿ ಹೊಂದಿರುವ ಅಗ್ಗದ ಜನರು ಮಹಿಳೆಯರನ್ನು ಆಕ್ಷೇಪಿಸುವ, ಅವಮಾನಿಸುವ ಮತ್ತು ದೂಷಿಸುವುದೇ ನಿಜವಾದ ಸಮಸ್ಯೆ ಎಂದು ಬಳಕೆದಾರರು ಹೇಳಿದರು. ಇನ್ನು ಮಹಿಳೆಯನ್ನು ಬೆಂಬಲಿಸಿ ಹಲವರು ಕಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Rahul Gandhi: INDI ಅಲಯನ್ಸ್ ಅಥವಾ INDIA ಅಲಯನ್ಸ್? ವಿದ್ಯಾರ್ಥಿಯ ಪ್ರಶ್ನೆಗೆ ತಡವರಿಸಿದ ರಾಹುಲ್ ಗಾಂಧಿ- ಈ ವಿಡಿಯೋ ಭಾರೀ ವೈರಲ್