Saturday, 14th December 2024

ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಾರಾಮಾರಿ: ಯುವಕನಿಗೆ ಗಂಭೀರ ಗಾಯ

ಮೂಡಿಗೆರೆ: ಎರಡು ಗುಂಪುಗಳ ನಡುವೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಒಳಭಾಗದಲ್ಲಿ ಮಾರಾಮಾರಿ ನಡೆದು ಬಸ್ ನಿಲ್ದಾಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಗಲಾಟೆಯಲ್ಲಿ ಒಬ್ಬ ಯುವಕನಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸ ಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಬಸ್ ಸ್ಟ್ಯಾಂಡ್ ನಲ್ಲಿ ಇದ್ದ ಸಿ ಸಿ ಕ್ಯಾಮೆರಾಗಳು ನಿದ್ದೆಗೆ ಜಾರಿದ್ದು ವಿಪರ್ಯಾಸ. ಇತ್ತೀಚೆಗೆ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಮತ್ತು ಮಹಿಳೆಯರ ಭದ್ರತೆ ಮರೀಚಿಕೆಯಾಗಿದೆ.

ಘೋರ ದುರಂತ ನಡೆಯುವ ಮುನ್ನ ಸಿ ಸಿ ಕ್ಯಾಮೆರಾವನ್ನು ದುರಸ್ತಿಗೊಳಿಸಬೇಕು ಹಾಗೂ ಪುಂಡರ ಹಾವಳಿ ನಿಯಂತ್ರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.