Thursday, 12th December 2024

Younes Zarou: ರೀಲ್ಸ್‌ ತಂದ ಆಪತ್ತು! ಬೆಂಗಳೂರಿನಲ್ಲಿ ಇನ್‌ಸ್ಟಾಗ್ರಾಂ ಸ್ಟಾರ್ ಯೂನಿಸ್ ಝರೂರಾ ಅರೆಸ್ಟ್‌

Younes Zarou

ಬೆಂಗಳೂರು: ದೇಶದಲ್ಲಿಈ ಏನಿದ್ದರೂ ರೀಲ್ಸ್‌ ಹವಾ..ಸೋಶಿಯಲ್‌ ಮೀಡಿಯಾದಲ್ಲಿ ಹೀರೋ ಆಗ್ಬೇಕು ಅಂತಾ ಜನ ಎಂಥಾ ರಿಸ್ಕ್‌ ತೆಗಿದುಕೊಳ್ಳೋಕು ರೆಡಿಯಾಗಿರ್ತಾರೆ. ಕ್ಷಣ ಮಾತ್ರದಲ್ಲೇ ಜಿರೋ ಆಗಿದ್ದವನನ್ನು ಹೀರೋವನ್ನಾಗಿ ಮಾಡು ತಾಕತ್ತು ರೀಲ್ಸ್‌ಗಿದೆ. ಅದೇ ರೀತಿ ಹೀರೊವನ್ನಾಗಿ ಮಾಡುವ ರೀಲ್ಸ್‌ನಿಂದಲೇ ಅದೆಷ್ಟೋ ಮಂದಿ ಅಪಾಯಕ್ಕೀಡಾಗಿದ್ದೂ ಇದೆ. ಇದೀಗ ಅಂತಹದ್ದೇ ಒಂದು ಘಟನೆ ನಮ್ಮ ರಾಜ್ಯದಲ್ಲಿ ನಡೆದಿದೆ. ಇನ್​ಸ್ಟಾಗ್ರಾಮ್ ಸ್ಟಾರ್, ಜರ್ಮನ್‌ ಕಂಟೆಂಟ್‌ ಕ್ರಿಯೇಟರ್‌ ಯೂನಿಸ್ ಝರೂರಾ (Younes Zarou) ಎಂಬಾತನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯಾರು ಈ ಯೂನಿಸ್ ಝರೂರಾ?

ಸೋಶಿಯಲ್‌ ಮೀಡಿಯಾದ ಪರಿಚಯ ಇರೋರಿಗೆ ಈತನ ಹೆಸರು ಗೊತ್ತಿಲ್ಲದಿದ್ದೂ ಮುಖಪರಿಚಯ ಅಂತು ಇದ್ದೇ ಇರುತ್ತದೆ. ಯೂನಿಸ್ ಝರೂರಾ ಬೇರೆ ಬೇರೆ ದೇಶಗಳಿಗ ತೆರಳಿ ಸರ್ಪ್ರೈಸ್ ಗಿಫ್ಟ್​ಗಳನ್ನ ಕೊಡುತ್ತಿದ್ದ. ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಸರಿಯಾದ ಉತ್ತರ ನೀಡಿದವರಿಗೆ ಬೆಲೆ ಬಾಳುವ ಗಿಫ್ಟ್‌ಗಳನ್ನು ನೀಡಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಿದ್ದ. ಅದರಂತೆ ಬೆಂಗಳೂರಿನ ಎಂಜಿ ರಸ್ತೆಗೂ ಈತ ಬಂದಿದ್ದ. ಸರಿಯಾದ ಉತ್ತರ ನೀಡಿದವರಿಗೆ ದುಬಾರಿ ಬೆಲೆಯ ಐಫೋನ್​ನನ್ನು ಗಿಫ್ಟ್​ ಕೊಡುತ್ತಿದ್ದ. ಅಷ್ಟೇ ಅಲ್ಲದೆ ಎಂಜಿ ರಸ್ತೆಯಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ ಫೋಟೋ ಅನಾವರಣ ಮಾಡಿದ್ದ.

ಯೂನಿಸ್ ಝರೂರಾ ಬಂಧನ ಏಕೆ?

ಈತ ಬಂದ ವಿಚಾರ ತಿಳಿದು ಇತನ ಅಭಿಮಾನಿಗಳು ನಡು ರಸ್ತೆಯಲ್ಲಿಯೇ ಗುಂಪು ಸೇರಿದ ಹಿನ್ನಲೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಅನುಮತಿ ಪಡೆಯದೆ ಜನರ ಗುಂಪು ಸೇರಿಸಿದ್ದ ಹಿನ್ನಲೆ ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಯ್ಸಳ ವಾಹನದ ಒಳಗೆ ಕೂಡ ವೀಡಿಯೋ ಮಾಡಿದ್ದ ಇತ, ಸ್ಟೇಷನ್ ಒಳಗೆ ಫೋಟೋ ಹಾಕಿ ತೊಂದರೆಯಲ್ಲಿದ್ದಿನಿ ಎಂದು ಮೆಸೇಜ್ ಕಳಿಸಿದ್ದ. ಸದ್ಯ ವಾರ್ನ್ ಮಾಡಿ ಪೊಲೀಸರು ಬಿಟ್ಟು ಕಳಿಸಿದ್ದಾರೆ.

ಟಿಕ್‌ಟಾಕ್‌ ಭಾರತದಲ್ಲಿ ಬ್ಯಾನ್‌ ಆದ್ಮೇಲೆ ಈಗ ಇನ್‌ಸ್ಟಾ ರೀಲ್ಸ್‌‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರೀಲ್ಸ್‌ ಹೆಚ್ಚಿನ ಲೈಕ್ಸ್‌, ವೀವ್ಸ್‌ ಬರಲಿ ಅಂತ ರೀಲ್ಸ್ ಸ್ಟಾರ್‌ಗಳು ಏನೇನೋ ಟ್ರೈ ಮಾಡ್ತಾರೆ. ಪ್ರತಿದಿನ ಈ ರೀಲ್ಸ್‌ನಿಂದ ಹೊಸ ಹೊಸ ಪ್ರತಿಭೆಗಳು ಹೊರಬರುತ್ತಿವೆ. ಹೀಗೆ ಯುವಕನೊಬ್ಬ ಭಾಯ್‌ ಭಾಯ್ ಎನಿಸಿಕೊಂಡು ಶೋಕಿ ಮಾಡಲು ಹೋಗಿ ಜೈಲು ಸೇರಿದ್ದಾನೆ. ರೀಲ್ಸ್‌‌ನಲ್ಲಿ ಶೋ ಕೊಡುತ್ತಿದ್ದ ಮತ್ತೊಬ್ಬ ಸೋಷಿಯಲ್‌ ಮೀಡಿಯಾ ಸ್ಟಾರ್‌ ಬೆಂಗಳೂರಿನಲ್ಲಿ ಕಳೆದ ತಿಂಗಳು ಅರೆಸ್ಟ್ ಆಗಿದ್ದ.

ಬೀದಿ ಬೀದಿಯಲ್ಲಿ ಈತನ ಗನ್‌ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು. ಹೀಗೆ ಸಿಲಿಕಾನ್​ ಸಿಟಿಯಲ್ಲಿ ಶೋ ಕೊಡಲು ಹೋಗಿದ್ದ ರೀಲ್ಸ್ ಸ್ಟಾರ್ ಈಗ ಜೈಲು ಸೇರಿದ್ದಾನೆ. ಅರುಣ್ ಕಟಾರೆ ಎಂಬಾತನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಟಿಕ್​ಟಾಕ್​ ರೀಲ್ಸ್​​ ಸ್ಟಾರ್​​ ಸೋನು ಗೌಡ ಕಾರು ಅಪಘಾತ