ನವದೆಹಲಿ: ಸಿಖ್ ವಿರೋಧಿ(1984) ಮತ್ತು ಗೋಧ್ರಾ ದಂಗೆ(2002) ಕುರಿತು ತನಿಖೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಗಿರೀಶ ಠಾಕೂರಲಾಲ್ ನಾನಾವತಿ (86) ಅವರು ಶನಿವಾರ ಹೃದಯ ವೈಫಲ್ಯದಿಂದ ಗುಜರಾತಿನಲ್ಲಿ ನಿಧನರಾದರು. ನಾನಾವತಿ 1958,ಫೆ.11ರಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. 1979,ಜು.19ರಂದು ಗುಜರಾತ ಉಚ್ಚ ನ್ಯಾಯಾಲಯದ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು,1994,ಜ.31ರಂದು ಒಡಿಸಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕ ಗೊಂಡಿದ್ದರು. 1994,ಸೆ.28ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆ ಗೊಂಡಿದ್ದರು. 1995,ಮಾ.6ರಂದು […]