Wednesday, 4th December 2024

Winter Turtle Neck Fashion: ಚಳಿಗಾಲದ ಸ್ಟೈಲಿಶ್ ಲುಕ್‌ಗೆ ಬಂತು ಟರ್ಟಲ್ ನೆಕ್ ಟೀ ಶರ್ಟ್ಸ್

Winter Turtle Neck Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿಗಾಲದ ಸ್ಟೈಲಿಶ್ ಲುಕ್ ನೀಡುವ ಫ್ಯಾಷನ್‌ಗೆ ಟರ್ಟಲ್ ನೆಕ್ ಟೀ ಶರ್ಟ್‌ಗಳು (Winter Turtle Neck Fashion) ಕಾಲಿಟ್ಟಿದ್ದು, ಹುಡುಗ-ಹುಡುಗಿಯರನ್ನು ಮತ್ತಷ್ಟು ಆಕರ್ಷಕವಾಗಿಸಿವೆ. ಧರಿಸಿದಾಗ ನೋಡಲು ಸ್ಟೈಲಿಶ್ ಆಗಿ ಕಾಣಿಸುವುದರ ಜತೆಗೆ ದೇಹವನ್ನು ಬೆಚ್ಚಗಿಡುತ್ತವೆ. ಹಾಗಾಗಿ ಈ ಶೈಲಿಯ ಟೀ ಶರ್ಟ್‌ಗಳು ನಾನಾ ಲೈಟ್ ಹಾಗೂ ಡಾರ್ಕ್ ಕಲರ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಯೂನಿಸೆಕ್ಸ್ ವಿನ್ಯಾಸದವು ಕೂಡ ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಜತ್.

ಚಿತ್ರಕೃಪೆ: ಪಿಕ್ಸೆಲ್

ಲೇಯರ್ ಲುಕ್‌ಗೆ ಟರ್ಟಲ್ ನೆಕ್ ಔಟ್‌ಫಿಟ್ಸ್

ಮೊದಲಿನಿಂದಲೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಟರ್ಟಲ್ ನೆಕ್ ಟೀ ಶರ್ಟ್‌ಗಳು, ಕಾರ್ಪೋರೇಟ್ ಕ್ಷೇತ್ರದವರ ಚಾಯ್ಸ್‌ನಲ್ಲಿದ್ದವು. ಇದೀಗ ಇತರೇ ಕ್ಷೇತ್ರದ ಹುಡುಗ –ಹುಡುಗಿಯರನ್ನು ಆವರಿಸಿಕೊಂಡಿವೆ. ಧರಿಸಿದಾಗ ನೋಡಲು ಅಫಿಶಿಯಲ್ ಲುಕ್‌ನೀಡುವ ಇವು ಕೋಟ್ ಹಾಗೂ ಜಾಕೆಟ್‌ಗಳೊಂದಿಗೆ ಲೇಯರ್ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.‌

ಎಲ್ಲದಕ್ಕಿಂತ ಹೆಚ್ಚಾಗಿ ಕ್ಯಾಶುವಲ್ ಔಟ್‌ಫಿಟ್ಸ್ ಧರಿಸುವವರಿಗೆ ಇವು ಈ ಸೀಸನ್‌ಗೆ ಹೇಳಿ ಮಾಡಿಸಿದ ಔಟ್‌ಫಿಟ್ ಎನ್ನಬಹುದು. ಅಲ್ಲದೇ, ಬ್ಲೇಝರ್, ಕಾರ್ಡಿಗಾನ್ ಇಲ್ಲವೇ ಶ್ರಗ್ಸ್ ಜತೆಯಲ್ಲೂ ಧರಿಸಬಹುದು ಎನ್ನುತ್ತಾರೆ ಡಿಸೈನರ್ ರಜತ್.

ಮಿಕ್ಸ್ ಮ್ಯಾಚ್ ಫ್ಯಾಷನ್‌ಗೆ ಸಾಥ್

ಫುಲ್ ಸ್ಲೀವ್ ನೆಕ್ಲೈನ್‌ಗಳಿಂದಾಗಿ ಈ ಸೀಸನ್‌ನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುವ ಮಾರಾಟಗಾರರಾದ ನೀರಜ್ ಪ್ರಕಾರ, ಈ ಬಾರಿ ಅತಿ ಹೆಚ್ಚು ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿವೆ.

ವ್ಯಕ್ತಿತ್ವಕ್ಕೆ ತಕ್ಕಂತೆ ಟರ್ಟಲ್ ನೆಕ್ ಡ್ರೆಸ್

ಅಂದಹಾಗೆ, ಉದ್ದ ಕತ್ತು ಇರುವವರಿಗೆ ಈ ಶೈಲಿಯ ನೆಕ್‌ಲೈನ್ ಸುಂದರವಾಗಿ ಕಾಣಿಸುತ್ತವೆ. ಮಾಡೆಲ್ ಲುಕ್ ನೀಡುತ್ತವೆ. ಕತ್ತು ಚಿಕ್ಕದಾಗಿರುವವರಿಗೆ ಇವು ಸೂಟ್ ಆಗದು. ಇನ್ನು ಸೀಸನ್‌ಗೆ ತಕ್ಕಂತೆ ಶೇಡ್ಸ್ ಹಾಗೂ ಕಲರ್‌ಗಳನ್ನು ಆಯ್ಕೆ ಮಾಡಿದಲ್ಲಿ ಟ್ರೆಂಡಿಯಾಗಿಯೂ ಕಾಣಬಹುದು. ಇನ್ನು ಕ್ರಾಪ್ ಟಾಪ್‌ನವು ಕಾಲೇಜು ಹುಡುಗಿಯರಿಗೆ ಸೂಟ್ ಆಗುತ್ತವೆ. ಸ್ಲೀವ್ಲೆಸ್ ಟರ್ಟಲ್‌ ನೆಕ್‌ ಕಾರ್ಡಿಗಾನ್ ಇಲ್ಲವೇ ಬ್ಲೇಝರ್ ಜತೆ ಧರಿಸಬಹುದು. ಅಷ್ಟೇಕೆ! ಸ್ಟ್ರಾಪ್ ಡ್ರೆಸ್‌ ಅನ್ನು ಕೂಡ ಇದರ ಮೇಲೆ ಧರಿಸಿ ನಯಾ ಲುಕ್ ನೀಡಬಹುದು ಎಂದು ಸ್ಟೈಲಿಸ್ಟ್ ರಾಯ್ ಟಿಪ್ಸ್ ನೀಡುತ್ತಾರೆ.

ಪರ್ಫೆಕ್ಟ್ ಮ್ಯಾಚ್

ಟಿನೇಜ್‌ ಹುಡುಗಿಯರಿಗೆ ಹಾಗೂ ವರ್ಕಿಂಗ್‌ ವುಮೆನ್‌ಗೆ, ಕಾರ್ಪೋರೇಟ್‌ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಾಗೂ ಕ್ಯಾಶುವಲ್ ಉಡುಪನ್ನು ಚೆನ್ನಾಗಿ ಕ್ಯಾರಿ ಮಾಡುವವರಿಗೆ ಇವು ಪರ್ಫೆಕ್ಟ್ ಸೂಟ್ ಆಗುತ್ತವೆ ಎನ್ನುತ್ತಾರೆ ಡಿಸೈನರ್‌ ರಾಶಿ.

ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ

ಟರ್ಟಲ್ ನೆಕ್ ಟೀ ಶರ್ಟ್ ಧರಿಸುವವರು ಯಾವುದೇ ಆಕ್ಸೆಸರೀಸ್ ಧರಿಸುವುದು ಬೇಡ. ಆಕ್ಸೆಸರೀಸ್ ಧರಿಸಲೇ ಬೇಕಿದ್ದಲ್ಲಿ ಲಾಂಗ್‌ ಚೈನ್‌ನಂತವನ್ನು ಹಾಕಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

ಈ ಸುದ್ದಿಯನ್ನೂ ಓದಿ | Winter Puffer Jacket Fashion: ಚುಮು ಚುಮು ಚಳಿಯಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಪಫರ್ ಜಾಕೆಟ್ಸ್!

ಟರ್ಟಲ್ ನೆಕ್ ಪ್ರಿಯರಿಗೆ ಟಿಪ್ಸ್

  • ಉದ್ದ ಕತ್ತು ಉಳ್ಳವರಿಗೆ ಪರ್ಫೆಕ್ಟ್ ಔಟ್‌ಫಿಟ್.
  • ಪ್ರೊಫೆಷನಲ್ ಕ್ಷೇತ್ರಕ್ಕೆ ಇದು ಬೆಸ್ಟ್ ಔಟ್‌ಫಿಟ್.
  • ಪೋನಿಟೇಲ್ ಹೇರ್‌ಸ್ಟೈಲ್ ಮಾಡಿ.
  • ಯಾವುದೇ ಲೇಯರ್‌ ನೀಡುವ ಕೋಟ್, ಶ್ರಗ್ಸ್ ಇಲ್ಲವೇ ಬ್ಲೇಝರ್‌ ಧರಿಸಬಹುದು.

(ಲೇಖಕಿ ಫ್ಯಾಷನ್ ಪತ್ರಕರ್ತೆ)