Friday, 22nd November 2024

Winter Cardigans Fashion: ಚಳಿಗಾಲಕ್ಕಾಗಿ ಬಂತು ವೈವಿಧ್ಯಮಯ ಕಾರ್ಡಿಗಾನ್ಸ್!

Winter Cardigans Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿಂಟರ್‌ ಸೀಸನ್‌ನಲ್ಲಿ ವೈವಿಧ್ಯಮಯ ಕಾರ್ಡಿಗಾನ್‌ಗಳು ಫ್ಯಾಷನ್‌ಲೋಕಕ್ಕೆ (Winter Cardigans Fashion) ಎಂಟ್ರಿ ನೀಡಿವೆ. ಹೌದು, ವಾಟರ್‌ ಫಾಲ್‌ ಕಾರ್ಡಿಗಾನ್‌, ಕ್ಲಾಸಿ ಲಾಂಗ್‌ ಕಾರ್ಡಿಗನ್‌, ಪ್ರಿಂಟೆಡ್‌ ಕಾರ್ಡಿಗಾನ್‌, ನಿಟ್‌ವೇರ್‌ ಕಾರ್ಡಿಗಾನ್‌, ನೆಟ್ಟೆಡ್‌ ಕಾರ್ಡಿಗಾನ್‌, ವೂಲ್‌ ಕಾರ್ಡಿಗಾನ್‌… ಹೀಗೆ ನಾನಾ ಶೈಲಿಯ ಕಾರ್ಡಿಗಾನ್‌ಗಳು ಇಂದು ಫ್ಯಾಷನ್‌ ಲೋಕಕ್ಕೆ ಆಗಮಿಸಿದ್ದು, ಮಾನಿನಿಯರನ್ನು ಸೆಳೆದಿವೆ.

ಚಿತ್ರಕೃಪೆ: ಪಿಕ್ಸೆಲ್‌

ವಾಟರ್‌ಫಾಲ್‌ ಕಾರ್ಡಿಗಾನ್ಸ್‌

ನೋಡಲು ಫ್ಲೊಆಗುತ್ತಿರುವಂತೆ ಕಾಣುವ ವಾಟರ್‌ಫಾಲ್‌ ಕಾರ್ಡಿಗಾನ್ಸ್‌ ಇಂದು ಹೆಚ್ಚು ಟ್ರೆಂಡಿಯಾಗಿವೆ. ಇದು ಕ್ರಾಪ್‌ ಹಾಗೂ ಶಾರ್ಟ್‌ ಕಾರ್ಡಿಗಾನ್‌ಗಿಂತ ನೋಡಲು ಭಿನ್ನವಾಗಿವೆ. ಕೆಲವು ನೀ ಲೆಂತ್‌ ಇರುತ್ತವೆ. ಇವು ನೋಡಲು ತಕ್ಷಣಕ್ಕೆ ಕೋಟ್‌ನಂತೆಯೂ ಕಾಣಬಹುದು. ಆದರೆ ಇವುಗಳ ಫ್ಯಾಬ್ರಿಕ್‌ ಸಾಫ್ಟಾಗಿರುವುದರಿಂದ ಹಾಗೆಯೇ ಲೇಯರ್‌ನಂತೆಯೂ ಕೂರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ನೆಟ್ಟೆಡ್‌ ಲಾಂಗ್‌ ಕಾರ್ಡಿಗಾನ್ಸ್‌

ನೆಟ್ಟೆಡ್‌ ಕಾರ್ಡಿಗಾನ್ಸ್‌ ಲೇಯರ್‌ ಲುಕ್‌ಗೆ ಹೊಸ ಇಮೇಜ್‌ ನೀಡುತ್ತವೆ. ಒಳಗೆ ಧರಿಸಿರುವ ಟಾಪ್‌ ಅಥವಾ ಡ್ರೆಸ್‌ಗಳು ಕಾಣಿಸುವುದರಿಂದ ಇವು ಡಿಫರೆಂಟಾಗಿ ಕಾಣಿಸುತ್ತವೆ. ಯಾವುದೇ ಡ್ರೆಸ್ಸಗೂ ಇವು ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ ಡಿಸೈನರ್‌ ರಾಜ್‌.

ಪ್ರಿಂಟೆಡ್‌ ಕಾರ್ಡಿಗಾನ್ಸ್‌

ಫ್ಲೋರಲ್‌, ಸ್ಟ್ರೈಫ್ಸ್‌ ಅಥವಾ ಶೇಡ್ಸ್‌ ಇಲ್ಲವೇ ಅನಿಮಲ್‌ ಪ್ರಿಂಟ್ಸ್‌ ಇರುವಂತಹ ಪ್ರಿಂಟೆಡ್‌ ಕಾರ್ಡಿಗಾನ್ಸ್‌ ಕೂಡ ಇಂದು ಸಾಕಷ್ಟು ವೆರೈಟಿಯಲ್ಲಿ ಲಭ್ಯ. ಟೀನೇಜ್‌ ಹುಡುಗಿಯರಿಗೆ ಇವು ಆಕರ್ಷಕವಾಗಿ ಕಾಣುತ್ತವೆ. ಕಚೇರಿಗೆ ತೆರಳುವ ಮಾನಿನಿಯರು ಕೂಡ ಇವನ್ನು ಧರಿಸಬಹುದು. ಅವರವರ ಪರ್ಸನಾಲಿಟಿಗೆ ತಕ್ಕಂತೆ ಪ್ರಿಂಟ್ಸ್ ಆಯ್ಕೆ ಮಾಡುವುದು ಮುಖ್ಯ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

ಯಾರಿಗೆ ಯಾವುದು?

ಸ್ಲಿಮ್ಮಾಗಿರುವವರಿಗೆ ಲಾಂಗ್‌ ಕಾರ್ಡಿಗಾನ್ಸ್‌ ಹೊಂದುವುದಿಲ್ಲ. ಹೊಂದಿದರೂ, ಇನ್ನೂ ಸ್ಲಿಮ್ಮಾಗಿ ಹಾಗೂ ನೋಡಲು ಎತ್ತರವಾಗಿ ಬಿಂಬಿಸುತ್ತವೆ. ಹಾಗಾಗಿ ಆದಷ್ಟೂ ಸ್ಲಿಮ್ಮಾಗಿರುವವರು ಲಾಂಗ್‌ ಕಾರ್ಡಿಗಾನ್‌ ಅವಾಯ್ಡ್‌ ಮಾಡಿದರೇ ಉತ್ತಮ. ಪರ್ಫೆಕ್ಟ್ ಬಿಎಂಐ ಹೊಂದಿರುವವರು ಯಾವುದೇ ಬಗೆಯ ಕಾರ್ಡಿಗಾನ್‌ ಧರಿಸಬಹುದು. ಇನ್ನು ಕೊಂಚ ಪ್ಲಂಪಿಯಾಗಿರುವವರಿಗೆ ಹಾಗೂ ಹೈ ಪರ್ಸನಾಲಿಟಿ ಹೊಂದಿರುವವರಿಗೆ ಮಾನೋಕ್ರೋಮ್‌ ಶೇಡ್‌ನವು ಹಾಗೂ ಸಾದಾ ವಿನ್ಯಾಸದ ಕಾರ್ಡಿಗಾನ್‌ ಚೆನ್ನಾಗಿ ಕಾಣುತ್ತವೆ ಎಂಬುದು ಫ್ಯಾಷನಿಸ್ಟಾ ಜಾನ್‌ ಅಭಿಪ್ರಾಯ.

ಈ ಸುದ್ದಿಯನ್ನೂ ಓದಿ | Printed Kurta Fashion 2024: ಸೀಸನ್‌‌‌ನಲ್ಲಿ ಟ್ರೆಂಡಿಯಾಗಿರುವ 3 ಶೈಲಿಯ ಪ್ರಿಂಟೆಡ್‌ ಕುರ್ತಾಗಳಿವು

ಕಾರ್ಡಿಗಾನ್‌ ಪ್ರಿಯರಿಗೆ ಒಂದಿಷ್ಟು ಸಲಹೆ

  • ಆದಷ್ಟೂ ಕಲರ್ಸ್‌ನದ್ದು ಆಯ್ಕೆ ಮಾಡಿ.
  • ಇವನ್ನು ಧರಿಸಿದಾಗ ಮೆಸ್ಸಿ ಹೇರ್‌ಸ್ಟೈಲ್‌ ಬೇಡ.
  • ವೆಸ್ಟರ್ನ್‌ ಸ್ಟೈಲ್‌ನ ಕಾರ್ಡಿಗಾನ್ಸ್‌ಗೆ ಇಂಡಿಯನ್‌ ಔಟ್‌ಫಿಟ್‌ ಹೊಂದದು.
  • ಆಕ್ಸೆಸರೀಸ್‌ ಮಿನಿಮಲ್‌ ಆಗಿರಲಿ.
  • ಮೇಕಪ್‌ ತಿಳಿಯಾಗಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)