ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸರಾಗವಾಗಿ ಆಗುತ್ತದೆಯೇ, ಖಂಡಿತಾ ಇಲ್ಲ. ಅಲ್ಲಿರುವ ಸಿಬ್ಬಂದಿಗಳಿಗೆ ಕೈ ಬಿಸಿ ಮಾಡಿದರೆ ಮಾತ್ರ, ನಮ್ಮ ಕೆಲಸ ಆಗುವುದು ಎಂಬ ಮಾತು ಇಂದೂ ಇದೆ. ಹಿಂದಿನಿಂದಲೂ ಕೇಳಿಬರುತ್ತಿದೆ. ಹೀಗಾದರೆ ಸಾಮಾನ್ಯರ ಸ್ಥಿತಿ ಏನು ಎಂಬ ಪ್ರಶ್ನೆ ಕಾಡುತ್ತದೆ. ಈ ಮಾತಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಆಕ್ಟ್ 1978 ಚಿತ್ರ ತೆರೆಗೆ ಬರುತ್ತಿದೆ. ಶೀರ್ಷಿಕೆ ಕೇಳಿದಾಕ್ಷಣ ಇದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಹೇಳುವ ಚಿತ್ರ ಎನ್ನುವುದು ಖಚಿತವಾಗುತ್ತದೆ. ಹಾಗಾದರೆ 1978ರ ಕಾಯ್ದೆಯಲ್ಲಿ ಅಂತಹ ಮಹತ್ವದ […]