Wednesday, 20th November 2024

Wedding Jewel Blouse Fashion: ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಜ್ಯುವೆಲ್ ಬ್ಲೌಸ್‌ಗಳಿವು

Wedding Jewel Blouse Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿಂಟರ್ ಸೀಸನ್‌ನ ವೆಡ್ಡಿಂಗ್ ಫ್ಯಾಷನ್‌ನಲ್ಲಿ ನಾನಾ ಬಗೆಯ ಜ್ಯುವೆಲ್ ಸೀರೆ ಬ್ಲೌಸ್‌ಗಳು (Wedding Jewel Blouse Fashion) ಫ್ಯಾಷನ್‌ಲೋಕದಲ್ಲಿ ಎಂಟ್ರಿ ನೀಡಿದ್ದು, ಅವುಗಳಲ್ಲಿ, 3 ಬಗೆಯವು ಅತಿ ಹೆಚ್ಚು ಚಾಲ್ತಿಯಲ್ಲಿವೆ. ಜ್ಯುವೆಲ್ ಬ್ಲೌಸ್‌ಗಳು ಗ್ರ್ಯಾಂಡ್ ಹಾಗೂ ಶ್ರೀಮಂತರ ಮನೆಯ ಮದುವೆಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದವು. ಮದುವೆಯಾಗುವ ಮದುಮಗಳ ಹಾಗೂ ಮನೆಯವರ ಸೀರೆಯೊಂದಿಗೆ ಕಾಣಸಿಗುತ್ತಿದ್ದವು. ಇದೀಗ ಈ ಬ್ಲೌಸ್‌ಗಳ ಡಿಸೈನ್ ಸಾಮಾನ್ಯವಾಗತೊಡಗಿದೆ. ರೆಡಿಮೇಡ್‌ನಲ್ಲೂ ಇವು ಕಾಣಸಿಗುತ್ತಿವೆ. ಅಲ್ಲದೇ, ಇಮಿಟೇಷನ್ ರೆಡಿ ಜ್ಯುವೆಲ್ ಡಿಸೈನ್ ಸಾಮಗ್ರಿಗಳು ಈ ಬ್ಲೌಸ್‌ನ ಸಿಂಗಾರ ಮಾಡತೊಡಗಿವೆ. ಪರಿಣಾಮ, ಸಾಮಾನ್ಯ ಮಹಿಳೆಯರು ಹಾಗೂ ಹುಡುಗಿಯರು ಕೂಡ ಈ ಬ್ಲೌಸ್‌ಗಳನ್ನು ಡಿಸೈನ್ ಮಾಡಿಸತೊಡಗಿದ್ದಾರೆ ಹಾಗೂ ಧರಿಸತೊಡಗಿದ್ದಾರೆ ಎನ್ನುತ್ತಾರೆ ಬ್ಲೌಸ್ ಡಿಸೈನರ್ ರಾಶಿ.

ಚಿತ್ರಕೃಪೆ: ಪಿಕ್ಸೆಲ್

ಬ್ರೈಡಲ್ ಲುಕ್ ನೀಡುವ ಗೋಲ್ಡನ್ ಜ್ಯುವೆಲ್ ಬ್ಲೌಸ್

ಮದುಮಗಳ ಸೌಂದರ್ಯವನ್ನು ಹೆಚ್ಚಿಸುವ ರೇಷ್ಮೆ ಸೀರೆಗಳ ಬ್ಲೌಸ್‌ಗಳು ಇಂದು ಗೋಲ್ಡನ್ ಲುಕ್ ಪಡೆಯುತ್ತಿವೆ. ಹ್ಯಾಂಡ್ ಎಂಬ್ರಾಯ್ಡರಿ ಜತೆಗೆ ಗೋಲ್ಡ್ ಟಚ್ ನೀಡಲು ಸಾಕಷ್ಟು ಗೋಲ್ಡ್ ಕೋಟೆಡ್ ಹಾಗೂ ಸಿಲ್ವರ್‌ನ ಬಂಗಾರದ ಲೇಪನವುಳ್ಳ ಚೈನ್ ಹಾಗೂ ಹರಳಿನ ಓಲೆಯಂತಹ ಸಿಂಗಾರದ ಆಭರಣಗಳಿಂದಲೂ ಹೊಲೆದು ಡಿಸೈನ್ ಮಾಡಿ ಸಿಂಗರಿಸಲಾಗುತ್ತಿದೆ.

ಲಕ್ಷ್ಮಿ ಪೆಂಡೆಂಟ್ ಸಿಂಗಾರ

ಶ್ರೀಮಂತ ಹಾಗೂ ಸಿನಿಮಾ ತಾರೆಯರ ಜ್ಯುವೆಲ್ ಬ್ಲೌಸ್‌ನಲ್ಲಿ ಬಾಜುಬಂದ್ ಬದಲು ಲಕ್ಷ್ಮಿ ಪೆಂಡೆಂಟನ್ನು ಬಳಸಲಾಗುತ್ತಿದೆ. ನಾಗರ, ಗಣಪತಿ, ಗಂಡುಭೇರುಂಡ ಹೀಗೆ ನಾನಾ ಬಗೆಯ ಹೆಚ್ಚು ಚಾಲ್ತಿಯಲ್ಲಿರುವ ಪೆಂಡೆಂಟ್ ಶೈಲಿಯವನ್ನು ಬ್ಲೌಸ್‌ನ ಸ್ಲೀವ್ ಭಾಗದಲ್ಲಿಅಂದರೆ, ಬಾಜುಬಂದ್ ಕಟ್ಟುವ ಜಾಗದಲ್ಲಿ ಹೊಲೆದು ಇಲ್ಲವೇ ವಿನ್ಯಾಸಗೊಳಿಸಿ ಶೃಂಗರಿಸಲಾಗುತ್ತಿದೆ. ಈ ಡಿಸೈನ್ ದುಬಾರಿಯಾದರೂ ಕೆಲವು ಹೆಣ್ಣುಮಕ್ಕಳು, ರಾಯಲ್ ಲುಕ್ಕಾಗಿ ಈ ವಿನ್ಯಾಸದವನ್ನು ಧರಿಸುತ್ತಿದ್ದಾರೆ.

ಬಂಗಾರ ವರ್ಣದ ಕಾಯಿನ್ಸ್ ಜ್ಯುವೆಲ್ ಬ್ಲೌಸ್

ಚಿಕ್ಕ-ದೊಡ್ಡ ಬಂಗಾರ ವರ್ಣದ ನಾಣ್ಯಗಳನ್ನು ಜ್ಯುವೆಲ್ ಬ್ಲೌಸ್ ಸ್ಲೀವ್ ವಿನ್ಯಾಸಕ್ಕೆ ಬಳಸಲಾಗುತ್ತಿದೆ. ಗೋಲ್ಡ್ ಕೋಟೆಡ್, ಸಿಲ್ವರ್ ಕೋಟೆಡ್ ಕಾಯಿನ್‌ಗಳನ್ನು ಡಿಸೈನ್‌ನಲ್ಲಿ ಬಳಸುತ್ತಿರುವುದನ್ನು ಸೆಲೆಬ್ರೆಟಿಗಳ ವೆಡ್ಡಿಂಗ್ ಬ್ಲೌಸ್‌ಗಳಲ್ಲಿ ಕಾಣಬಹುದು. ಕೆಲವಲ್ಲಿ ಕಂಪ್ಲೀಟ್ ಸ್ಲೀವ್ ಈ ವಿನ್ಯಾಸ ಮಾಡಿದರೆ, ಮತ್ತೆ ಕೆಲವಲ್ಲಿ ಬಾಜುಬಂಧ್‌ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ ಎನ್ನುತ್ತಾರೆ ವಿನ್ಯಾಸಕರು.

ಈ ಸುದ್ದಿಯನ್ನೂ ಓದಿ | International Men’s Day 2024: ಇಂಟರ್ ನ್ಯಾಷನಲ್ ಮೆನ್ಸ್ ಡೇ ಸ್ಪೆಷಲ್‌ಗೆ ಫ್ಯಾಷೆನಬಲ್ ಆಗಿ ಕಾಣಿಸಿಕೊಂಡ ಸೆಲೆಬ್ರೆಟಿಗಳಿವರು!

ಜ್ಯುವೆಲ್ ಬ್ಲೌಸ್ ಪ್ರಿಯರಿಗೆ ಟಿಪ್ಸ್

  • ಕಡಿಮೆ ಬಜೆಟ್‌ನಲ್ಲಾದಲ್ಲಿ ಇಮಿಟೇಷನ್ ಜುವೆಲ್‌ಗಳಿಂದಲೂ ಬ್ಲೌಸ್ ಡಿಸೈನ್ ಮಾಡಿಸಬಹುದು.
  • ರೆಡಿಮೇಡ್ ಸೀರೆ ಬ್ಲೌಸ್ ಕೈಗೆಟಕುವ ದರದಲ್ಲಿ ದರದಲ್ಲಿ ದೊರೆಯುತ್ತದೆ.
  • ಆದಷ್ಟೂ ಲೈಟ್ವೈಟ್ ಜ್ಯುವೆಲ್ ಬ್ಲೌಸ್ ಆಯ್ಕೆ ಮಾಡಿ.

(ಲೇಖಕಿ ಫ್ಯಾಷನ್ ಪತ್ರಕರ್ತೆ )