Thursday, 12th December 2024

ಈಶಾನ್ಯ ಶಿಕ್ಷಕರ ಕ್ಷೇತ್ರ: ನಮೋಶಿ ಗೆಲುವು

ಒಟ್ಟು ಚಲಾವಣೆಯ 21437 ಮತಗಳ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಸಂಪೂರ್ಣ ಮುಗಿದಿದ್ದು, ಇದರಲ್ಲಿ ಬಿ.ಜೆ.ಪಿ. ಪಕ್ಷದ ಶಶೀಲ ಜಿ.ನಮೋಶಿ ಅವರು 3205 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಮತಗಳ ವಿವರ:
ತಿಮ್ಮಯ್ಯ ಪುರ್ಲೆ(ಜೆ.ಡಿ‌.ಎಸ್)-3812
ಶರಣಪ್ಪ ಮಟ್ಟೂರು (ಕಾಂಗ್ರೆಸ್)-6213
ಶಶೀಲ ಜಿ. ನಮೋಶಿ(ಬಿ.ಜೆ.ಪಿ)-9418
ವಾಟಾಳ ನಾಗರಾಜ( ವಾಟಾಳ ಪಕ್ಷ)-59
ಡಾ.ಚಂದ್ರಕಾಂತ ಸಿಂಗೆ(ಇಂಡಿಪೆಂಡೆಂಟ್)-91
ಮಾನ್ಯಗೊಂಡ ಮತಗಳು : 19593
ಅಮಾನ್ಯಗೊಂಡ ಮತಗಳು: 1844
ಪ್ರಥಮ‌ ಪ್ರಾಶ್ಯಸ್ತದ ಮತ ಎಣಿಕೆ ಪುರ್ಣವಾಗಿದ್ದು, ಒಟ್ಟು 21437 ಮತ ಚಲಾವಣೆಯಲ್ಲಿ 1844 ತಿರಸ್ಕೃತದೊಂದಿಗೆ 19593  ಮತಗಳು ಸಿಂಧುವಾಗಿದೆ ಎಂದು ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ ಘೋಷಣೆ ಮಾಡಿದರು.
ವಿನ್ನಿಂಗ್ ಕೋಟಾ ಫಿಕ್ಸ್ ಮಾಡಿದ ನಂತರ ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ಅತ್ಯಂತ ಕಡಿಮೆ ಮತ ಪಡೆದ ವಾಟಾಳ ನಾಗರಾಜ  ಅವರನ್ನು ಎಲಿಮಿನೇಟ್ ಮಾಡಿ ಅವರಿಗೆ ಬಂದ 59 ಮತಗಳಲ್ಲಿ 2ನೇ ಪ್ರಾಶಸ್ತ್ಯದ ಮತ ಎಣಿಕೆ ಆರಂಭಗೊಂಡಿದೆ.