Thursday, 12th December 2024

ಲೋಕ ಕಲ್ಯಾಣಕ್ಕೆ ಕೋಟಿ ವಿಷ್ಣುನಾಮ ಪ್ರಾರ್ಥನೆ

ಮಾ.21ರಂದು ಗೋವರ್ಧನ ಗಿರಿ(ಧಾ)ದಾರಿಗೆ 108 ಮೆಟ್ಟಿಲುಗಳ ಸೋಪಾನ ಮಾಲೆ

ವಿಶೇಷ ವರದಿ: ರಮೇಶ್ ಹೆಗಡೆ ಗುಂಡೂಮನೆ

ಶಿವಮೊಗ್ಗ: ಹೊಸನಗರ ತಾಲೂಕು ರಾಮಚಂದ್ರಾಪುರದ ಮಹಾನಂದಿ ಗೋಲೋಕದಲ್ಲಿ ನಿರ್ಮಾಣಗೊಂಡು ಜನಾಕರ್ಷಕ ವಾಗಿ ಕಂಗೊಳಿಸುತ್ತಿರುವ ಸುಂದರ ಗೋವರ್ಧನ ಗಿರಿಧಾರಿ ದೇವಾಲಯದಲ್ಲಿ ಮಾ. 21 ರಂದು ಲೋಕ ಯೋಗಕ್ಷೇಮ, ಸಮಷ್ಠಿ ಒಳಿತಿಗೆ ಕೋಟಿ ವಿಷ್ಣುನಾಮ ಪ್ರಾರ್ಥನೆ ಹಾಗೂ ಸಹಸ್ರ ಸಂಖ್ಯೆೆಯ ಭಕ್ತರಿಂದ ಛತ್ರ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ.

ಈ ಬಾರಿ ವಿಶೇಷವಾಗಿ ಗೋವರ್ಧನ ಗಿರಿಧಾರಿ ಏರುವುದಕ್ಕೆ ನಿರ್ಮಾಣಗೊಂಡ 108 ಮೆಟ್ಟಿಲುಗಳ ಸೋಪಾನ ಮಾಲೆ ಲೋಕಾರ್ಪಣೆಗೊಳ್ಳಲಿರುವುದು ವಿಶೇಷ. ರಾಮಚಂದ್ರಾ ಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಗೋಸಂರ ಕ್ಷಣಾ ಸಂಕಲ್ಪಕ್ಕೆ ಮೂಲಸ್ಥಾನವಾದ ಮಹಾನಂದಿ ಗೋ ಲೋಕ ಈಗಾಗಲೇ ಕಳೆದ ವರ್ಷದ ವಿಷ್ಣು ಸಹಸ್ರನಾಮ ಕಾರ್ಯ ಕ್ರಮದಲ್ಲಿ ಮನೆ ಮಾತಾಗಿದೆ. ಅಲ್ಲದೆ ಗೋಶಾಲೆಗಳ ನಡುವೆ ಇರುವ ಸುಂದರ ದೇಗುಲದಲ್ಲಿ ಸಲ್ಲಿಸಿರುವ ಪ್ರಾರ್ಥನೆ ಭಕ್ತರ ಇಷ್ಟಾರ್ಥವನ್ನು ನೆರವೇರಿಸು ತ್ತಿದೆ ಎನ್ನುವ ನಂಬಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತ್ತು.

ಏನು ವಿಶೇಷ…?: ಅದು ದ್ವಾಪರಯುಗ, ಪ್ರಕೃತಿ ಪೂಜೆಯ ವಿಶೇಷ ಮಹತ್ವವನ್ನು ದ್ವಾರಕೆಯ ಜನರಿಗೆ ಅರಿವು ಮೂಡಿಸಿದ ಶ್ರೀ ಕೃಷ್ಣ ಇಂದ್ರನ ಪೂಜೆಯ ಅಗತ್ಯವಿಲ್ಲ, ಅದರ ಬದಲು ಎಲ್ಲ ರೀತಿಯ ಅನುಕೂಲತೆಯನ್ನು ನೀಡುವ ಗೋವರ್ಧನ ಗಿರಿಯ ಪೂಜೆ ಮಾಡುವುದರಿಂದ ಒಳಿತಾಗಲಿದೆ ಎಂದು ಸೂಚಿಸುತ್ತಾನೆ. ದ್ವಾರಕೆಯ ಜನರು ಶ್ರೀ ಕೃಷ್ಣನ ಮಾತನ್ನು ಎಂದಿಗೂ ತೆಗೆದು ಹಾಕುವವರಲ್ಲ ಅಂತೆಯೇ ಅಲ್ಲಿಂದ ಇಂದ್ರನ ಪೂಜೆ ಬಿಟ್ಟ ಅವರೆಲ್ಲರೂ ಪ್ರಕೃತಿ ಪೂಜೆಗೆ ಮುಂದಾಗುತ್ತಾರೆ.

ಇದರಿಂದಾಗಿ ಕುಪಿತಗೊಂಡ ದೇವೇಂದ್ರ ಧಾರಾಕಾರವಾದ ಮಳೆ ಸುರಿಸುವಂತೆ ಮಾಡುತ್ತಾನೆ. ಆ ವೇಳೆ ದ್ವಾರಕೆಯ ಜನರು ಮಾತ್ರವಲ್ಲ ಗೋವುಗಳು ಕೂಡ ಕುಂಭದ್ರೋಣ ಮಳೆಯಿಂದ ತಲ್ಲಣಗೊಂಡು ಜೀವ ಭಯಕ್ಕೆ ದಿಕ್ಕಾಪಾಲಾಗಿ ಓಡಲಾ ರಂಭಿಸುತ್ತವೆ. ಇದನ್ನು ಗಮನಿಸಿದ ಶ್ರೀಕೃಷ್ಣ ಅಲ್ಲಿಯೇ ಇರುವ ಗೋವರ್ಧನ ಪರ್ವತವನ್ನು ತನ್ನ ಎಡಗೈಯ ಕಿರು ಬೆರಳಿನಿಂದ ಎತ್ತಿ ಹಿಡಿದು ಮಳೆಯಿಂದ ರಕ್ಷಿಸುತ್ತಾನೆ. ಅದು ಒಂದಲ್ಲ ಏಳು ದಿನಗಳ ಪರ್ಯಂತ. ಹೀಗೆ ಏನೂ ಮಾಡಲಾಗದೆ ಸೋತ ದೇವೇಂದ್ರನಿಗೆ ತನ್ನ ತಪ್ಪಿನ ಅರಿವಾಗಲಿದೆ. ಇತ್ತ ಕೃಷ್ಣ ಗೋಸಂರಕ್ಷಣೆಗೆ ಗೋವರ್ಧನ ಗಿರಿಯನ್ನು ಎತ್ತಿರುವುದು ಇತಿಹಾಸವಾಗಿ ಶಾಶ್ವತ ಉಳಿದುಕೊಳ್ಳುತ್ತದೆ, ಮುಂದೆ ಗೋಸಂರಕ್ಷಣೆಗಾಗಿ ಗೋವರ್ಧನ ಗಿರಿಯನ್ನು ಎತ್ತಿದ ಕೃಷ್ಣನಿಗೆ ಗಿರಿಧಾರಿಯಾಗಿರುವಾಗ ಜನರು ಪೂಜಿಸುವ ಪುರಾಣ ಹಿನ್ನೆಲೆಯ ಕತೆಯನ್ನು ಆಧರಿಸಿ ದೇವಾಲಯಗಳು ಅಸ್ತಿತ್ವಕ್ಕೆ ಬಂದಿರುವುದು ಕಂಡು ಬರುತ್ತದೆ.

ಅದೇ ಮೂಲ ವಿಷಯವನ್ನು ಹೊತ್ತು ನಿರ್ಮಾಣಗೊಂಡಿರುವ ಇಲ್ಲಿಯ ಗೋವರ್ಧನ ಗಿರಿಧಾರಿ ದೇವಾಲಯ ಅಪರೂಪದಲ್ಲಿ
ಅಪರೂಪದ ದೇವಾಲಯ ಎನ್ನಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಶ್ರೀ ರಾಮಚಂದ್ರಾಪುರ ಮಠದಲ್ಲಿ ಪ್ರಾಚೀನ
ಕಾಲದಿಂದಲೂ ಪೂಜೆಗೊಳ್ಳುತ್ತಿದ್ದ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯವನ್ನು ಕಳೆದ ನಾಲ್ಕು ವರ್ಷಗಳ ಈಚೆಗೆ ನವೀಕೃತ ಮಂದಿರವಾಗಿ ರೂಪುಗೊಳಿಸಲಾಗಿತ್ತು. ಇದರ ವಿಗ್ರಹ ಉತ್ತರ ಭಾರತದ ಶೈಲಿಯ ಕೃಷ್ಣ ಶಿಲೆಯಲ್ಲಿ ಕೆತ್ತನೆ ಗೊಂಡಿದೆ. ವಿಶೇಷ ಎಂದರೆ ಇಲ್ಲಿಯೂ ಮಂದಿರದ ಸುತ್ತ ಗೋವುಗಳ ತಾಣ. ಅದರಲ್ಲಿಯೂ ಭಾರತೀಯ ಅಪರೂಪದ ದೇಶಿ
ತಳಿಯ ಗೋವುಗಳು ವಾಸವಾಗಿರುವ ಕೊಟ್ಟಿಗೆಗಳು.

ಗೋಸಂರಕ್ಷಣೆಯ ಧ್ಯೋತಕವಾಗಿ ಈಗಾಗಲೇ 300ಕ್ಕೂ ಹೆಚ್ಚು ಗೋವುಗಳಿರುವ ಸುಂದರ ಪರಿಸರದಲ್ಲಿ ಮತ್ತು ಗೋವಂಶ ವೈಭವ ಸಾರುವ ಸ್ಥಳದಲ್ಲಿ ಗೋಪಾಲಕೃಷ್ಣ ದೇವರ ವಿಶಿಷ್ಟ ಕೆತ್ತನೆಯ ದೇವಾಲಯ ದಕ್ಷಿಣ ಭಾರತದಲ್ಲಿಯೇ ಅಪರೂಪ. ಹೀಗಿರುವ ಗಿರಿಧಾರಿಗೆ ಈ ಬಾರಿ ದಾರಿಯಾಗಿ ಸೋಪಾನ ಮಾಲೆ ಲೋಕಾರ್ಪಣೆಗೊಳ್ಳುತ್ತಿರುವುದು ವಿಶೇಷ.

ಕಾರ್ಯಕ್ರಮ ಮಾ.21ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗೋ ವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಪೂಜೆ ಆರಂಭ ಗೊಳ್ಳಲಿದೆ. ಬೆಳಗ್ಗೆ 7.30ಕ್ಕೆ ಪವಿತ್ರ ಸೋಪಾನ ಮಾಲೆ ಲೋಕಾರ್ಪಣೆ. 9.30ರಿಂದ ವಿಷ್ಣು
ಸಹಸ್ರನಾಮ ಪಠಣ ಆರಂಭ, 12 ಗಂಟೆಗೆ ಸಹಸ್ರ ಛತ್ರ ಸಮರ್ಪಣೆ, ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರಿಗೆ ಶ್ರೀ ರಾಘವೇ ಶ್ವರ ಭಾರತೀ ಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಧರ್ಮ ಸಭೆ, ಸಭಾ ಕಾರ್ಯಕ್ರಮದಲ್ಲಿ ಮಹಾನಂದಿ ಗೋಲೋಕದ ನೂತನ ವೆಬ್‌ಸೈಟ್ ಮತ್ತು ಕಪಿಲಾ ದರ್ಶನ ಗೋ ಗ್ರಂಥ ಬಿಡುಗಡೆಗೊಳ್ಳಲಿದೆ.