ಕಾಳಗಿ: ತಾಲೂಕಿನ ಸಾಲಹಳ್ಳಿ ಗ್ರಾಮದ ಮುಖಂಡರು, ಯುವಕರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಅನೇಕ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ್, ಪಿ. ಟಿ ಪರಮೇಶ್ವರ್ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಸುಭಾಷ್ ರಾಠೋಡ ಹಾಗೂ ಕಾಳಗಿ-ಕೊಡ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಅಧ್ಯಕ್ಷ ದೇವೇಂದ್ರಪ್ಪ ಹೆಬ್ಬಾಳ ಸಾಲಹಳ್ಳಿ ರವರ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ದೇವೇಂದ್ರಪ್ಪ ನೈಕೋಡಿ, ಸಿದ್ದು ಪೂಜಾರಿ, ಪ್ರಭು ಕಾಳಗಿ, ಸುಬಣ್ಣ ಚೌರಿ, ನಾಗಪ್ಪ ನಾಗೂರ್, ಮಲ್ಲಿಕಾರ್ಜುನ ಪಾಟೀಲ, ಸಾಬಣ್ಣ ಕುಂಬಾರ, ಸುರೇಶ ಪವಾರ್, ಶಿವಾ ನಂದ ಮಡಿವಾಳ, ಪ್ರಭು ರಾಠೋಡ, ಶರಣಪ್ಪ ಮುಕ್ರಂಬಿ, ಥಾವರು ಪವಾರ್, ನೀಲಕಂಠ ಭೇಡಸೂರ, ಗಂಗಾಧರ ಮಲಕೂಡ, ಗೋಪಾಲ ಪವಾರ್, ಲೋಕೇಶ್ ಹುಡೇದ್, ರಾಜು ಹಂದರ್ಕಿ, ಸುಧಾಕರ್ ಪಸ್ತಾಪೂರ ರವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಮಾಜಿ ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮರಾವ್ ಟಿ. ಟಿ, ಮಹಿಮೂದ ಪಟೇಲ್ ಸಸಾರಗಾಂವ, ಬಾಬು ಹೋನಾನಾಯಕ, ರಾಜ ಗೋಪಾಲ ರೆಡ್ಡಿ, ಗಣಪತಿ ಹಾಳಕಾಯಿ, ಶರಣು ಪಾಟೀಲ, ಪ್ರಶಾಂತ್ ರಾಜಾಪುರ, ಪ್ರಭು ಭಾವಿ, ಶರಣು ಹೆಬ್ಬಾಳ, ಮಲ್ಲು ಸಾಹುಕಾರ್, ಸಂಜು ರೆಡ್ಡಿ ಅವರು ಇದ್ದರು.