ಅಹಮದಾಬಾದ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿವಿ ದೋಷಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ(95) ಅವರು ಮಂಗಳವಾರ ಅಹಮದಾಬಾದ್ನಲ್ಲಿ ನಿಧನರಾಗಿದ್ದಾರೆ. ಆರ್ಕಿಟೆಕ್ಚರ್ ಡೈಜೆಸ್ಟ್ ಆಫ್ ಇಂಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ದೋಷಿ ಅವರಿಗೆ ಸಂತಾಪ ಸೂಚಿಸಿದೆ. “ರೂಪ ಮತ್ತು ಬೆಳಕಿನ ಮಾಸ್ಟರ್ ವೀಲ್ಡರ್ ಆಗಿದ್ದ ದೋಷಿ ಅವರು ಅಳಿಸಲಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಒಬ್ಬ ಪ್ರೀತಿಯ ಪತಿ, ತಂದೆ, ಅಜ್ಜ ಮತ್ತು ದೇಶದ ಜನರಿಗೆ ನಿಜವಾದ ಸ್ಫೂರ್ತಿ” ಆಗಿದ್ದರು […]