ಇಂಡಿ: ನಂಜು0ಡಪ್ಪ ವರದಿಯಂತೆ ಬ್ರೀಟಿಷರ ಕಾಲದಿಂದಲೂ ಈ ಭಾಗ ನೀರಾವರಿ ವಂಚಿತ ಪ್ರದೇಶವಾಗಿತ್ತು. ಹೋರ್ತಿ ಭಾಗದ ಹನಿ ನೀರೆ ಕಾಣದ ಗುಡ್ಡ ಗಾಡು ಬೆಟ್ಟ ಪ್ರದೇಶ ಎಂದು ಈ ಹಿಂದೆ ಕೈಬಿಟ್ಟ ಪ್ರದೇಶಗಳಿಗೆ ಇಂದಿನ ಬಿಜೆಪಿ ಸರಕಾರ ವಿಜಯಪೂರ ಜಿಲ್ಲೆಯ ಇಂಡಿ ವಿಜಯಪೂರ ಮತ್ತು ಚಡಚಣ ತಾಲೂಕುಗಳ ೨೮.೦೦೦ ಸಾವಿರ ಹೆಕ್ಟರ್ ನೀರಾವರಿ ವಂಚಿತ ಪ್ರದೇಶಕ್ಕೆ ಆಲಿಮಟ್ಟಿ ಜಲಾಶೇಯದ ಹಿನ್ನೀರಿನಿಂದ ಸರಕಾರ ನೀರು ಒದಗಿಸುವ ಸಂಕಲ್ಪ ಮಾಡಿದೆ.
ರೈತರ ಹಿತ ಚಿಂತನೆ ಅರಿತು ಹೋರ್ತಿ ಭಾಗಕ್ಕೆ ಶ್ರೀರೇವಣಸಿದ್ದೇಶ್ವರ ಏತನೀರಾವರಿ ಯೋಜನೆಗೆ ಅನುಮೋದನೆ ಮಾಡಿರುವು ದರಿಂದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ನೀರಾವರಿ ಸಚಿವರಾದ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿಯವರಿಗೆ ಹಾಗೂ ಸಚಿವ ಸಂಪುಟ ಕ್ಯಾಬಿನೇಟನಲ್ಲಿ ಅನುಮೋದನೆ ಮಾಡಿರುವುದರಿಂದ ಬಿಜೆಪಿ ಮುಖಂಡ ವೆಂಕಟೇಶ ಕುಲಕರ್ಣಿ, ರಾಮಸಿಂಗ ಕನ್ನೋಳ್ಳಿ ಈ ಭಾಗದ ರೈತರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.