Sunday, 16th June 2024

ನನ್ನ ರಾಜಕೀಯ ಬದುಕಿಗೆ ಮುನ್ನುಡಿ ಬರೆದ ಲಚ್ಯಾಣ ಗ್ರಾಮ: ಯಶವಂತರಾಯಗೌಡ ಪಾಟೀಲ

ಇಂಡಿ: ತಾಲೂಕಿನ ಮಹಾಜನತೆಯ ಆಶಿರ್ವಾದದ ಶಕ್ತಿಯೇ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ. ೪೦ ವರ್ಷಗಳಿಂದ ನನ್ನ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡಿದ್ದಾರೆ. ನನ್ನ ರಾಜಕೀಯ ಬದುಕಿಗೆ ಮುನ್ನುಡಿ ಬರೆದಿದ್ದು ಲಚ್ಯಾಣ ಗ್ರಾಮ.ಹೀಗಾಗಿ ನಾನು ನನ್ನ ಜೀವ ಇರುವವರೆಗೂ ಲಚ್ಯಾಣ ಹಾಗೂ ತಾಲೂಕಿನ ಮಹಾಜನತೆಯ ಋಣ ಮರೆಯುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಕಮರಿ ಮಠದಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರ ಸಾರ್ವತ್ರಿಕ ಚುನಾವಣೆ- ೨೦೨೩, ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯನ್ನು ಶ್ರೀ ಸಿದ್ದಲಿಂಗ ಮಹಾರಾಜರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಇಂದಿನ ರಾಜಕೀಯ ಹಿಂಥ ಕಲುಷಿತ ದಿನದಲ್ಲಿಯೂ ತಾಲೂಕಿನ ಜನತೆ ನನಗೆ ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಸಿದ್ದಾರೆ.ರಾಜಕಾರಣಕ್ಕೆ ಅಧ್ಯಾತ್ಮೀಕ ಸ್ಪರ್ಶ ನೀಡುವುದರ ಮೂಲಕ ತಾಲೂಕು,ನಾಡಿನ ಮಠ ಮಾನ್ಯಗಳಿಂದ ನಾನು ಆಶೀರ್ವಾದ ಪಡೆದುಕೊಂಡಿದ್ದೇನೆ. ಮೊದಲಿನಿ0ದಲೂ ನಾನು  ಚುನಾವಣೆ ಸಂದರ್ಭದಲ್ಲಿ ಮುಗಳಖೋಡ ಹಾಗೂ ಲಚ್ಯಾಣ ಮಠದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದೇನೆ. ಇಲ್ಲಿ ಪೂಜೆ ಸಲ್ಲಿಸಿ ಎಲ್ಲವು ಯಶಸ್ವಿ ಕಂಡಿದ್ದೇನೆ.

ಈ ಭಾಗದ ಜನತೆಯ ಪ್ರೀತಿ,ವಿಶ್ವಾಸ ಜೀವನದ ಕೊನೆಯವರೆಗೂ ಮರೆಯುವುದಿಲ್ಲ.ಈ ಭಾಗದ ಜನರು ನನಗೆ ಆಶೀರ್ವಾದ ಮಾಡಿದ್ದರ ಫಲವಾಗಿ ನಾನು ರಾಜಕೀಯ ಅಽಕಾರ ಹಿಡಿದಿದ್ದು,ನನ್ನ ರಾಜಕೀಯ ಅಽಕಾರದಲ್ಲಿ ಈ ಭಾಗದ ಜನರ ಭಾವನೆಗೆ ಧಕ್ಕೆ ತರುವ ಹಾಗೆ ಯಾವುದೇ ಕೆಲಸ ಮಾಡಿ ರುವುದಿಲ್ಲ.

ಈ ಹಿಂದೆ ನಾನು ಸೋಲನ್ನು ಕಂಡಿದ್ದೇನೆ. ಆ ಸೋಲು ವ್ಯಕ್ತಿಯನ್ನು ಪರಿಪೂರ್ಣತೆಯನ್ನು ಮಾಡಿದೆ. ಸೋಲಿನಲ್ಲಿ ಸೂಕ್ಷೆ÷್ಮತೆಯನ್ನು ಗ್ರಹಿಸಿ ಯಶಸ್ವಿ ಕಂಡಿದ್ದೇನೆ. ತಪ್ಪು ಮಾಡುವುದು ಮನುಷ್ಯ ಧರ್ಮ. ಹೆಚ್ಚು ತಪ್ಪುಗಳನ್ನು ಮಾಡದಂತೆ ಸೂಕ್ಷ÷್ಮತೆಯಲ್ಲಿ ರಾಜಕಾರಣ ಮಾಡಿದ ಸಮಾಧಾನ ನನಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಹಿಡಿಯುವ ವಾತಾವರಣ ನಿರ್ಮಾಣವಾಗಿದೆ. ಇಂಡಿ ಕ್ಷೇತ್ರಕ್ಕೆ ಯಶವಂತರಾಯಗೌಡ ಪಾಟೀಲರು ಚುನಾವಣೆಗೆ ನಿಂತಿಲ್ಲ.ನಾವು ನಿಂತಿದ್ದೇವೆ ಎನ್ನುವ ರೀತಿಯಲ್ಲಿ ಕಾರ್ಯಕರ್ತರು,ಮುಖಂಡರು ಪಕ್ಷ ಗೆಲುವಿಗೆ ಶ್ರಮಿಸುತ್ತಿರುವುದು ಅಭಿನಂದನೀಯ.

ಗ್ರಾಮ ಮಟ್ಟದಲ್ಲಿ ತಮ್ಮ ಶಕ್ತಿಮಿರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಜನತೆಯಲ್ಲಿ ಮನವಿ ಮಾಡಿಕೊಳ್ಳುವುದರ ಮೂಲಕ ಶ್ರಮಿಸಬೇಕು ಎಂದು ಹೇಳಿದರು.

*

ಚುನಾವಣೆಯ ಸಂದರ್ಭದಲ್ಲಿ ನಾನು ಮಾತುಕೊಟ್ಟಂತೆ ನಡೆದುಕೊಂಡಿದ್ದೇನೆ.ಬದ್ದತೆಯ ರಾಜಕಾರಣ ಮಾಡಿದ್ದೇನೆ. ಈ ಬಾರಿ ೨೦೨೩ ಚುನಾವಣೆ ಯಲ್ಲಿ ತಮ್ಮೇಲ್ಲರ ಆಶೀರ್ವಾದದಿಂದ ಆಯ್ಕೆಯಾದರೆ ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು, ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಮೂಲಕ ಈ ಭಾಗದಲ್ಲಿನ ಕೆರೆ ತುಂಬಿಸಿ,ನೀರಾವರಿಯನ್ನಾಗಿ ಮಾಡುವುದು, ಯುವಕರಿಗೆ ಉದ್ಯೋಗ ದೊರೆಯಬೇಕು ಎನ್ನುವ ಉದ್ದೇಶದಿಂದ ಕೈಗಾರಿಕೊದ್ಯಮ ಈ ಭಾಗಕ್ಕೆ ತರುವ ಗುರಿ ಹೊಂದಲಾಗಿದೆ. ಈ ಎಲ್ಲ ಗುರಿಗಳು ೨೦೨೮ ಒಳಗಾಗಿ ಆಗದಿದ್ದರೆ ಮುಂಬರುವ ೨೦೨೮ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಾನೆಂದಿಗೂ ಕುಟುಂಬ ರಾಜಕಾರಣ ಮಾಡುವುದಿಲ್ಲ.ಮತಕ್ಷೇತ್ರದಲ್ಲಿ ನನ್ನ ಮಗ ಕಾರ್ಯಕ್ರಮಗಳಿಗೆ ಹೋಗುತ್ತಿರುವುದರಿಂದ ಶಾಸಕರು ತಮ್ಮ ಮಗನಿಗೆ ರಾಜಕಾರಣಕ್ಕೆ ತರುತ್ತಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಕುಟುಂಬದ ಯಾರೂ ರಾಜ ಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂಲತ ಕಾಂಗ್ರೆಸ್ಸಿನಿ0ದ ಬಂದವನು.ನನ್ನ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ಸಿನಲ್ಲಿಯೇ ಇರುವೆ.ಈ ಭಾಗದ ಜನರು ಜಾತಿ,ಪಕ್ಷ,ಪ್ರದೇಶ ಮೀರಿ,ಸಿದ್ದಾಂತದ ರಾಜಕಾರಣ ಮಾಡುತ್ತಾರೆ. ಇಲ್ಲಿ ಎನೆ ನಡೆದರೂ ಸಿದ್ದಾಂತ ರಾಜಕಾರಣ ನಡೆಯುತ್ತದೆ.ಜಾತಿ,ಧರ್ಮ ರಾಜಕಾರಣ ನಡೆಯುವುದಿಲ್ಲ ಎಂದು ಹೇಳಿದರು.

ಎಂ.ಆರ್.ಪಾಟೀಲ,ಶಿವುಸಾಹುಕಾರ ನಿಂಬಾಳ,ಗಿರೀಶ ಚಾಂದಕವಟೆ, ಜಟ್ಟೆಪ್ಪ ರವಳಿ, ಇಲಿಯಾಸ ಬೊರಾಮಣಿ, ಜಾವೀದ ಮೋಮಿನ,ನಿರ್ಮಲಾ ತಳಕೇರಿ, ಅವಿನಾಶ ಬಗಲಿ, ಮಹೇಶ ಹೊನ್ನಬಿಂದಗಿ, ಗಂಗಾಧರ ನಾಟಿಕಾರ, ಬಿ.ಎಂ.ಕೊರೆ, ಮಂಜುನಾಥ ಕಾಮಗೊಂಡ, ಮುತ್ತಪ್ಪ ಪೊತೆ, ಪ್ರಶಾಂತ ಕಾಳೆ,ಸೋಮು ಮ್ಯಾಕೇರಿ,ಸಂಜು ಸವ್ಹಾಣ,ಅಪ್ಪು ಕಲ್ಲೂರ,ಕಲ್ಲನಗೌಡ ಬಿರಾದಾರ, ಅಣ್ಣಪ್ಪ ಬಿದರಕೋಟಿ,ಶೇಖರ ನಾಯಕ,ಧರ್ಮು ವಾಲಿಕಾರ, ಸಂತೋಷ ಪರಸೆನವರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

error: Content is protected !!