Sunday, 15th December 2024

ಗೆಲುವಿನ ವಿಶ್ವಾಸದಲ್ಲಿ ಯೋಗರಮೇಶ್

ಅರಕಲಗೂಡು: ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯ ಬಿಸಿ ಜೋರಾಗಿದೆ. ಜೆಡಿಎಸ್‌ ನಲ್ಲಿ ಗೆದ್ದು ಶಾಸಕರಾಗಿದ್ದ ಎ.ಟಿ.ರಾಮ ಸ್ವಾಮಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.

ಎ.ಮಂಜು ಬಿಜೆಪಿ ತೊರೆದು ಜೆಡಿಎಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಅಲ್ಲಿ ಬಂಡಾಯವೂ ತಲೆದೋರಿದೆ. ಇದೆಲ್ಲವೂ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಹೆಚ್.ಯೋಗರಮೇಶ್ ಬಿಜೆಪಿಯಿಂದ ಕಣ ಕ್ಕಿಳಿದಿದ್ದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು ಬಿಜೆಪಿಗೆ ಬಲ ತುಂಬಿವೆ. ಯಡಿಯೂರಪ್ಪ ಅವರ ಯೋಜನೆಗಳೂ ಜನರನ್ನು ತಲುಪಿವೆ. ಎ.ಟಿ.ರಾಮಸ್ವಾಮಿ ಅವರು ಬಿಜೆಪಿಗೆ ಬಂದ ಮೇಲೆ ಈ ಕ್ಷೇತ್ರದಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಿದೆ. ಇದೆಲ್ಲವೂ ನನಗೆ ಭೀಮಬಲ ತಂದಿದೆ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಕಳೆಗುಂದಿದೆ. ಆ ಪಕ್ಷದಲ್ಲಿ ಬಂಡಾಯವೂ ಎದ್ದು ಕಾಣುತ್ತಿದೆ. ಇದೆಲ್ಲವೂ ಬಿಜೆಪಿಯ ಗೆಲುವಿಗೆ ಪೂರಕವಾಗಿದೆ.

ಯೋಗ ರಮೇಶ್ : ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇತ್ತು. ಈಗ ಎ.ಟಿ.ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆ ಯಾದ ಮೇಲೆ ಬಿಜೆಪಿ ಪ್ರಬಲವಾಗಿದೆ. ಕಾಂಗ್ರೆಸ್ ಮತ್ತು ಬಂಡಾಯ ಅಭ್ಯರ್ಥಿಗಳ ನಡುವೆ ಮತಗಳು ಹಂಚಿ ಹೋಗುತ್ತವೆ. ಇನ್ನು ಮಂಜು ದೇವೇಗೌಡರ ಕುಟುಂಬವನ್ನು ಟೀಕಿಸಿದವರು.

ಈಗ ಮೈತ್ರಿ ಮಾಡಿಕೊಂಡು ಜೆಡಿಎಸ್‌ಗೆ ಬಂದಿದ್ದಾರೆ. ಮಂಜು ಗೆದ್ದು ಪಕ್ಷಕ್ಕೆ ನಿಷ್ಠೆ ತೋರಿದವರೇ ಅಲ್ಲ. ಗೆದ್ದ ಪಕ್ಷವನ್ನೇ ತೊರೆದು ಬೇರೆ ಪಕ್ಷಕ್ಕೆ ಹಾರಿದವರು. ಅವರು ಪಕ್ಷಾಂತರದಲ್ಲಿ ಪಿಹೆಚ್‌ಡಿ ಮಾಡಿದ್ದಾರೆ. ಹಾಗಿದ್ದರೆ ಜೆಡಿಎಸ್ ಮತದಾರರು ಅವರಿಗೆ ಮತ ನೀಡಲ್ಲ. ಆ ಎಲ್ಲಾ ಮತಗಳು ಈ ಬಾರಿ ಬಿಜೆಪಿಗೆ ಕ್ರೋಢೀಕರಣವಾಗುತ್ತದೆ.