ಹೈದರಾಬಾದ್: ಟಾಲಿವುಡ್ ಚಿತ್ರರಂಗದ ಕ್ಯೂಟ್ ಜೋಡಿಗಳಾದ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್ ಹಂತಕ್ಕೆ ತಲುಪಿದೆ. ಆ ಬಳಿಕ ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ. ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದರು. ಮದುವೆಯ ಬಳಿಕ ಯಾವುದೇ ಪ್ರವಾಸ ಕೈಗೊಂಡರು ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಹೋಗುತ್ತಿದ್ದರು. ಆದರೆ, ಸಮಂತಾ ಒಂಟಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಕೌಟುಂಬಿಕ ನ್ಯಾಯಾಲಯ […]