Saturday, 5th October 2024

ವೈ.ಎನ್.ಹೊಸಕೋಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಮದ್ಮಕ್ಕ ಓಬಳೇಶ್ ಮತ್ತು ಉಪಾಧ್ಯಕ್ಷೆಯಾಗಿ ಫಾತಿಮಾ ಆಯ್ಕೆಯಾಗಿದ್ದಾರೆ.

ಒಟ್ಟು 32 ಸದಸ್ಯರ ಸಂಖ್ಯೆಬಲ ಇದ್ದು ಅದರಲ್ಲಿ ಜೆಡಿಎಸ್ 21 ಕಾಂಗ್ರೆಸ್ 11 ಸದಸ್ಯರು ಆಯ್ಕೆಯಾಗಿ ದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷೆ ಹುದ್ದೆಗೆ ಪೆದ್ಮಕ್ಕ ಹಾಗೂ ಉಪಾಧ್ಯಕ್ಷೆ ಹುದ್ದೆಗೆ ಫಾತಿಮಾ ನಾಮ ಪತ್ರ ಸಲ್ಲಿಸಿದರು. ಕಾಂಗ್ರೆಸ್ ವತಿಯಿಂದ ಪ್ರತಿಸ್ಪರ್ಧಿಗಳಾದ ನಾಗವೇಣಿ ಮತ್ತು ಸೌಭಾಗ್ಯ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ನ ಪದ್ಮಕ್ಕ ಹಾಗೂ ಅಫಾತಿ ತಲಾ 20 ಮತಗಳು ಪಡೆದರೆ, ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿಗಳು ತಲಾ 12 ಮತಗಳನ್ನು ಪಡೆದು ಹಿನ್ನಡೆ ಗಳಿಸಿದ್ದಾರೆ. ಅಧಿಕೃತವಾಗಿ ಅಧ್ಯಕ್ಷೆ ಯಾಗಿ ಪದ್ಮಕ್ಕ ಹಾಗೂ ಉಪಾಧ್ಯಕ್ಷೆಯಾಗಿ ಫಾತಿಮಾ ಅವರನ್ನು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ತಹಶಿಲ್ದಾರ್ ಕೆ.ಆರ್.ನಾಗರಾಜ್ ರವರು ಘೋಷಿಸಿದ್ದಾರೆ.

ಈ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ ಹಾಗೂ ನೂರಾರು ಮಂದಿ ಬೆಂಬಲಿಗರು ಇದ್ದರು.