ಇಟಾನಗರ: ಏ.19ರಂದು ಅರುಣಾಚಲ ಪ್ರದೇಶದಲ್ಲಿ ಏಕಕಾಲಕ್ಕೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ನಡೆದ ಮತದಾನದ ಸಂದರ್ಭ ಎವಿಎಂಗೆ ಹಾನಿ ಮತ್ತು ಹಿಂಸಾಚಾರ ವರದಿಯಾಗಿದ್ದ 8 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ. 8 ಮತಗಟ್ಟೆಗಳಲ್ಲಿ ನಡೆದಿರುವ ಮತದಾನವನ್ನು ಅನೂರ್ಜಿತಗೊಳಿಸಿರುವ ಮುಖ್ಯ ಚುನಾವಣಾ ಅಧಿಕಾರಿಯು, ಏ.26ರಂದು ಬೆಳಿಗ್ಗೆ 6ರಿಂದ 2 ಗಂಟೆವರೆಗೆ ಮರುಮತದಾನಕ್ಕೆ ಆದೇಶಿಸಿದ್ದಾರೆ ಎಂದು ಉಪ ಮುಖ್ಯ ಚುನಾವಣಾ ಅಧಿಕಾರಿ ಲಿಕೆನ್ ಕೊಯು ತಿಳಿಸಿದ್ದಾರೆ. ಪೂರ್ವ ಕಮೆಂಗ್ ಜಿಲ್ಲೆಯ ಬಮೆಂಗ್ ವಿಧಾನಸಭಾ […]