Thursday, 12th December 2024

Yadgiri News: ಕೃಷ್ಣಾನದಿಗೆ ಏಕಾಏಕಿ ನೀರು ಬಿಡುಗಡೆ; ನಡುಗಡ್ಡೆಯಲ್ಲಿ ಸಿಲುಕಿದ್ದ ಐವರು ಕುರಿಗಾಹಿಗಳು, 200 ಕುರಿಗಳ ರಕ್ಷಣೆ

Yadgiri News

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ, ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಗಳು ಮತ್ತು ಕುರಿಗಳು ನದಿ ನೀರಿನಲ್ಲಿ ಸಿಲುಕಿಕೊಂಡಿರುವ ಘಟನೆ (Yadgiri News) ಜರುಗಿದೆ.

ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ಬನದೊಡ್ಡಿ ಗ್ರಾಮದ ಕುರಿಗಾಹಿಗಳು ಎಂದಿನಂತೆ ಸುಮಾರು 200 ಕುರಿಗಳೊಟ್ಟಿಗೆ ಮೇಯಿಸಲು ಹೋದಂತಹ ಸಂದರ್ಭದಲ್ಲಿ ಏಕಾಏಕಿ ಕೃಷ್ಣಾ ನೀರು ಸುತ್ತಲೂ ಆವರಿಸಿದೆ. ಇದರಿಂದ ಗಾಬರಿಗೊಂಡ ಕುರಿಗಾಹಿಗಳು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Rain: ನಾಳೆ ಉತ್ತರ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

ತಕ್ಷಣವೇ ಸ್ಥಳೀಯರು ತಿಂಥಣಿ ಗ್ರಾಮದ ನುರಿತ ಈಜುಪಟುಗಳ ಸಹಾಯದಿಂದ, ತೆಪ್ಪಗಳ ಮೂಲಕ ಸುಮಾರು ಎರಡುನೂರು ಕುರಿಗಳು ಮತ್ತು ಐದು ಜನ ಕುರಿಗಾಹಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.