Sunday, 15th December 2024

#AnandBhonsle

ಗಾಯಕಿ ಆಶಾ ಭೋಸ್ಲೆ ಪುತ್ರ ಆಸ್ಪತ್ರೆಗೆ ದಾಖಲು

ಮುಂಬೈ: ಗಾಯಕಿ ಆಶಾ ಭೋಸ್ಲೆ ಅವರ ಪುತ್ರ ಆನಂದ್‌ ಭೋಸ್ಲೆ ದುಬೈನಲ್ಲಿ ಆಸ್ಪತ್ರೆಗೆ ದಾಖಲಾಗಿ ದ್ದಾರೆಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಆನಂದ್‌ ಭೋಸ್ಲೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ನೆಲಕ್ಕೆ ಬಿದ್ದ ಪರಿಣಾಮ ಆನಂದ್‌ ಅವರಿಗೆ ಗಾಯಗಳಾಗಿವೆ ಎನ್ನಲಾಗಿದ್ದು, ಚಿಕಿತ್ಸೆ ಬಳಿಕ ಇದೀಗ ಚೇತರಿಸಿಕೊಂಡಿರುವ ಅವರನ್ನು ವಾರ್ಡ್‌ ಗೆ ಶಿಫ್ಟ್‌ ಮಾಡಲಾಗಿದೆ ಎನ್ನಲಾಗಿದೆ. ಆಶಾ ಭೋಸ್ಲೆಯವರೂ ಪುತ್ರನೊಂದಿಗೆ ದುಬೈನಲ್ಲಿದ್ದಾರೆ. ಇದೀಗ ಆನಂದ್‌ ಭೋಸ್ಲೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಮುಂದೆ ಓದಿ