ಬೆಂಗಳೂರು: ಸಾರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಶೇ.8ರಷ್ಟು ವೇತನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಆದರೆ 6ನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಶೇ.8ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದೇವೆ. ಲಾಕ್ ಡೌನ್ ವೇಳೆ ಸಾರಿಗೆ ಇಲಾಖೆ ಯಲ್ಲಿ ಹಣ ಇರಲಿಲ್ಲ ಸರ್ಕಾರದ ಖಜಾನೆಯಿಂದ ಹಣ ತಂದು ನೌಕರರ ಸಂಬಳ ಪಾವತಿ ಮಾಡಿದ್ದೇವೆ. ಇಲಾಖೆಗೆ ಪ್ರತಿದಿನ 4 ಕೋಟಿ ನಷ್ಟವುಂಟಾಗುತ್ತಿದೆ. ಆದರೂ ಸಂಬಳ ಪಾವತಿ ನಿಲ್ಲಿಸಿಲ್ಲ. ಆದರೆ ಒಂದು ಬೇಡಿಕೆಯಾದ 6ನೇ ವೇತನ ಆಯೋಗ ಜಾರಿ ಮಾತ್ರ ಸಾಧ್ಯವಿಲ್ಲ ಎಂದರು.
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಈಗ ಸಂಬಳ ಹೆಚ್ಚಿಸಲು ಆಗಲ್ಲ. ಕೋವಿಡ್ ನಿಯಮ ಉಲ್ಲಂಘಿಸಿಯೂ ನಾಳೆ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾದರೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಹಠಕ್ಕೆ ಬಿದ್ದು ಪ್ರತಿಭಟನೆಗೆ ಮುಂದಾದರೆ ಎಸ್ಮಾ ಜಾರಿ ಮಾಡಲಾಗುವುದು. ಸಾರ್ವಜನಿಕರ ಪ್ರಯಾಣಕ್ಕೆ ಅಡ್ದಿಯುಂಟಾದರೆ, ತೊಂದರೆಯುಂಟಾದರೆ ಕಠಿಣ ಕ್ರಮಗಳನ್ನು ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ