Thursday, 21st November 2024

Waqf Board: ವಕ್ಫ್‌ ತಗಾದೆ; ರೊಚ್ಚಿಗೆದ್ದ ರೈತರಿಂದ ಅನ್ಯಕೋಮಿನ ಮುಖಂಡರ ಮನೆ ಮೇಲೆ ಕಲ್ಲು ತೂರಾಟ

police

ಹಾವೇರಿ: ಹಾವೇರಿ ಜಿಲ್ಲೆ (Haveri news) ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಅನ್ಯಕೋಮಿನ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವಕ್ಫ್ ಹೆಸರಿಗೆ (Waqf Board) ಆಸ್ತಿ ವರ್ಗಾಯಿಸಿಕೊಂಡು ಮನೆಗಳನ್ನು ಖಾಲಿ ಮಾಡಿಸಲಿದ್ದಾರೆ ಎಂಬ ವದಂತಿಯಿಂದ ಉದ್ರಿಕ್ತರ ಗುಂಪು ಅನ್ಯಕೋಮಿನ ಮುಖಂಡರ ಮನೆ ಮೇಲೆ ಕಲ್ಲು ತೂರಾಟ (Stone Pelting) ನಡೆಸಿ ಮನೆ ಮುಂದೆ ನಿಲ್ಲಿಸಿದ್ದ ವಾಹನ ಜಖಂಗೊಳಿಸಿದೆ.

ಮಾಹಿತಿ ತಿಳಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಎಸ್ಪಿ ಅಂಶುಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಮಾಹಿತಿ ನೀಡಿ, ಕಡಕೋಳ ಗ್ರಾಮದಲ್ಲಿ ಗರಡಿ ಮನೆಗೆ ಸಂಬಂಧಿಸಿದಂತೆ ಗೊಂದಲವಿತ್ತು. ಆಸ್ತಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಓದಿ ಭಯಗೊಂಡಿದ್ದಾರೆ. ವಕ್ಫ್ ಎಂದು ಹೆಸರು ನಮೂದಿಸುತ್ತಾರೆ ಎಂದು ಗಲಾಟೆ ಮಾಡಿದ್ದಾರೆ. ವಾಸವಿರುವ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಆತಂಕ ಉಂಟಾಗಿ ಅನ್ಯಕೋಮಿನ ಮುಖಂಡರ ಮನೆಗಳ ಮೇಲೆ ತೂರಾಟ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಎಸ್ಪಿ ಅಂಶುಕಮಾರ್ ಮಾತನಾಡಿ, ಗ್ರಾಮದ ಕೆಲವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸ್ ಇಲಾಖೆಯಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗುವುದು, ಹಲ್ಲೆಗೊಳಗಾದವರಿಂದಲೂ ದೂರು ಪಡೆಯಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ 4 KSRP ತುಕಡಿ, 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Waqf Board: ಮತ್ತೆ ವಕ್ಫ್‌ ಪೆಡಂಭೂತ: ನಾಲ್ಕು ಜಿಲ್ಲೆಗಳ 1,765 ರೈತರ ಆಸ್ತಿಗಳಿಗೆ ನೋಟೀಸ್‌