Saturday, 14th December 2024

Vishwavani Clubhouse: ಗಮನಿಸಿ, ವಿಶ್ವವಾಣಿ ಕ್ಲಬ್‌ಹೌಸ್‌ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ!

vishwavani clubhouse 12

ಬೆಂಗಳೂರು: ಜನಪ್ರಿಯ ಕ್ಲಬ್‌ಹೌಸ್‌ ಕಾರ್ಯಕ್ರಮವಾಗಿರುವ ʼವಿಶ್ವವಾಣಿ ಕ್ಲಬ್‌ಹೌಸ್‌ʼನ (Vishwavani Clubhouse) ಪ್ರತಿದಿನದ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಇನ್ನು ಮುಂದೆ ಪ್ರತಿದಿನ ಸಂಜೆ 6.55ರಿಂದ 8.05ರವರೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

ಈ ಮೊದಲು ಕಾರ್ಯಕ್ರಮ ಸಂಜೆ 6.55ರಿಂದ 8.30ರವರೆಗೆ ನಡೆಯುತ್ತಿತ್ತು. ಪ್ರತಿದಿನ ವಿಶೇಷ ಗಣ್ಯರನ್ನು ಕರೆಸಿ ಮಾತನಾಡಿಸುವ ಈ ಕಾರ್ಯಕ್ರಮ ವಾರದ ಐದು ದಿನಗಳಲ್ಲಿ ನಡೆಯುತ್ತದೆ. ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮಕ್ಕೆ ಬಿಡುವಿದೆ.

ಇತ್ತೀಚೆಗೆ ವಿಶ್ವವಾಣಿ ಕ್ಲಬ್‌ಹೌಸ್‌ ಕಾರ್ಯಕ್ರಮ ತನ್ನ 1000ನೇ ಎಪಿಸೋಡ್‌ ಪ್ರಸಾರ ಮಾಡಿತು. ನಟಿ ಜಯಮಾಲ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್‌, ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಹಿರಿಯ ಪತ್ರಕರ್ತ ಜೋಗಿ, ಕಿರಣ್‌ ಉಪಾಧ್ಯಾಯ, ಶಿಶಿರ್‌ ಹೆಗಡೆ, ರೂಪಾ ಗುರುರಾಜ್‌, ನಂಜನಗೂಡು ಮೋಹನ್‌ ಮುಂತಾದವರು ಸವಿನೆನಪುಗಳನ್ನು ಹಂಚಿಕೊಂಡರು.

ಕ್ಲಬ್‌ಹೌಸ್‌ ಅನ್ನು ಕನ್ನಡದಲ್ಲಿ ಅತ್ಯಂತ ಜನಪ್ರಿಯಗೊಳಿಸಿದ ಹ್ಯಾಂಡಲ್‌ ಎಂಬ ಹೆಗ್ಗಳಿಕೆ ವಿಶ್ವವಾಣಿಗೆ ಇದೆ. ಇದರ ಕೆಲವು ಕಾರ್ಯಕ್ರಮಗಳಲ್ಲಿ ಕ್ಲಬ್‌ಹೌಸ್‌ ರೂಂ ಮಿತಿಯಾದ 5000 ಜನ ಸೇರಿದ ದಾಖಲೆಯೂ ಇದೆ. ಇದರ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ, ಸದ್ಗುರು ಜಗ್ಗಿ ವಾಸುದೇವ್‌, ಸುಧಾ ಮೂರ್ತಿ ಮುಂತಾದ ಗಣ್ಯರು ಬಂದು ಭಾಗವಹಿಸಿದ್ದಾರೆ.

ಪ್ರತಿನಿತ್ಯ ಸಂಜೆ 7 ಗಂಟೆಗೆ ರಾಜ್ಯದ ಸಾವಿರಾರು ಮಂದಿ ಈಗಲೂ ತಮ್ಮ ಮೊಬೈಲ್‌ನಲ್ಲಿ ಕ್ಲಬ್‌ಹೌಸ್‌ ಆ್ಯಪ್‌ ಹುಡುಕುತ್ತಾರೆ. ನಿತ್ಯ ಒಂದೊಂದು ನಿತ್ಯನೂತನ ವಿಷಯಗಳೊಂದಿಗೆ ಜನರ ಮುಂದೆ ವಿಶ್ವವಾಣಿ ಕ್ಲಬ್‌ಹೌಸ್‌ ಹಾಜರಾಗುತ್ತದೆ. ಸತತ ಸಾವಿರ ಎಪಿಸೋಡುಗಳು ಇಲ್ಲಿ ಯಾವುದೇ ಅಡೆತಡೆಯಿಲ್ಲದೇ ನಡೆದಿವೆ. ಆರಂಭದಲ್ಲಿ ವಾರದ ಏಳು ದಿನವೂ ನಡೆಯುತ್ತಿದ್ದ ಕ್ಲಬ್‌ಹೌಸ್‌, ಕೆಲ ತಿಂಗಳುಗಳಿಂದ ಭಾನುವಾರ ವಿರಾಮ ಪಡೆಯುತ್ತಿತ್ತು. ಕ್ಲಬ್‌ಹೌಸ್‌ ಇತಿಹಾಸದಲ್ಲಿಯೇ ಈ ಪ್ರಮಾಣದಲ್ಲಿ ಸರಣಿ ಕಾರ್ಯಕ್ರಮಗಳು ನಡೆದಿರುವುದು ವಿಶ್ವವಾಣಿ ಕ್ಲಬ್‌ಹೌಸ್‌ ಒಂದರಲ್ಲೇ ಎನ್ನುವುದು ಒಂದು ದಾಖಲೆಯೂ ಹೌದು.

ವಿಶ್ವವಾಣಿ ಕ್ಲಬ್‌ಹೌಸ್‌ ಮುಟ್ಟದ ವಿಷಯಗಳೇ ಇಲ್ಲ ಅನ್ನಬಹುದು. ಸಾಹಿತ್ಯ, ಸಂಗೀತ, ಆಧ್ಯಾತ್ಮ, ಆರೋಗ್ಯ, ಕಲೆ ಇವೆಲ್ಲವುಗಳ ಜೊತೆಗೆ ಲೈಂಗಿಕ ಆರೋಗ್ಯದ ಅರಿವಿನ ಕಾರ್ಯಕ್ರಮವೂ ನಡೆದಿದೆ. ಎಡ- ಬಲ ಎಂಬ ಪಂಥಬೇಧವಿಲ್ಲದೆ, `ವಿಷಯ’ಕ್ಕೆ ಮಾತ್ರ ಮಹತ್ವ ನೀಡುವ ಅಪರೂಪದ ವೇದಿಕೆ ಇದು.

ಇದನ್ನೂ ಓದಿ: Vishwavani Clubhouse: ‘ವಿಶ್ವವಾಣಿ ಕ್ಲಬ್‌ಹೌಸ್‌ ಅನುಭವ ಮಂಟಪ, ಕೇಳುವ ಸಂಸ್ಕೃತಿಯ ತಾಣ’: ಕಳೆಗಟ್ಟಿದ ಸಾವಿರದ ಸಂಭ್ರಮ