Viral Video: ಗುಂಟೂರು ಎಸ್ಪಿ ಎಸ್.ಸತೀಶ್ ಕುಮಾರ್ ಅವರ ಸೂಚನೆಯಂತೆ ಆಂಧ್ರಪ್ರದೇಶದ ಗುಂಟೂರಿನ ಪೊಲೀಸರು ಸೋಮವಾರ ನಲ್ಲ ಚೆರುವು ಡಂಪಿಂಗ್ ಯಾರ್ಡ್‌ನಲ್ಲಿ ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಸಾಲಾಗಿ ಇಟ್ಟಿದ್ದರು. ಬರೋಬ್ಬರಿ ₹ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಾಟಲಿಗಳನ್ನು ವಿಧಾನಸಭಾ ಚುನಾವಣೆ ವೇಳೆ ವಶಪಡಿಸಿಕೊಳ್ಳಲಾಗಿತ್ತು.