ಬಿಬಿಎಂಪಿ ಮಾತುಕತೆ: ಬೆಲೆ ನಿಗದಿಯಲ್ಲಿ ಮೂಡದ ಒಮ್ಮತ ಕೇಂದ್ರೀಕೃತ ಅಡುಗೆ ಮನೆಯ ಲೆಕ್ಕಾಚಾರದಲ್ಲಿರುವ ಇಸ್ಕಾನ್ ಬೆಂಗಳೂರು: ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಜವಾಬ್ದಾರಿಯನ್ನು ಇಸ್ಕಾನ್ ಹೆಗಲಿಗೆ ಹಾಕಲು ಬಿಬಿಎಂಪಿ ಯೋಚಿಸಿದ್ದು, ಈ ಬಹುದೊಡ್ಡ ಜವಾಬ್ದಾರಿ ಒಪ್ಪಿಕೊಳ್ಳಬೇಕೇ? ಬೇಡವೇ? ಎನ್ನುವ ಚಿಂತನೆ ಯಲ್ಲಿ ಇಸ್ಕಾನ್ ಆಡಳಿತ ಮಂಡಳಿಯಿದೆ ಎನ್ನಲಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಿಸಲು ಪಾಲಿಕೆ ಬಜೆಟನಲ್ಲಿ ೬೦ ಕೋಟಿ ರು. ಮೀಸಲಿಟ್ಟಿದೆ. ಈ ನಡುವೆ ಕ್ಯಾಂಟೀನ್ ನಿರ್ವಹಣೆಯ ಸಂಬಂಧ ಪಾಲಿಕೆ ಅಽಕಾರಿಗಳು ಮತ್ತು ಇಸ್ಕಾನ್ ದೇವಸ್ಥಾನದ […]