Tuesday, 22nd October 2024

Waqf Board: ವಿಜಯಪುರದಲ್ಲಿ 10 ಸಾವಿರ ಎಕರೆ ವಕ್ಫ್ ಬೋರ್ಡ್‌ಗೆ: ಸಚಿವ ಜಮೀರ್ ಆದೇಶ, ಹಿಂದೂಗಳ ಪ್ರತಿಭಟನೆ

zameer ahmed

ವಿಜಯಪುರ: ಜಿಲ್ಲೆಯಲ್ಲಿ (Vijayapura news) ಇತರ ಹಲವು ಇಲಾಖೆಗಳಿಗೆ ಸೇರಿದ ಸುಮಾರು 10 ಸಾವಿರ ಎಕರೆ ಜಮೀನನ್ನು ವಕ್ಫ್‌ ಬೋರ್ಡ್‌ (Waqf Board) ತನ್ನದು ಎಂದು ಹಕ್ಕು ಸಾಧಿಸಿದ್ದು, ಇದರ ಸರ್ವೆಗೆ ಸಚಿವ ಜಮೀರ್‌ ಅಹಮದ್‌ (Zameer Ahmed Khan) ಆದೇಶ ನೀಡಿದ್ದಾರೆ. ಇದು ಹಿಂದೂಗಳನ್ನು ಕೆರಳಿಸಿದ್ದು, ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ಚರ್ಚೆಯಲ್ಲಿರುವಾಗಲೇ ವಿಜಯಪುರದಲ್ಲಿ ಈ ತಗಾದೆ ಎದ್ದಿದೆ. ವಕ್ಫ್ ಬೋರ್ಡ್ ಸುಮಾರು 10 ಸಾವಿರ ಎಕರೆ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಸಚಿವ ಜಮೀರ್ ಅಹ್ಮದ್ ಆಸ್ತಿ ಸರ್ವೇಗೆ ಆದೇಶ ನೀಡಿದ್ದಾರೆ. ಇದರಲ್ಲಿ ಇದರಲ್ಲಿ ಕಂದಾಯ ಇಲಾಖೆಯ 2148 ಎಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ 1012 ಎಕರೆ, ನಗರಾಭಿವೃದ್ಧಿ ಇಲಾಖೆ 322 ಎಕರೆ ಜಮೀನು ಒಳಗೊಂಡಿದೆ.

ಇದೆಲ್ಲವೂ ವಕ್ಫ್ ಆಸ್ತಿ ಎಂದು ಸರ್ವೇ ಮಾಡಲು ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 45 ದಿನಗಳೊಳಗಾಗಿ ಸರ್ವೇ ನಡೆಸಲು ಆದೇಶ ನೀಡಿದ್ದಾರೆ. ಈಗಾಗಲೇ ಭೂಮಿ ಸರ್ವೇ ಬಗ್ಗೆ ನೋಟಿಸ್ ಪಡೆದವರು ಆತಂಕಕ್ಕೊಳಗಾಗಿದ್ದಾರೆ. ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಲು, ವಕ್ಫ್ ಜಮೀನು ಮಾರಾಟವಾಗದಂತೆ ಫ್ಲಾಗಿಂಗ್ ಮಾಡಲು ಸಚಿವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದು ಹಿಂದೂ ಸಂಘಟನೆಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಇಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ ಮತ್ತು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: Waqf: ವಕ್ಫ್ ಬೋರ್ಡ್ನಿಂದ ಜಿಲ್ಲೆಯ ಅಲೀಪುರದಲ್ಲಿ ಮಹಿಳಾ ಪಿಯು ಕಾಲೇಜು ಸ್ಥಾಪನೆ : ಮುಜಮ್ಮಿಲ್ ಪಾಷಾ