-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀಸನ್ ಯಾವುದಾದರೇನು? ಮೇಕಪ್ ಪ್ರಿಯರು ಮಾತ್ರ ಎಂದಿಗೂ ಮೇಕಪ್ (Winter Makeup Awareness) ಮಾಡುವುದನ್ನು ಮರೆಯುವುದಿಲ್ಲ! ಹಾಗೆಂದು ಎಲ್ಲಾ ಸೀಸನ್‌ನಲ್ಲೂ ಒಂದೇ ಬಗೆಯ ಮೇಕಪ್ ಟಿಪ್ಸ್ ಪಾಲಿಸಲು ಸಾಧ್ಯವಿಲ್ಲ! ಆಯಾ ಸೀಸನ್‌ನ ಹವಾಮಾನಕ್ಕೆ ತಕ್ಕಂತೆ ಒಂದಿಷ್ಟು ಬದಲಾವಣೆಗಳನ್ನು ಪಾಲಿಸಬೇಕಾಗುತ್ತದೆ. ಅವು ಯಾವುವು? ಎಂಬುದರ ಬಗ್ಗೆ ಬ್ಯೂಟಿ ಎಕ್ಸ್‌ಪರ್ಟ್ಸ್ ಶಾಲು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.
ಚಳಿಗೆ ಮಾಸದಿರಲಿ ಮೇಕಪ್
ಸಾಕಷ್ಟು ಬಾರಿ ಚಳಿಗಾಲದಲ್ಲಿ ಮುಖಕ್ಕೆ ಹಚ್ಚಿದ ಮೇಕಪ್ ಒಣಗಿದಂತಾಗುತ್ತದೆ. ನೋಡಲು ಒರಟಾಗಿ ಕಾಣಿಸುತ್ತದೆ. ಹಾಗೆಂದು ಚಳಿಗಾಲದಲ್ಲಿ ಸುಂದರವಾಗಿ ಕಾಣುವುದು ಕಷ್ಟವೇನಲ್ಲ. ಇದಕ್ಕಾಗಿ ಒಂದಿಷ್ಟು ಟಿಪ್ಸ್ ಪಾಲೋ ಮಾಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.
ಚಳಿಗಾಲದಲ್ಲಿ ಮೇಕಪ್ ಹೀಗಿರಲಿ
ಈ ಸೀಸನ್‌ನಲ್ಲಿ ಆದಷ್ಟೂ ನಿಮ್ಮ ಮೇಕಪ್ ಡ್ರೈ ಆಗದಿರಲಿ. ಡ್ರೈ ಮೇಕಪ್ ಅಂಶವಿರುವಂತಹ ಪ್ರಾಡಕ್ಟ್‌ಗಳನ್ನು ಬಳಸಬೇಡಿ. ಯಾಕಂದ್ರೆ, ಈ ಸೀಸನ್‌ನಲ್ಲಿ ನೀವು ಬೆವರುವುದಿಲ್ಲವಾದ್ದರಿಂದ ಕೆಲವೇ ಕ್ಷಣಗಳಲ್ಲಿ ಮುಖ ಒಣಗಿದಂತಾಗುತ್ತದೆ. ಹಾಗಾಗಿ ಹೊರಗೆ ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆಂದು ಓಡಾಡುವವರು ಆದಷ್ಟೂ ಮಿನರಲ್ ಮೇಕಪ್ ಬಳಸಿ. ಆಯಿಲ್ ಬೇಸ್ ಫೌಂಡೇಷನ್ ಬಳಸಿ.
ಟಾಲ್ಕಂ ಪೌಡರ್ ಬಳಕೆ ಬೇಡ
ಮುಖಕ್ಕೆ ಫೌಂಡೇಷನ್ ಹಾಕಿದ ನಂತರ ಯಾವುದೇ ಕಾರಣಕ್ಕೂ ಟಾಲ್ಕಂ ಪೌಡರ್ ಬಳಸಬೇಡಿ. ಬದಲಿಗೆ ಕಾಂಪ್ಯಾಕ್ಟ್ ಪೌಡರನ್ನು ಬಳಸಿ.
ಮ್ಯಾಟ್ ಫಿನಿಶಿಂಗ್ ಬೇಡ
ನಿಮ್ಮ ಮೇಕಪ್‌ಗೆ ಮ್ಯಾಟ್ ಫಿನಿಶಿಂಗ್ ನೀಡುವುದು ಬೇಡ. ಇದು ಮುಖ ಒಣಗಿದಂತೆ ಕಾಣಿಸಬಹುದು.
ಲಾಂಗ್ ಸ್ಟೇ ಲಿಪ್‌ಸ್ಟಿಕ್ ಬಳಕೆ ಕಡಿಮೆಯಿರಲಿ
ಇತ್ತೀಚೆಗೆ ಎಲ್ಲಾ ಸೀಸನ್‌ನಲ್ಲೂ ಸ್ಮಡ್ಜ್ ಪ್ರೂಫ್, ಕಿಸ್ ಪ್ರೂಫ್ ಲಾಂಗ್ ಸ್ಟೇ ಲಿಪ್‌ಸ್ಟಿಕ್‌ಗಳು ಟ್ರೆಂಡಿಯಾಗಿವೆ. ಇವು ಕೂಡ ವಿಂಟರ್ ಸೀಸನ್‌ನಲ್ಲಿ ಅತಿ ಹೆಚ್ಚು ಸಮಯ ಹಚ್ಚಿದಲ್ಲಿ ತುಟಿಯು ಬಿರುಕು ಮೂಡಬಹುದು. ಅದಕ್ಕಾಗಿ ಆದಷ್ಟೂ ಕ್ರೀಮ್ ಅಂಶವಿರುವಂತಹ ಲಿಪ್‌ಸ್ಟಿಕ್ ಬಳಕೆ ಮಾಡಿ.
ವಾಟರ್ ಪ್ರೂಫ್ ಐ ಮೇಕಪ್‌ಗೆ ನೋ ಹೇಳಿ
ಮಳೆಗಾಲದಲ್ಲಿದ್ದ ವಾಟರ್ ಪ್ರೂಫ್ ಐ ಮೇಕಪ್‌ಗೆ ನೋ ಹೇಳಿ. ಐ ಲೈನರ್, ಕಾಡಿಗೆ, ಐ ಶ್ಯಾಡೋ ಎಲ್ಲವೂ ಈ ಸೀಸನ್‌ಗೆ ಹೊಂದುವಂತಹದ್ದನ್ನು ಬಳಸಿ.
ಈ ಸುದ್ದಿಯನ್ನೂ ಓದಿ | Saree Blouse Fashion: ಪ್ರಯೋಗಾತ್ಮಕ ಸೀರೆ ಪ್ರಿಯರನ್ನು ಸೆಳೆದ ಕಂಟೆಂಪರರಿ ಬ್ಲೌಸ್ ಫ್ಯಾಷನ್
ವಿಂಟರ್ ಮೇಕಪ್ ಪ್ರಿಯರ ಗಮನಕ್ಕೆ
- ಮಲಗುವ ಮುನ್ನ ಮುಖದ ಮೇಕಪ್ ತೆಗೆದು ಮಲಗಿ.
- ರಾತ್ರಿ ವೇಳೆ ಕಾಡಿಗೆ ರಿಮೂವ್ ಮಾಡಿ. ಇಲ್ಲವಾದಲ್ಲಿಅಲರ್ಜಿಯಿಂಟಾಗಬಹುದು.
- ಒಂದರ ಮೇಲೊಂದು ಒಂದು ಮೇಕಪ್ ಹಚ್ಚಬೇಡಿ.
- ಮೇಕಪ್ ತೆಗೆದ ನಂತರ ಕ್ಲೆನ್ಸರ್‌ನಿಂದ ಮುಖವನ್ನು ಕ್ಲೀನ್ ಮಾಡಿ.
- ಮದುವೆ ಅಥವಾ ವಿಶೇಷ ಸಂದರ್ಭಕ್ಕೆ ಪಾರ್ಲರ್‌ನಲ್ಲಿ ವಿಂಟರ್‌ನಲ್ಲಿ ಮೇಕಪ್ ಮಾಡಿಸುವುದಾದರೆ ಮೊದಲೇ ನಿಮ್ಮ ಅಗತ್ಯತೆಗಳನ್ನು ತಿಳಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)