ನವದೆಹಲಿ: ಜನವರಿ 22 ರಂದು ಅಯೋಧ್ಯೆಗೆ ಬರಬೇಡಿ. ನಿಮಗೆ ಹತ್ತಿರವಿರುವ ದೇವಸ್ಥಾನದಲ್ಲಿ ಸಂಭ್ರಮ ಆಚರಿಸಿ ಎಂದು ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಗರ್ಭಗುಡಿ ಸಿದ್ಧವಾಗಿದೆ, ಹಾಗೆಯೇ ವಿಗ್ರಹವೂ ಸಿದ್ಧವಾಗಿದೆ. ಆದರೆ, ಇಡೀ ದೇವಾಲಯ ಪೂರ್ಣಗೊಳ್ಳಬೇಕಾದರೆ ಇನ್ನೂ ಎರಡು ವರ್ಷ ಬೇಕಾಗಬಹುದು. ಹಲವು ಕೆಲಸಗಳು (ದೇವಾಲಯದಲ್ಲಿ) ಇನ್ನೂ ಉಳಿದಿವೆ. ನಿರ್ಮಾಣವು ಇನ್ನೂ ಎರಡು ವರ್ಷಗಳವರೆಗೆ ಮುಂದುವರಿಯಬಹುದು ಎಂದು ಹೇಳಿದರು. ವಿವಿಧ ರಾಜ್ಯಗಳ ಜನರು ಅಯೋಧ್ಯೆಗೆ ಭೇಟಿ ನೀಡಲು ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಆದರೆ, ರಾಯ್ ಅವರು ಯಾತ್ರಾರ್ಥಿಗಳಿಗೆ […]