ನವದೆಹಲಿ: ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ಜ.6 ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು, ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣನಲ್ಲಿ ಡಿ.22ರಂದು ಭಾರತೀಯ ವಾಯುಪಡೆಯ ಏರ್‍ಬಸ್ ಎ320 ಅನ್ನು ಇತ್ತೀಚೆಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದು, ಮುಂದಿನ ವರ್ಷ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಮುಂಚಿತವಾಗಿ ವಿಮಾನ ಪ್ರಯಾಣದ ಕೇಂದ್ರವಾಗಲು ಸಜ್ಜಾಗುತ್ತಿರುವಂತೆ ಅಯೋಧ್ಯಾ ಹೊಸ ಯುಗಕ್ಕೆ ನಾಂದಿ ಹಾಡಿದೆ. ಏರ್‍ಲೈನ್ಸ್ ಕಂಪನಿ ಇಂಡಿಗೋ ದೆಹಲಿ, […]