ನವದೆಹಲಿ: ಕೀಟನಾಶಕಗಳನ್ನು ಸಿಂಪಡಿಸಲು ಅಥವಾ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ಉದ್ದೇಶದ 100 ಡ್ರೋನ್ಗಳಿಗೆ ವಿವಿಧ ನಗರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಕೃಷಿ ಕ್ಷೇತ್ರಕ್ಕೆ ‘ಕಿಸಾನ್ ಡ್ರೋನ್’ಗಳನ್ನು ಪರಿಚಯಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್(2022)ನಲ್ಲಿ ಘೋಷಿಸಿದ್ದರು. ಮಾನೇಸರ್ನಲ್ಲಿ ಆಯೋಜಿಸಲಾದ ವರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಈಗಾಗಲೇ ಡ್ರೋನ್ಗಳನ್ನು ಬಳಸುತ್ತಿರುವ ವಿವಿಧ ಕ್ಷೇತ್ರಗಳನ್ನು ಭಾಷಣದಲ್ಲಿ ಉಲ್ಲೇಖಿಸಿದರು. ‘ಡ್ರೋನ್ಗಳ ಮೂಲಕ ರಸಗೊಬ್ಬರಗಳ ಸಿಂಪಡಣೆ ಸಹ ಮಾಡಲಾಗುತ್ತಿದೆ. ‘ಕಿಸಾನ್ ಡ್ರೋನ್ಗಳು’ ಹೊಸ ಯುಗದ ಕ್ರಾಂತಿಯಾಗಲಿವೆ. […]