ಟೋಕಿಯೊ: ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶ್ವವಾಣಿ (Vishwavani Global Achievers Award) ಆರಂಭಿಸಿದ ʼಸಾಗರದಾಚೆ ಕರುನಾಡ ಸಾಧಕರಿಗೆ ಸನ್ಮಾನʼ ಎನ್ನುವ ಅಪೂರ್ವ ಕಾರ್ಯಕ್ರಮದ ಆರನೇ ಅಧ್ಯಾಯ ಆರಂಭವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಐದು ದೇಶಗಳಲ್ಲಿ ಅದ್ಧೂರಿಯಾಗಿ ಆಯೋಜನೆಗೊಂಡಿದ್ದ ʼಗ್ಲೋಬಲ್ ಅಚೀವರ್ಸ್ ಅವಾರ್ಡ್ʼ ಕಾರ್ಯಕ್ರಮವು ಅಭೂತಪೂರ್ವವಾದ ಯಶಸ್ಸನ್ನು ಕಂಡಿತ್ತು. ಭಾರತ ಹಾಗೂ ಆಯಾ ದೇಶದ ಕಲೆ, ಸಂಸ್ಕೃತಿಯನ್ನು ಮೇಳೈಸುವ ಪ್ರಯತ್ನದಲ್ಲೂ ಪತ್ರಿಕೆ ಗೆಲುವು ಸಾಧಿಸಿತ್ತು.
ಎಲ್ಲೆಡೆ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಗರದಾಚೆಗಿನ ಕನ್ನಡಿಗರ ಮನಸೂರೆಗೊಳಿಸಿದ್ದ ವಿಶ್ವವಾಣಿ ಇದೀಗ ಸೂರ್ಯ ಉದಯಿಸುವ ನಾಡು, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಆರನೇ ಆವೃತ್ತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಮಾಡಿರುವ 22 ಗಣ್ಯರಿಗೆ ನ.22ರಂದು ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಈ ಸುದ್ದಿಯನ್ನೂ ಓದಿ | Narendra Modi: ಪ್ರಧಾನಿ ಮೋದಿ ಮುಡಿಗೆ ಮತ್ತೆರಡು ಅತ್ಯುನ್ನತ ಪ್ರಶಸ್ತಿಗಳ ಗರಿ
ಜಪಾನ್‌ನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದ ನಿಯೋಗವು ಅದಮ್ಯ ಉತ್ಸಾಹದೊಂದಿಗೆ ಜಪಾನ್ ತಲುಪಿದೆ. ಜಪಾನ್‌ಗೆ ತೆರಳುವ ಮುನ್ನ ವಿಶ್ವದಲ್ಲೇ ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ಮತ್ತು ಸುಂದರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದೆನಿಸಿರುವ ಹಾಂಕಾಂಗ್ ಏರ್‌ಪೋರ್ಟ್‌ಗೆ ತೆರಳಿ ಅಲ್ಲಿಂದ ಜಪಾನ್‌ನತ್ತ ನಿಯೋಗವು ಪ್ರಯಾಣವನ್ನು ಬೆಳೆಸಿತು. ಈ ವೇಳೆ ಹಾಂಕಾಂಗ್‌ನ ವಿವಿಧ ಸ್ಥಳಗಳಿಗೆ ಈ ತಂಡ ಭೇಟಿ ನೀಡಿದೆ.
ಬಳಿಕ ಈ ತಂಡ ಜಪಾನಿನ ನಿಸರ್ಗ ರಮಣೀಯ ಕ್ಷೇತ್ರ, ಪ್ರಸಿದ್ಧ ದೇವಾಲಯ, ಪ್ರೇಕ್ಷಣೀಯ ಮತ್ತು ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಿದೆ. ವಿಶ್ವೇಶ್ವರ ಭಟ್ ಅವರ ನೇತೃತ್ವದ ನಿಯೋಗದಲ್ಲಿ 40 ಮಂದಿಯಿದ್ದಾರೆ.
ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಶ್ರೀ ಶಾಂತವೀರ ಸ್ವಾಮೀಜಿ ಅವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ವಿಶ್ವವಾಣಿ ಸಿಇಒ ಚಿದಾನಂದ ಕಡಲಾಸ್ಕರ್ ಅವರು ಜತೆಗಿದ್ದಾರೆ.
ಈ ಸುದ್ದಿಯನ್ನೂ ಓದಿ | Time Deposit Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿದೆ ಲಕ್ಷ ರೂ.ವರೆಗೆ ಬಡ್ಡಿ ಗಳಿಸುವ ಅವಕಾಶ!
ಶ್ರೀ ವಿಜಯ ಮಾರುತಿ ಶರ್ಮಾ, ಶಾಸಕ ಆರಗ ಜ್ಞಾನೇಂದ್ರ, ಹಿರಿಯ ನ್ಯಾಯವಾದಿ ಎಚ್.ಎಸ್. ಚಂದ್ರಮೌಳಿ, ಖ್ಯಾತ ಛಾಯಾಗ್ರಾಹಕ ಎಚ್.ಎಸ್. ರಾಮಚಂದ್ರ, ಸಮಾಜ ಸೇವಕರಾದ ಲತಿಕಾ ಭಟ್, ನಟ ರಕ್ಷಿತ್ ಜಿ, ಯಶಸ್ವಿ ಎಂಜಿನಿಯರ್ ಗಣಪತಿ ಜಿ. ಹೆಗಡೆ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್, ಸಾಲು ಮರದ ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ಬಿ.ಎನ್., ಅಡಿಗಾಸ್ ಯಾತ್ರಾದ ಕೆ. ನಾಗರಾಜ್ ಅಡಿಗ, ನಾನಾ ವಲಯದ ಸಾಧಕರಾದ ಕೆ.ಎಸ್. ಹರೀಶ್, ಡಾ. ಕೆ. ವಿ. ಸಿದ್ದರಾಜು, ಲೋಕೇಶ್ ಆರ್. ಎಚ್., ಕೆ. ಮಂಜುನಾಥ್, ಡಾ. ಬಸವರಾಜ್ ವಿ. ಬಳ್ಳಾರಿ, ರಾಘವೇಂದ್ರ ಎಚ್.ಎನ್., ಡಾ. ಚೌಡಯ್ಯ, ನವೀನ್ ಸಿ.ವಿ., ವಿಜಯ್‌ಕುಮಾರ್ ಎಸ್. ಕೆ., ಜಗನ್ನಾಥ್ ಹಲಿಂಗೆ, ವಿಜಯ್ ರಾಘವೇಂದ್ರನ್ ಮತ್ತು ಶ್ರೀಷ ಅವರಿಗೆ ಗ್ಲೋಬಲ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಲಾಗುವುದು.